ಅಂತಃಶಕ್ತಿ ಹೆಚ್ಚಿಸುವ ಕಲೆಯ ಅಳವಡಿಕೆ

bharatha natyam
ತ್ರಿಮಧುರ ಚಿತ್ರಕಲಾ ಪ್ರದರ್ಶನ, ಕರ್ನಾಟಕ ಸಂಗೀತ ಹಾಗೂ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮ ನಡೆಯಿತು.
Published on

ಕುಂದಾಪುರ: ಸಂಗೀತ, ನೃತ್ಯ ಕಲೆಗಳಿಗೆ ಹೀಲಿಂಗ್ ಪವರ್ ಇದೆ. ಅಭ್ಯಾಸ ಮಾಡಿದಷ್ಟು ಅಂತಃಶಕ್ತಿ ಹೆಚ್ಚಿಸುವ ಇಂತಹ ಕಲೆಗಳನ್ನು ಬೆಳೆಸುವುದರ ಜತೆಗೆ ತಾವೂ ತೊಡಗಿಸಿಕೊಂಡಾಗ ಒತ್ತಡದ ಬದುಕಿನಿಂದ ಪಾರಾಗಬಹುದು ಎಂದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕಲ್ಲಹಾಳ ಹೇಳಿದರು.

ಕುಂದಾಪುರದ ಸಾಧನಾ ಕಲಾ ಸಂಗಮ, ಅಪ್ರಮೇಯ ಹಾಗೂ ಪರಪಂಚ ಸಹಯೋಗದಲ್ಲಿ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಶನಿವಾರ ಜರುಗಿದ ತ್ರಿಮಧುರ ಚಿತ್ರಕಲಾ ಪ್ರದರ್ಶನ, ಕರ್ನಾಟಕ ಸಂಗೀತ ಹಾಗೂ ಶಾಸ್ತ್ರೀಯ ಭರತನಾಟ್ಯದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಕಣಕಾರ ಹಾಗೂ ಕಲಾವಿದ ದಿನಮಣಿ ಶಾಸ್ತ್ರೀ ಮಾತನಾಡಿದರು. ಸಾಧನಾ ಕಲಾ ಸಂಗಮ ಸಂಸ್ಥೆಯ ವಿಶ್ವಸ್ಥ ನಾರಾಯಣ ಐತಾಳ್ ಉಪಸ್ಥಿತರಿದ್ದರು. ಸಾಧನಾ ಕಲಾ ಸಂಗಮದ ವಿದ್ಯಾರ್ಥಿಗಳಾದ ಅಪೂರ್ವ ಹಾಗೂ ವಾಣಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net