

ಗಂಗೊಳ್ಳಿ: ಜಿಎಸ್‌ಬಿ ಮಹಿಳಾ ಮಂಡಳಿ ವತಿಯಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಸಾಮೂಹಿಕ ಚೂಡಿಪೂಜೆ ನೆರವೇರಿತು.
ಗೌಡ ಸಾರಸ್ವತ ಸಮಾಜದ ಮುತ್ತೈದೆಯರು ಸಾಮೂಹಿಕವಾಗಿ ಪೂಜೆ ನೆರವೇರಿಸಿ ಪ್ರಾರ್ಥಿಸಿದರು. ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ.ನಾಯಕ್, ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಮಹಿಳಾ ಮಂಡಳಿ ಪದಾಧಿಕಾರಿಗಳು ಇತರರು ಇದ್ದರು.