

ಕಾಸರಗೋಡು: ಬೋವಿಕ್ಕಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ತಂಡವೊಂದು ಕೊಠಡಿಯೊಳಗಿದ್ದ 200ರಷ್ಟು ಪಠ್ಯಪುಸ್ತಕ ಹಾಗೂ ಇತರ ಸಾಮಗ್ರಿಗಳನ್ನು ನಾಶಗೊಳಿಸಿದೆ. ಶಾಲೆ ಕೊಠಡಿ ಬಾಗಿಲು ತೆರೆದಾಗ ಶಾಲೆಯ ಪ್ರಿ ಪ್ರೈಮರಿ ವಿಭಾಗದ ಕೊಠಡಿಯಲ್ಲಿದ್ದ ಪುಸ್ತಕಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಕಿಟಿಕಿ ಬಾಗಿಲು ತೆರೆದು, ಕೊಠಡಿಯೊಳಗೆ ಬೆಂಕಿ ಹಚ್ಚಿರಬೇಕೆಂದು ಸಂಶಯಿಸಲಾಗಿದೆ. ಕೊಠಡಿಯೊಳಗಿನ ಪೀಠೋಪಕರಣಗಳಿಗೂ ಹಾನಿಯುಂಟಾಗಿದೆ. ಕಿಡಿಗೇಡಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಡಿವೈಎಫ್‌ಐ ಪೊಲೀಸರನ್ನು ಆಗ್ರಹಿಸಿದೆ.