

ಧಾರವಾಡ: ಶಿಕ್ಷಣ ಕಾಶಿ ಧಾರವಾಡದ ಕ್ಲಾಸಿಕ್ ಕೆಎಎಸ್- ಐಎಎಸ್ ಸ್ಟಡಿ ಸರ್ಕಲ್ಗೆ ಈಗ 27 ವರ್ಷದ ಸಂಭ್ರಮ. ಇಲ್ಲಿ ತರಬೇತಿ ಪಡೆದ ಸಹಸ್ರಾರು ಅಭ್ಯರ್ಥಿಗಳು ಕೇಂದ್ರ- ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. 1998ರಲ್ಲಿ ಕ್ಲಾಸಿಕ್ ಸಂಸ್ಥೆ ಆರಂಭವಾದ ಹೊಸತರಲ್ಲಿ ಪಿಎಸ್ಐ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಮೊದಲ ಬ್ಯಾಚ್ನಲ್ಲಿ ತರಬೇತಿ ಪಡೆದಿದ್ದ ಗೀತಾ ಕುಲಕರ್ಣಿ ಮತ್ತು ರುದ್ರಪ್ಪ ಉಜ್ಜಿನಕೊಪ್ಪ ಎಂಬ ಇಬ್ಬರು ಪಿಎಸ್ಐ ಆಗಿ ಆಯ್ಕೆಯಾಗಿದ್ದರು. ಆದರಲ್ಲಿ ಗೀತಾ ಕುಲಕರ್ಣಿ ಅವರು ಪ್ರಸ್ತುತ ಮಂಗಳೂರು ಎಸಿಪಿ ಆಗಿ ಹಾಗೂ ರುದ್ರಪ್ಪ ಉಜ್ಜಿನಕೊಪ್ಪ ಅವರು ದಾವಣಗೆರೆ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರಿಂದ ಆರಂಭವಾದ ಕ್ಲಾಸಿಕ್ ಯಶಸ್ಸಿನ ಜೈತ್ರಯಾತ್ರೆ ಇಂದಿಗೂ ಮುಂದುವರಿದಿದೆ. ಇತ್ತೀಚೆಗೆ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ 75 ಅಭ್ಯರ್ಥಿಗಳು ಮತ್ತು 200ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
545 ಹುದ್ದೆಗಳ ಪಿಎಸ್ಐ ನೇಮಕಾತಿ ಪ್ರಕ್ರಿಯೆ ಗಜಪ್ರಸವ ದಂತಿತ್ತು. ನೇಮಕಾತಿ ಪಟ್ಟಿ ಪ್ರಕಟಗೊಂಡು ರದ್ದಾಗಿ, ಮರುಪರೀಕ್ಷೆ ಆಯೋಜನೆ ಗೊಂಡಿತ್ತು. ಈ ಬ್ಯಾಚ್ನಲ್ಲಿ ಕ್ಲಾಸಿಕ್ ಸಂಸ್ಥೆಯ 75 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಇದೇ ಮೊದಲು. ಜತೆಗೆ ಕಳೆದ ವರ್ಷ ನಡೆದ ಪಿಸಿ ನೇಮಕಾತಿಯಲ್ಲಿ 200ಕ್ಕೂ ಹೆಚ್ಚು ಕಾನ್ಸ್ಟೇಬಲ್ಗಳು ಉತ್ತೀರ್ಣರಾಗಿದ್ದಾರೆ. ಇವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಆಹ್ವಾನಿಸಿ ಗಣ್ಯರಿಂದ ಅಭಿನಂದಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಕ್ಲಾಸಿಕ್ ಸಂಸ್ಥೆ ಆಯೋಜಿಸಿತ್ತು. ‘ಕ್ಲಾಸಿಕ್ ಸಂಭ್ರಮ- 2025 ಕಾರ್ಯಕ್ರಮ ಸಾಧಕರ ಸಮಾಗಮದಂತಿತ್ತು. ಸಾಧಕರನ್ನು ಗಣ್ಯರು ಸನ್ಮಾನಿಸಿ ಶುಭ ಕೋರಿದರು.
