ಮಾವು-ಹಲಸು ಮೇಳದಲ್ಲಿ ಸಾವಯವ ಕೃಷಿಕರಿಗೆ ಸನ್ಮಾನ

mng--2 July Kalkura sanmana
Published on

ಮಂಗಳೂರು: ಕಲ್ಕೂರ ಪ್ರತಿಷ್ಠಾನವು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಕದ್ರಿ ಕಂಬಳದ ’ಮಂಜುಪ್ರಾಸಾದ’ ದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾವು-ಹಲಸು ಮೇಳದಲ್ಲಿ ಸಾವಯವ ಕೃಷಿಕರನ್ನು ಸನ್ಮಾನಿಸಲಾಯಿತು.


ಬೆಂಗಳೂರು ಗ್ರಾಮಾಂತರದ ತೂಬುಕೆರೆಯ ಹಲಸು,ಮಾವು ಬೆಳೆಗಾರ ಮುನಿ ರಾಜು, ಅರಸೀಕೆರೆಯ ಮಾವು ಹಾಗೂ ಸಾವಯವ ದಿನಸಿ ಬೆಳೆಗಾರ ರಘು, ಮಂಗಳೂರು ಮೂಡುಶೆಡ್ಡೆಯ ಹಲಸಿನ ಹಪ್ಪಳ ತಯಾರಕರಾದ ಲಕ್ಷ್ಮೀಆಚಾರ್ಯ ರನ್ನು ಸನ್ಮಾನಿಸಲಾಯಿತು.


ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ವಿಜ್ಞಾನಿ ಪ್ರಾಣಿ ಪಕ್ಷಿ ಸಂಕುಲಗಳ ಸಂಶೋಧಕ ಪ್ರೊ.ಎನ್.ಎ.ಮಧ್ಯಸ್ಥ, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ನಂದಳಿಕೆ ಬಾಲಚಂದ್ರ ರಾವ್, ಚಂದ್ರಶೇಖರ ಮಯ್ಯ, ಪತ್ತುಮುಡಿ ಸೂರ್ಯನಾರಾಯಣ ರಾವ್, ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ, ವಿನೋದಾ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು, ಜನಾರ್ದನ ಹಂದೆ ವಂದಿಸಿದರು, ಪ್ರೊ.ಜಿ.ಕೆ ಭಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net