ಬೇಟೆಗೆ ಸಂಚು ರೂಪಿಸಿದ್ದವರ ಬಂಧನ

theif
ಬಂಧಿತರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಯ ತಂಡ.
Published on

ಹೆಬ್ರಿ: ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವನ್ಯಜೀವಿ ವಲಯದ ಅಂಡಾರು ಮೀಸಲು ಅರಣ್ಯ ವ್ಯಾಪ್ತಿಯ ಕೆರ್ವಾಶೆ ಗ್ರಾಮದ ನಲ್ಪಡು ಎಂಬಲ್ಲಿ ಪ್ರಾಣಿ ಬೇಟೆಯಾಡಲು ಸಂಚು ರೂಪಿಸಿದ್ದ ಮೂವರನ್ನು ಕಾರ್ಕಳ ವನ್ಯಜೀವಿ ವಲಯದ ಸಿಬ್ಬಂದಿ ಬಂಧಿಸಿದ್ದು, ಓರ್ವ ತಪ್ಪಿಸಿಕೊಂಡಿದ್ದಾನೆ.

ಶಿರ್ಲಾಲಿನ ವಸಂತ ಪೂಜಾರಿ, ರಾಕೇಶ್, ಜಯ ಪೂಜಾರಿ ಹಾಗೂ ಸಂತೋಷ್ ಪೂಜಾರಿ ಎಂಬುವರು ಕೋವಿ ಜತೆಗೆ ಬೇಟೆಗೆ ತೆರಳಿದ್ದರು. ಈ ಪೈಕಿ ಮೂವರು ಸಿಕ್ಕಿ ಬಿದ್ದಿದ್ದಾರೆ. ಸಂತೋಷ್ ಪೂಜಾರಿ ತಪ್ಪಿಸಿಕೊಂಡಿದ್ದಾನೆ. ಶಸ್ತ್ರಾಸ್ತ್ರ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಡಿಸಿಎಫ್ ಶಿವರಾಮ್‌ಬಾಬು ನಿರ್ದೇಶನದಂತೆ, ಎಸಿಎಫ್ ಸತೀಶ್ ಬಿ. ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯದ ಆರ್‌ಎಫ್‌ಒ ಶಶಿಧರ ಗೌಡ ಪಾಟೀಲ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಪ್ರಕರಣದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಜು ಎಲ್.ಜೆ., ಅಭಿಲಾಷ್, ಮಲ್ಲಯ್ಯ, ಸುಜೀತ್, ದಾಮೋದರ, ಸಂತೋಷ್, ನಿತಿನ್ ಜೆ.ಹೆಗ್ಡೆ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net