ನಗರದ ವಿದ್ಯಾರ್ಥಿಗೆ ಕರೊನಾ ಪಾಸಿಟೀವ್​; ಶಾಲೆ ಭಾಗಶಃ ಬಂದ್​

Corona
Published on

ಬೆಂಗಳೂರು: ದಕ್ಷಿಣ ಬೆಂಗಳೂರಿನ ಬಸವನಗುಡಿಯ ಪ್ರಮುಖ ಶಾಲೆಯೊಂದರ ವಿದ್ಯಾರ್ಥಿಯೊಬ್ಬನಿಗೆ ಕರೊನಾ ಪಾಸಿಟೀವ್​ ಬಂದಿದೆ. ಇದರಿಂದಾಗಿ ಶಾಲೆಯನ್ನು ಭಾಗಶಃ ಸೀಲ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

8ನೇ ತರಗತಿಯ ವಿದ್ಯಾರ್ಥಿಗೆ ಸೋಮವಾರದಂದು(ಅ.25) ಶಾಲೆಗೆ ಹೋಗಿಬಂದ ಹಲವು ಗಂಟೆಗಳ ನಂತರ ಕೋವಿಡ್​ 19 ಸೋಂಕು ದೃಢಪಟ್ಟಿತು. ಮಾಹಿತಿ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಶಾಲೆಯ ಸಂಬಂಧಿತ ಭಾಗವನ್ನು ಪೂರ್ಣವಾಗಿ ಸಾನಿಟೈಸ್ ಮಾಡಿ ಸೀಲ್​ ಮಾಡಲಾಯಿತು. ವಿಚಾರಣೆ ಮತ್ತು ಕಾಂಟಾಕ್ಟ್​ ಟ್ರೇಸಿಂಗ್​ನಿಂದ ಸೋಂಕು ಶಾಲೆಯಿಂದ ಬಂದಿಲ್ಲ; ಹುಡುಗನ ತಾಯಿಯಿಂದ ಅವನಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿರುವುದಾಗಿ ಬಿಬಿಎಂಪಿ ಆರೋಗ್ಯಾಧಿಕಾರಿ ಹೇಳಿದ್ದಾರೆ.

ಮುನ್ನೆಚ್ಚರಿಕೆಯಾಗಿ ಸೋಂಕು ಪತ್ತೆಯಾದ ದಿನ ಸೋಂಕಿತ ವಿದ್ಯಾರ್ಥಿಯೊಂದಿಗೆ ತರಗತಿಗಳಲ್ಲಿ ಹಾಜರಾದ 15 ವಿದ್ಯಾರ್ಥಿಗಳ ಸ್ವಾಬ್​ ಸ್ಯಾಂಪಲ್​ಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಫಲಿತಾಂಶಗಳಿಗಾಗಿ ಕಾಯುತ್ತಿದ್ದು, ಅವರೆಲ್ಲರಿಗೂ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಹೇಳಲಾಗಿದೆ ಎಂದು ವರದಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net