

ಶಿರ್ವ: ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಮೇಯಲ್ಲಿ ನಡೆಸಿದ ಪ್ರಸಕ್ತ ವರ್ಷದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಂಟಕಲ್ಲಿನ ಸುಷ್ಮಾ ಅವರನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು. ಸುಷ್ಮಾ ಅವರ ಪಾಲಕರಾದ ಸುಮತಿ ರಾವ್, ಶೈಲೇಶ್ ರಾವ್, ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್. ಕಾರ್ಯದರ್ಶಿ ದಿನೇಶ್ ದೇವಾಡಿಗ, ಪದಾಧಿಕಾರಿಗಳಾದ ವಿನೆಂಟ್ ಪಲ್ಕೆ, ಸುರೇಶ್ ರಾವ್, ಡೇನಿಸ್ ಡಿಸೋಜ, ಅರುಂಧತಿ ಪ್ರಭು, ರೋಹಿಣಿ ನಾಯಕ್ ಉಪಸ್ಥಿತರಿದ್ದರು.