ಪೊಲೀಸ್ ಇಲಾಖೆಗೆ ಸೇರುತ್ತಿರುವ ಯುವಕರಿಗೆ ಅದೇ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸ್ಪೂರ್ತಿ ತುಂಬುವ ಉದ್ದೇಶದಿಂದ ನಿವೃತ್ತ ಡಿಜಿಪಿ ಶಂಕರ ಬಿದರಿ ಅವರನ್ನು ಆಹ್ವಾನಿಸಲಾಗಿತ್ತು. ಯುವಕರನ್ನು ಉದ್ದೇಶಿಸಿ ಮಾತನಾಡಿದ ಶಂಕರ ಬಿದರಿ, ಧಾರವಾಡದಲ್ಲಿ ಅನೇಕ ತರಬೇತಿ ಕೇಂದ್ರಗಳಿವೆ. ಆದರೆ, ನಿರೀಕ್ಷಿತ ಯಶಸ್ಸು ಲಭಿಸದಿರುವ ಕೊರಗು ಇತ್ತು. ಈ ಬಾರಿ ಕ್ಲಾಸಿಕ್ ಸಂಸ್ಥೆಯ ಮಾರ್ಗದರ್ಶನ
ಪಡೆದು ಪೊಲೀಸ್ ಇಲಾಖೆಗೆ 250ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಪೊಲೀಸ್ ವೃತ್ತಿ ಅತ್ಯಂತ ಪವಿತ್ರ ವಾದುದು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನೇಮಕಗೊಂಡಿರುವುದು ನಿಮ್ಮ ಸುದೈವ ಮತ್ತು ತಂದೆ- ತಾಯಿ, ಹಿರಿಯರ ಪುಣ್ಯದ ಫಲ. ಸರ್ಕಾರಿ ನೌಕರಿ ಸಿಕ್ಕಿತೆಂದು ಸಂತೃಪ್ತರಾಗಬೇಡಿ. ಯುಪಿಎಸ್ಸಿ, ಬ್ಯಾಂಕಿಂಗ್, ರೈಲ್ವೆ, ಎಸ್ಎಸ್ಸಿ ನಡೆಸುವ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಛಲ ನಿಮ್ಮದಾಗಬೇಕು. ಪೊಲೀಸರು ಪ್ರಾಮಾಣಿಕ ಮಾರ್ಗದಲ್ಲಿ ನಡೆಯಬೇಕು. ಕಾನೂನಿನ ಅಡಿ ಕಾರ್ಯ ನಿರ್ವಹಿಸಬೇಕು. ಜಾತೀಯತೆ, ಭೇದ- ಭಾವ ಮಾಡಬೇಡಿ ಎಂದು ಶಂಕರ ಬಿದರಿ ಕಿವಿಮಾತು ಹೇಳಿದರು.
ಲಕ್ಷ್ಮಣ ಉಪ್ಪಾರ ಅವರ ನೇತೃತ್ವದ ಕ್ಲಾಸಿಕ್ ಸಂಸ್ಥೆಯ ಕಾರ್ಯ ಮೆಚ್ಚುವಂಥದ್ದು. ಸ್ಪರ್ಧಾತ್ಮಕ ಯುಗದಲ್ಲಿ ಛಾಪು ಮೂಡಿಸಿರುವ ಅವರು ಶೈಕ್ಷಣಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವುದು ಸಂಸ್ಥೆಯ ಹೆಮ್ಮೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ನಿವೃತ್ತ ಡಿಜಿಪಿ ಶಂಕರ ಬಿದರಿ, ಕಮರ್ಷಿಯಲ್ ಟ್ಯಾಕ್ಸ್ ಡೆಪ್ಯೂಟಿ ಕಮಿಷನರ್ ಶಂಕರ ಬೆಳ್ಳುಬ್ಬಿ, ಧಾರವಾಡ ಎಸಿಪಿ ಪ್ರಶಾಂತ ಸಿದ್ದನಗೌಡರ, ಎಸ್ಪಿ ಗೋಪಾಲ ಬ್ಯಾಕೋಡ್, ಕ್ಲಾಸಿಕ್ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ, ಸ್ಪರ್ಧಾ ಸ್ಪೂರ್ತಿ ಮಾಸಪತ್ರಿಕೆ ಪ್ರಕಾಶಕಿ ರೇಣುಕಾ ಉಪ್ಪಾರ, ಕ್ಲಾಸಿಕ್ ಸಂಸ್ಥೆ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ವೈ. ಸಾವಂತ ಸೇರದಿಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಕ್ಷ್ಮ್ಮ ಉಪ್ಪಾರ ಅವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಮನಸೂರ ಪ್ರಶಸ್ತಿ, ಭಗೀರಥ ಪ್ರಶಸ್ತಿ ಪ್ರಮುಖವಾದುವು. ವಿಜಯವಾಣಿ ಪತ್ರಿಕೆಯಿಂದ ‘ವಿಜಯ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ 25 ವರ್ಷಗಳ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2022ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.
