ನ.6ಕ್ಕ ವಕ್ಫ್ ಆದೇಶ ವಿರೋಧಿಸಿ ಬಿಜೆಪಿ ಪ್ರತಿಭಟನೆ

udp-bjp
Published on

ಉಡುಪಿ: ರೈತರ ಜಮೀನುಗಳನ್ನು ವಕ್ಫ ಬೋರ್ಡ್​ ಹೆಸರಿಗೆ ನಮೂದಿಸಿದ ರಾಜ್ಯ ಸರ್ಕಾರದ ಧೋರಣೆ ಖಂಡಸಿ ಜಿಲ್ಲಾ ಬಿಜೆಪಿ ವತಿಯಿಂದ ನ.6ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್​ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಣಿಪಾಲದ ಕಾಯಿನ್​ ಸರ್ಕಲ್​ನಿಂದ ಸಾವಿರಾರು ಮಂದಿ ಡಿಸಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲಿದ್ದಾರೆ ಎಂದರು.

ತಾಲೂಕು ಕೇಂದ್ರದಲ್ಲೂ ಪ್ರತಿಭಟನೆ

ವಕ್ಫ ಅನಾಹುತಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನ.4ರಂದು ಬೆಳಗ್ಗೆ 12ಗಂಟೆಗೆ ಕಾರ್ಕಳ ತಾಲೂಕು ಕಚೇರಿ, 4ಗಂಟೆಗೆ ಹೆಬ್ರಿ ತಾಲೂಕು ಕಚೇರಿ, ನ.5ರಂದು 3 ಗಂಟೆಗೆ ಕುಂದಾಪುರ ತಾಲೂಕು ಕಚೇರಿ, ನ.6ರಂದು 3 ಗಂಟೆಗೆ ಕಾಪು ಮತ್ತು ಬೈಂದೂರು ತಾಲೂಕು ಕಚೇರಿಗೆ ಸಾವಿರಾರು ಮಂದಿ ತೆರಳಿ ಪಹಣಿ ಪರಿಶೀಲನೆ ನಡೆಸಲಿದ್ದಾರೆ. ನ.7 ಮತ್ತು 8ರಂದು ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ ನಡೆಯಲಿದೆ ಎಂದರು.

ಪಹಣಿ ಬದಲಾವಣೆ ಷಡ್ಯಂತ್ರ

ಬಿಜೆಪಿ ರಾಜಕೀಯಕ್ಕೆ ಹೋರಾಟ ನಡೆಸುತ್ತಿಲ್ಲ. ಬದಲಾಗಿ ನಾಗರಿಕರಿಗೆ ಆದ ಅನ್ಯಾಯವನ್ನು ಪ್ರಶ್ನಿಸುತ್ತಿದೆ. ವಕ್ಪ ಬೋರ್ಡ್​ ಪಹಣಿ ಬದಲಾವಣೆ ಮಾಡಿ ಜನರಿಂದ ಹೇಗೆ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಗಮನಿಸಿ ಮುಂದಿನ ಹಂತಕ್ಕೆ ಕೈಹಾಕುವ ದುರಾಲೋಚನೆ ಮುಖ್ಯಮಂತ್ರಿಗಳಾಗಿದ್ದು, ಈಗ ಆದೇಶ ವಾಪಾಸು ಪಡೆದಿರುವ ಹಿಂದೆ ಬೇರೆ ಷಡ್ಯಂತ್ರ ಅಡಗಿದೆ. ಯಾವುದೇ ತಪು$್ಪಗಳನ್ನು ಬೊಟ್ಟು ಮಾಡಿದರೂ ಬಿಜೆಪಿ ಮೇಲೆ ಆರೋಪ ಹೊರಿಸುವುದು ಕಾಂಗ್ರೆಸ್​ನ ಗೀಳು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ರೈತರ ಪಹಣಿ ತಿದ್ದುಪಡಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಶ್ಮ ಉದಯ್​ ಶೆಟ್ಟಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net