

ದಾಂಡೇಲಿ: ಸ್ಥಳೀಯ ನಗರಸಭೆಯಲ್ಲಿ ಪೌರಾಯುಕ್ತರಾಗಿ ಅನುಪಮ ಸೇವೆ ಸಲ್ಲಿಸಿ, ಜನಸ್ನೇಹಿ ಅಧಿಕಾರಿಯಾಗಿ ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾದ ಆರ್.ಎಸ್. ಪವಾರ ಅವರು ಗದಗ ನಗರಸಭೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹೃದಯರ್ಸ³ಯಾಗಿ ಬೀಳ್ಕೊಟ್ಟರು.
ಬಳಿಕ ನಗರಸಭೆ ನೂತನ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ವಿವೇಕ ಬನ್ನೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಗರಸಭೆ ಉಪಾಧ್ಯಕ್ಷ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಜಾಧವ, ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ಸದಸ್ಯರಾದ ಸರಸ್ಪತಿ ರಜಪೂತ, ವೆಂಕಟರಮಣಮ್ಮ ಮೈಥುಕುರಿ, ನಂದೀಶ ಮುಂಗರವಾಡಿ, ವಕೀಲ ಸೋಮಕುಮಾರ ಎಸ್., ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ನಾಮನಿರ್ದೇಶಿತ ಸದಸ್ಯರಾದ ರಾಜಶೇಖರ ಐ.ಎಚ್., ಎಸ್.ಎಸ್. ಪೂಜಾರ, ಪ್ರಭುದಾಸ ಯೆನಿಬೇರಾ, ಪರಶುರಾಮ ಸಿಂಧೆ, ಸಂದೇಶ ಜೈನ, ಇತರರಿದ್ದರು.