ಕ್ಲಾಸಿಕ್ ಸಂಸ್ಥೆಯಲ್ಲಿ ಪಿಸಿ, ಪಿಎಸ್ಐ, ಕೆಎಎಸ್, ಐಎಎಸ್, ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಕರ ನೇಮಕಾತಿ, ಟಿಇಟಿ, ಬ್ಯಾಂಕಿಂಗ್, ಆರ್ಆರ್ಬಿ, ಗ್ರಾಮ ಆಡಳಿತಾಧಿಕಾರಿ, ಪಿಡಿಒ, ಪಿಯು ಮತ್ತು ಡಿಗ್ರಿ ಕಾಲೇಜು ಉಪನ್ಯಾಸಕರು, ಎಲ್ಐಸಿ, ಹಾಸ್ಟೆಲ್ ವಾರ್ಡನ್, ಎಸ್ಎಸ್ಸಿ, ವಿಟಿಯು ಪಿಜಿ ಸಿಇಟಿ ಮತ್ತು ಎಂಎಟಿ ತರಬೇತಿ ನೀಡಲಾಗುತ್ತಿದೆ. ನುರಿತ ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳಿಂದ ಅಭ್ಯರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂಬರುವ ನೇಮಕಾತಿ ಪರೀಕ್ಷೆಗಳಿಗೆ ವ್ಯವಸ್ಥಿತವಾದಂತಹ, ಉನ್ನತ ಪರಿಣಿತರೊಂದಿಗೆ ವಿಶೇಷ ಉಪನ್ಯಾಸಗಳು, ಮಾದರಿ ಪರೀಕ್ಷೆಗೆ ಮತ್ತು ನಿರಂತರವಾಗಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.
ಪ್ರಸ್ತುತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ 10ಕ್ಕೂ ಹೆಚ್ಚು ಬಾಡಿಗೆ ಕಟ್ಟಡಗಳಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಲಾಗಿದೆ. ತರಗತಿಗೆ ಹೋಗಿ ಬರಲು 50ಕ್ಕೂ ಹೆಚ್ಚು ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಸುಸಜ್ಜಿತ ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದ್ದು, ಇಲ್ಲಿ ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ.
ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಇಳಿದರೆ ಸವಾಲುಗಳು ಸಾಮಾನ್ಯ. ಅವುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶಂಕರ ಬೆಳ್ಳುಬ್ಬಿ ಸಲಹೆ ನೀಡಿದರು. ನಾನು 2014ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ. ಯಶಸ್ಸಿನ ಹಿಂದೆ ಕ್ಲಾಸಿಕ್ ಸಂಸ್ಥೆಯಲ್ಲಿ ತರಬೇತಿ ಪ್ರಮುಖ ಪಾತ್ರ ವಹಿಸಿತು ಎಂದು ಬಣ್ಣಿಸಿದರು.
