ರಸ್ತೆ ಬಳಿ ಚಾಕಲೇಟ್ ರಾಶಿ: ಕ್ವಿಂಟಾಲ್​ಗಟ್ಟಲೆ ಚಾಕಲೇಟ್​ನ್ನು ಎಸೆದು ಹೋದ ಡೀಲರ್!

chaki
Published on

ಉತ್ತರ ಕನ್ನಡ: ಚಾಕಲೇಟ್ ಕಂಡಾಕ್ಷಣ ಖುಷಿಯಿಂದ ತೆಗೆದುಕೊಳ್ಳುವ ಮಕ್ಕಳಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಡ್ಲಮನೆ ರಸ್ತೆ ಅಕ್ಷರಶಃ ಸ್ವರ್ಗದಂತೆ ಕಂಡಿದೆ. ಕ್ವಿಂಟಾಲ್​ಗಟ್ಟಲೆ ಚಾಕಲೇಟ್ ರಸ್ತೆ ಬದಿ ಬಿದ್ದಿದ್ದು, ಅನೇಕ ಮಕ್ಕಳು ಕೈತುಂಬ ಬಾಚಿಕೊಂಡು ಹೋಗಿದ್ದಾರೆ.

ಕ್ಯಾಂಡಿ ಕಂಪನಿಯ ಡೀಲರ್​ ಈ ರೀತಿ ಚಾಕಲೇಟ್​ ಅನ್ನು ರಸ್ತೆ ಬದಿ ರಾಶಿ ಹಾಕಿ ಹೋಗಿದ್ದಾನೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಮಾರಾಟ ಆಗದ ಡೇಟ್ ಬಾರ್ ಆಗಿರುವ ಚಾಕಲೇಟ್​ಗಳನ್ನು ಈ ರೀತಿ ರಾಶಿ ಮಾಡಲಾಗಿದೆ. ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದ ಬಗ್ಗೆ ಇದೀಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಈ ರೀತಿ ಚಾಕಲೇಟ್​ ಅನ್ನು ರಸ್ತೆ ಬದಿ ರಾಶಿ ಹಾಕಿರುವುದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ದನಗಳು ಚಾಕಲೇಟ್ ತಿನ್ನುತ್ತಿವೆ. ಕೆಲ ಮಕ್ಕಳೂ ಚಾಕಲೇಟ್ ತೆಗೆದುಕೊಂಡು ಹೋಗಿದ್ದಾರೆ. ಚಾಕಲೇಟ್ ನೀರಿನೊಂದಿಗೆ ಸೇರಿಕೊಂಡು ಹೋಗಿ ಹತ್ತಿರದ ಕೆರೆಯ ನೀರೂ ಮಲಿನವಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net