

ಚಿಂಚೋಳಿ: ತಾಲೂಕಿನ ಸೋಮಲಿಂಗದಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗಸ್ತಿನ ವೇಳೆ ಒಂದು ಚುಕ್ಕೆ ಜಿಂಕೆಯನ್ನು ಬೇಟೆಯಾಡಿ ಮಾಂಸದ ತುಂಡುಗಳನ್ನು ಮೋಟರ್ ಬೈಕಿನಲ್ಲಿ ತಗೆದುಕೊಂಡು ಹೋಗುತ್ತಿರುವಾಗ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿರುವ ಘಟನೆ ಗುರುವಾರ ಜರುಗಿದೆ.
ಆರೋಪಿಗಳಾದ ರೆಡ್ಡಿ ತಂದೆ ರಾಯಸಲ ಚವ್ಹಾಣ ಸಾ. ಜವಾಹರನಗರ ತಾಂಡಾ, ಶಂಕರ ತಂದೆ ಬಜ್ಜು ಚವ್ಹಾಣ ಸಾ. ಜವಾಹರನಗರ ತಾಂಡಾ ಇವರನ್ನು ಬಂಧಿಸಲಾಗಿದ್ದು,
ಹುಣ್ಯಾಸಿಂಗ ತಂದೆ ನಾರಾಯಣ ರಾಠೋಡ ಸಾ. ಊರಂಟಿ ತಾಂಡಾ (ತೆಲಂಗಾಣ ರಾಜ್ಯ) ಜೈಸಿಂಗ್ ತಂದೆ ರಾಮು ರಾಠೋಡ ಸಾ. ಊರಂಟಿ ತಾಂಡಾ (ತೆಲಂಗಾಣ ರಾಜ್ಯ) ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಬಂಧಿತ ಆರೋಪಿಗಳಿಂದ ಚುಕ್ಕೆ ಜಿಂಕೆಯ ಹಸಿ ಮಾಂಸದ ತುಂಡುಗಳು, ಕಬ್ಬಿಣದ ಚೂರಿ 1ಕೊಡಲಿ, tvs motor bike (1) ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಮಾನ್ಯ ಉಪ ಅರಣ್ಯಸಂರಕ್ಷಣಾಧಿಕಾರಿ ಸುಮಿತ್ ಕುಮಾರ ಪಾಟೀಲ್ ಪ್ರಾದೇಶಿಕ ಅರಣ್ಯ ವಿಭಾಗ ಕಲಬುರ್ಗಿ ರವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹ್ಮದ್, ಚಿಂಚೋಳಿ ವನ್ಯ ಜೀವಿ ವಲಯ ಅರಣ್ಯಾಧಿಕಾರಿ ಭಾಗಪ್ಪ ಗೌಡ, ಉಪ ವಲಯ ಅರಣ್ಯ ಅಧಿಕಾರಿ ಶಿವಾನಂದ ಬಿರಾದಾರ, ಸಿದ್ದಾರೂಡ ಹೊಕ್ಕುಂಡಿ, ಬಾನುಪ್ರತಾಪಸಿಂಗ , ಗಸ್ತು ಅರಣ್ಯಪಾಲಕರಾದ ಹಾಲೇಶ , ಶೇಕ್ ಅಮೀರ್, ಸಿಬ್ಬಂದಿಗಳಾದ ರಾಜು, ಅಂಬು, ಸಂತೋಷ, ಶಿವಾನಂದ, ಸುಂದರ, ಪ್ರಕಾಶ, ನರಸಪ್ಪ, ತುಕಾರಾಮ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.