

ಕುಂದಾಪುರ: ಯೇಸು ಅವರು ದೇವರ ಪ್ರೀತಿ ಸಾರಿದರು. ಯೇಸುವನ್ನು ನಂಬಿದವರು ಜೀವನದಲ್ಲಿ ಉನ್ನತಿ ಸಾಧಿಸುತ್ತಾರೆ. ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ, ಇಂದು ನಮ್ಮ ಹೃದಯಗಳಲ್ಲಿ ಯೇಸು ನೆಲೆಸಿದ್ದಾನೆ ಎಂದು ಧರ್ಮಗುರು ಪಾವ್ಲ್ ರೇಗೊ ಹೇಳಿದರು.
ಲಿ ರೋಜರಿ ಇಗರ್ಜಿಯಲ್ಲಿ ಕ್ರಿಸ್ಮಸ್ ಪ್ರಯುಕ್ತ ಮಂಗಳವಾರ ಸಂಜೆ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐಸಿವೈಎಂ ಸಂಘಟನೆಯಿಂದ ಬಹುಮಾನ ವಿತರಿಸಲಾಯಿತು.