

ಹೆಬ್ರಿ: ಸ್ವಾತಂತ್ರೃ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಹೆಸರು ಶಾಶ್ವತವಾಗಬೇಕು. ನಾವು ಬಾಲ್ಯದಿಂದಲೆ ಕಂಡಿರುವ ಕನಸು ಈಗ ನನಸಾಗಿದೆ. ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಸ್ವಾತಂತ್ರೃ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ ಹೇಳಿದರು.
ಶನಿವಾರ ಪಡುಕುಡೂರು ಶಾಲೆಯಲ್ಲಿ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರೃ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಪಟೇಲರ ಮನೆ ಜಗದೀಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಖಂಡ ಶಿವಪುರ ಸುರೇಶ ಶೆಟ್ಟಿ, ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಡುಪರ್ಕಳ ಹರೀಶ ಶೆಟ್ಟಿ, ಪ್ರಮುಖರಾದ ಶಂಕರ ಶೆಟ್ಟಿ ಪೂಜಾ ಮುನಿಯಾಲು, ಮಾತಿಬೆಟ್ಟು ಪ್ರಕಾಶ ಪೂಜಾರಿ, ಅಶೋಕ ಎಂ. ಶೆಟ್ಟಿ, ಪ್ರಸನ್ನ ಶೆಟ್ಟಿ ಜಯಲೀಲಾ, ಖಜಾನೆ ಸಂದೇಶ ಶೆಟ್ಟಿ, ಸಂದೀಪ ಶೆಟ್ಟಿ, ರಂಜಿತಾ ಪಡುಕುಡೂರು, ಸಂತೋಷ ಕುಮಾರ್ ಶೆಟ್ಟಿ ಮುದ್ರಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಹೃದಯ ಕುಮಾರ್ ಶೆಟ್ಟಿ, ತಾರಾವತಿ ಶೆಟ್ಟಿ, ಅಮಿತಾ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸವಿತಾ ಶೆಟ್ಟಿ, ಮಾಧ್ಯಮ ಸಮಿತಿಯ ಖಜಾನೆ ಸುಕುಮಾರ್ ಆಚಾರ್ ಪ್ರಮುಖರು ಉಪಸ್ಥಿತರಿದ್ದರು. ಪ್ರಕಾಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.