Cinema Price | ಸಿನಿಮಾ ಟಿಕೆಟ್ ;​​ ಏಕರೂಪ ದರ ನಿಗದಿಪಡಿಸಿದ ರಾಜ್ಯ ಸರ್ಕಾರ

theater
Published on

Cinema Price: ಮಲ್ಟಿಪ್ಲೆಕ್ಸ್​​ ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಎಲ್ಲ ಭಾಷೆಯ ಚಿತ್ರಗಳಿಗೆ ಸಂಬಂಧಿಸಿದ ತೆರಿಗೆ ಹೊರತುಪಡಿಸಿ, 200 ರೂಪಾಯಿಗಳನ್ನು ಮಾತ್ರ ನಿಗದಿಪಡಿಸಬೇಕೆಂದು ಶುಕ್ರವಾರ (ಸೆಪ್ಟೆಂಬರ್​​ 12) ಸರ್ಕಾರ ಆದೇಶ ಹೊರಡಿಸಿದೆ.

ದೊಡ್ಡ ನಟರ ಚಿತ್ರಗಳು ಬಿಡುಗಡೆಯಾಗುತಿದ್ದಂತೆ ಟಿಕೆಟ್​​ ದರ ಮಿತಿ ಮೀರಿ ಹೆಚ್ಚಾಗಿರುತ್ತದೆ, ಬೇರೆ ಬೇರೆ ಭಾಷೆಗಳ ಚಿತ್ರ ಬಂದರಂತು ಬಡವರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುವುದು ಕನಸಿನ ಮಾತು. ಸದ್ಯ ಇದಕ್ಕೆಲ್ಲಾ ಬ್ರೇಕ್​ ಹಾಕಿರುವ ರಾಜ್ಯ ಸರ್ಕಾರ, ಯಾವುದೇ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​​ ಇರಲಿ ದರ 200 ರೂಪಾಯಿ ಮೀರಬಾರದೆಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. 75 ಮತ್ತು ಅದಕ್ಕಿಂತ ಕಡಿಮೆ ಆಸನ ಹೊಂದಿರುವ ಪ್ರೀಮಿಯಂ ಚಿತ್ರಮಂದಿರಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ಸರ್ಕಾರದ ಈ ನಿರ್ಧಾರದಿಂದ ಸಿನಿಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಿದ್ದು, ಇನ್ನಾದರೂ ಚಲನಚಿತ್ರಗಳಿಗೆ ಜನರು ಬರುತ್ತಿಲ್ಲ ಎಂಬ ಕೊರಗು ನಿವಾರಣೆಯಾಗಬಹುದಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net