ತಂಬಾಕು ವ್ಯಸನಕ್ಕೆ ತುತ್ತಾಗುತ್ತಿರುವ ಯುವ ಜನತೆ

 ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಬುಧವಾರ ಜಾಗೃತಿ ಜಾಥಾ ನಡೆಯಿತು.
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಬುಧವಾರ ಜಾಗೃತಿ ಜಾಥಾ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒ ಡಾ.ಎನ್. ಕಾಶಿ ಕಳವಳ
  • ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜಾಗೃತಿ ಜಾಥಾ
  • ವ್ಯಸನಿಗಳಿಗೆ ಕೌನ್ಸೆಲಿಂಗ್
ಚಿತ್ರದುರ್ಗ: ದೇಶದಲ್ಲಿ ಪ್ರತಿ ವರ್ಷ ಅಂದಾಜು ೧೩.೫ ಲಕ್ಷ ಜನರು ತಂಬಾಕು ಸೇವನೆಯಿಂದ ನಿಧನರಾಗುತ್ತಿದ್ದಾರೆ ಎಂದು ಡಿಎಚ್‌ಒ ಡಾ.ಎನ್. ಕಾಶಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವೇಕಾನಂದ ಗ್ರೂಪ್ ಆ-ï ಇನ್‌ಸ್ಟಿ ಟ್ಯೂಷನ್ಸ್ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ನಗರದ ಬಸಪ್ಪ ಆಸ್ಪತ್ರೆ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲೂ ೧೫ ವರ್ಷ ಮೀರಿದ ಹದಿಹರೆಯದವರು ಅತಿ ