ಪುನೀತ್​ ಅಗಲಿಕೆಯ ನೋವು: ರಾಜ್ಯಾದ್ಯಂತ ಚಿತ್ರಪ್ರದರ್ಶನ ರದ್ದು

puneet
Published on

ಮೈಸೂರು: ಕನ್ನಡದ ಪವರ್​ ಸ್ಟಾರ್​ ಪುನೀತ್ ರಾಜ್​​ಕುಮಾರ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳು ಚಿತ್ರಪ್ರದರ್ಶನ ನಿಲ್ಲಿಸಿವೆ. 2.30 ರ ಶೋ ಮತ್ತು 4.30 ರ ಶೋಗಳನ್ನು ರದ್ದುಪಡಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಉಪಾಧ್ಯಕ್ಷ ರಾಜಾರಾಮ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗ ಮೊದಲು ಈ ಶಾಕ್​​ನಿಂದ ಹೊರ ಬರಬೇಕು. ಮುಂದೆ ಯಾವಾಗ ಚಿತ್ರ ಪ್ರದರ್ಶನ ಮಾಡಬೇಕು ನೋಡೋಣ ಎಂದರು.

"ಪುನೀತ್ ಜತೆ ನಾನು ಚಾಮುಂಡಿ ಬೆಟ್ಟ ಹತ್ತಿ ಇಳಿಯುತ್ತಿದ್ದೆ. ಅವರು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದರು. ಅವರಿಗೆ ಹೀಗೆ ಆಗಿರೋದು ಅರಗಿಸಿಕೊಳ್ಳಲು ಆಗುತ್ತಿಲ್ಲ" ಎಂದು ರಾಜಾರಾಮ್​ ಭಾವುಕರಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net