ನಿಮಗೆಲ್ಲ ಪಿಎಸ್ಐ ಹುದ್ದೆ ಸುಲಭವಾಗಿ ಸಿಕ್ಕಿದ್ದಲ್ಲ. ಇದರ ಹಿಂದೆ 4- 5 ವರ್ಷಗಳ ಕಠಿಣ ಪರಿಶ್ರಮವಿದೆ. ತಾಳ್ಮೆ, ಶ್ರಮಕ್ಕೆ ಸಂದ ಗೌರವವಿದು. 545 ಹುದ್ದೆಗಳ ಪಿಎಸ್ಐ ನೇಮಕಾತಿಗೆ ಕಳಂಕ ಬಂದಿತ್ತು. ಪ್ರಾಮಾಣಿಕತೆಯಿಂದ ತಯಾರಿ ನಡೆಸಿ ಸಾಮರ್ಥ್ಯವನ್ನು ನಿರೂಪಿಸಿದ್ದೀರಿ. ಜೀವನಕ್ಕೆ ಭದ್ರತೆ ಸಿಕ್ಕಿದ್ದು, ಮುಂದೆ ಉನ್ನತ ಹುದ್ದೆಗೇರುವ ಗುರಿ ನಿಮ್ಮದಾಗಲಿ ಎಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಲಕ್ಷ್ಮಣ ಎಸ್. ಉಪ್ಪಾರ ಶುಭ ಹಾರೈಸಿದರು.
ಕ್ಲಾಸಿಕ್ ಸಂಸ್ಥೆಯಲ್ಲಿ ಪ್ರತಿವರ್ಷ ಅಂದಾಜು 4ರಿಂದ 5 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ತರಬೇತಿ, ಮಾರ್ಗದರ್ಶನಕ್ಕೆ 25 ನುರಿತ ಬೋಧಕರಿದ್ದಾರೆ. ಬೋಧನೆಯ ಜತೆಗೆ ಅಣಕು ಸಂದರ್ಶನ ನಡೆಸುವುದು, ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ, ಸಂಪನ್ಮೂಲ ವ್ಯಕ್ತಿಗಳಿಂದ ಪ್ರೇರಣೆ ನೀಡಲಾಗುತ್ತದೆ. ಪೊಲೀಸ್ ಹುದ್ದೆಗಳ ದೈಹಿಕ ಪರೀಕ್ಷೆಗೆ ನಿವೃತ್ತ ಸೈನಿಕರಿಂದ ತರಬೇತಿ ನೀಡಲಾಗುತ್ತದೆ. ಪರಿಣಾಮ ನಮ್ಮ ಸಂಸ್ಥೆಯಿಂದ ಪ್ರತಿವರ್ಷ ನೂರಾರು ಯುವಕರು ಸರ್ಕಾರಿ ನೌಕರಿಗೆ ಆಯ್ಕೆಯಾಗುತ್ತಿದ್ದಾರೆ. - ಲಕ್ಷ್ಮಣ ಎಸ್. ಉಪ್ಪಾರ, ಅಧ್ಯಕ್ಷರು, ಕ್ಲಾಸಿಕ್ ಸಮೂಹ ಸಂಸ್ಥೆ, ಧಾರವಾಡ
ನಾನು ಸೈನ್ಯದಿಂದ ನಿವೃತ್ತಿಯಾದ ಬಳಿಕ 4 ವರ್ಷಗಳಿಂದ ಕೆಎಎಸ್ ಹುದ್ದೆಗೆ ತಯಾರಿ ನಡೆಸುತ್ತಿದ್ದೆ. ಜತೆಗೆ ಪಿಎಸ್ಐ 545, ಪಿಎಸ್ಐ 402, ಎಸ್ಡಿಎ, ಜೆಎ, ಪಿಸಿ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾಗಿದ್ದೆ. ಅಂತಿಮವಾಗಿ ಪಿಎಸ್ಐ 545 ಸೇರ್ಪಡೆಯಾಗಲು ನಿರ್ಧರಿಸಿದೆ. ಕ್ಲಾಸಿಕ್ ಸ್ಟಡಿ ಕೇಂದ್ರದಿಂದ ಪಿಎಸ್ಐಗೆ ಹಲವಾರು ಮಾಕ್ ಟೆಸ್ಟ್ ತೆಗೆದುಕೊಂಡಿದ್ದೆ. ಇದು ಹೆಚ್ಚು ಅಂಕಗಳನ್ನು ಪಡೆಯಲು ಸಹಾಯವಾಯಿತು. * ವೆಂಕನಗೌಡ ಚನ್ನಗೌಡ, ಆಲೂರು (ಬಾಗಲಕೋಟೆ) ನಾನು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದು ತುಂಬಾ ಸಂತೋಷದ ವಿಷಯ. ಧಾರವಾಡದ ಕ್ಲಾಸಿಕ್ ಸಂಸ್ಥೆಯಲ್ಲಿ ಪಡೆದ ತರಬೇತಿ ನನ್ನ ಯಶಸ್ಸಿಗೆ ಸಾಕಷ್ಟು ಸಹಕಾರಿಯಾಗಿದೆ. ಸಂಸ್ಥೆಯ ಸಂಸ್ಥಾಪಕರಿಗೆ, ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಹುದ್ದೆಗೆ ಗೌರವ ತರುವಂತೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. * ರಾಜೀವ ಪೂಜಾರ, ಬಾಗಲಕೋಟೆ
ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗಾಗಿ 2010ರಿಂದ ಪ್ರತಿ ಭಾನುವಾರ ಮಾದರಿ ಪರೀಕ್ಷೆಗಳನ್ನು ಧಾರವಾಡದಲ್ಲಿ ಆಯೋಜಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಯಶಸ್ಸು ಪಡೆದು ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. 2023ರ ಡಿಸೆಂಬರ್ನ 4 ಭಾನುವಾರಗಳಂದು ಉಚಿತ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟಾರೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದದ್ದು ಒಂದು ದಾಖಲೆ.
ಕ್ಲಾಸಿಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್. ಶೈಕ್ಷಣಿಕ ಕ್ಷೇತ್ರದಲ್ಲೂ ಕ್ಲಾಸಿಕ್ ಸಂಸ್ಥೆ ಛಾಪು ಮೂಡಿಸಿದೆ. 2009- 2010ರಲ್ಲಿ ಕ್ಲಾಸಿಕ್ ಲಿಟ್ಲ್ ಬಡ್ಸ್ ಪ್ರಿ ಪ್ರೖೆಮರಿ ಸ್ಕೂಲ್ ಆರಂಭಿಸಲಾಯಿತು. ಕ್ಲಾಸಿಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಐಸಿಎಸ್ಇ ಪಠ್ಯಕ್ರಮವುಳ್ಳ ಧಾರವಾಡದ ಏಕೈಕ ಶಾಲೆಯಾಗಿದ್ದು, 1ರಿಂದ 10ನೇ ತರಗತಿವರೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. 1800ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 100ಕ್ಕೂ ಹೆಚ್ಚು ಬೋಧನಾ ಸಿಬ್ಬಂದಿ ಇಲ್ಲಿದ್ದಾರೆ. ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ವಿಶಾಲವಾದ ಆಟದ ಮೈದಾನವಿದೆ. ಮಕ್ಕಳು ಪಠ್ಯೇತರ ಚಟುವಟಕೆಗಳಲ್ಲಿ ಅನೇಕ ಪ್ರಶಸ್ತಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಪಿಕ್ ಅಪ್, ಡ್ರಾಪ್ಗಾಗಿ 50ಕ್ಕೂ ಹೆಚ್ಚು ಬಸ್ಗಳಿವೆ. ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ.
ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನೊಳಗೊಂಡ ಕ್ಲಾಸಿಕ್ ಪಿಯು ಕಾಲೇಜ್ನ್ನು 2017ರಲ್ಲಿ ಆರಂಭಿಸಲಾಗಿದೆ. 2019ರಲ್ಲಿ ಕ್ಲಾಸಿಕ್ ಪದವಿ ಕಾಲೇಜ್ ಆರಂಭಿಸಲಾಗಿದೆ. ಇಲ್ಲಿ ದೈನಂದಿನ ಪಠ್ಯ ಬೋಧನೆಯ ಜತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಸಹಿತ ಇಂಟಿಗ್ರೇಟೆಡ್ ಕೋರ್ಸ್ ಲಭ್ಯ ಇದೆ. ಪದವಿ ಹಂತದಲ್ಲೇ ವಿದ್ಯಾರ್ಥಿಗಳಿಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.