ಚೌಡೇಶ್ವರಿದೇವಿ ಹಬ್ಬಕ್ಕೆ ಚಾಲನೆ

1 JATRE
ಹಿರೀಸಾವೆ ಹೆಬ್ಬಾರಮ್ಮನ ದೇವಸ್ಥಾನಕ್ಕೆ ಭಕ್ತರು ಪೂಜೆ ಸಲ್ಲಿಸಿ, ಬಾಗಿಲು ತೆರೆಯುವ ಮೂಲಕ ಶುಕ್ರವಾರ ಗ್ರಾಮದೇವತೆ ಚೌಡೇಶ್ವರಿ ದೇವಿಯ ನಮ್ಮೂರ ಹಬ್ಬಕ್ಕೆ ಚಾಲನೆ ನೀಡಿದರು.
Published on

ಹಿರೀಸಾವೆ: ಇಲ್ಲಿನ ಹೆಬ್ಬಾರಮ್ಮನ ದೇವಸ್ಥಾನಕ್ಕೆ ಭಕ್ತರು ಪೂಜೆ ಸಲ್ಲಿಸಿ, ಬಾಗಿಲು ತೆರೆಯುವ ಮೂಲಕ ಶುಕ್ರವಾರ ಗ್ರಾಮದೇವತೆ ಚೌಡೇಶ್ವರಿ ದೇವಿಯ ನಮ್ಮೂರ ಹಬ್ಬಕ್ಕೆ ಚಾಲನೆ ನೀಡಿದರು.

15 ದಿನಗಳ ಹಬ್ಬವನ್ನು ಹಿರೀಸಾವೆ ಮತ್ತು ಹೊನ್ನೇನಹಳ್ಳಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಮುಂದಿನ ಮಂಗಳವಾರ ರಾತ್ರಿ ಉಯ್ಯಲೆ ಕಂಬಕ್ಕೆ ಬಾಳೆ ಕಂದನ್ನು ಕಟ್ಟುವ ಮೂಲಕ ಹಬ್ಬದ ಧಾರ್ಮಿಕ ವಿಧಾನಗಳನ್ನು ಎರಡು ಗ್ರಾಮದಲ್ಲೂ ಅನುಸರಿಸುತ್ತಾರೆ.

ಪ್ರತಿ ರಾತ್ರಿ ದೇವಿಯ ಮೆರವಣಿಗೆ ಮತ್ತು ಜನಪದ ಶೈಲಿಯ ರಂಗವನ್ನು ಕುಣಿಯುತ್ತಾರೆ. ಚೌಡೇಶ್ವರಿ ದೇವರಿಗೆ ಕಂಕಣ ಕಟ್ಟಿದ ನಂತರ ದೇವಿಯ ಮನೆತನದವರು ತಮ್ಮ ಮನೆಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳನ್ನು ಮಾಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net