

ಸಿಂಧನೂರು: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಹೊಸ ಮೀಸಲಾತಿ ಜಾರಿಯಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬ್ರಾಹ್ಮಣ ಸಮಾಜದಿಂದ ಆಯ್ಕೆಯಾದ ಸದಸ್ಯರಿಗೆ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಬ್ರಾಹ್ಮಣ ಸಮಾಜದ ಪ್ರಮುಖರು ಸೋಮವಾರ ಶಾಸಕ ಹಂಪನಗೌಡ ಬಾದರ್ಲಿಗೆ ಮನವಿ ಸಲ್ಲಿಸಿದರು.
ಪುರಸಭೆ ಇದ್ದಾಗಿನಿಂದಲೂ ಸಮಾಜಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ದೊರಕಿಲ್ಲ. ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಅವಕಾಶ ಸಿಕ್ಕಿಲ್ಲ. ಸಮಾಜದ ಅಭಿವೃದ್ಧಿ, ಸಮುದಾಯ ಭವನಗಳಿಗೆ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜದ ತಾಲೂಕು ಘಟಕದ ಮುಖ್ಯ ಸಂಚಾಲಕ ಗೋವಿಂದರಾವ ಕುಲಕರ್ಣಿ, ಮಸ್ಕಿ ತಾಲೂಕು ಮುಖ್ಯ ಸಂಚಾಲಕ ಹನುಮೇಶರಾವ್ ಬಳಗಾನೂರು, ಬ್ರಾಹ್ಮಣ ಮಹಾಸಭಾ ರಾಜ್ಯ ಸಮಿತಿ ಸದಸ್ಯರಾದ ನರಸಿಂಹಾಚಾರ್ ಮಠಾಧಿಕಾರಿ, ಪ್ರಹ್ಲಾದ ಗುಡಿ ವಕೀಲ, ಮನೋಹರರಾವ ಕುಲಕರ್ಣಿ, ಜಗನ್ನಾಥರಾವ ಕರಡೋಣಿ, ರಾಘವೇಂದ್ರ ರಾವ್ ಕುಲಕರ್ಣಿ, ಹನುಮಂತ ಆಚಾರ್ ಮಸ್ಕಿ, ವೆಂಕಟೇಶ ಸಿದ್ದರಾಂಪುರ, ಪ್ರಹ್ಲಾದ ಕುಲಕರ್ಣಿ, ಆನಂದ ಗೌರ್ಕರ, ಅವಿನಾಶ ಬಂಡಿ, ವಿಠಲ ಕಲ್ಲೂರು, ಎಂ.ಕೆ. ಗೌರ್ಕರ ಇದ್ದರು.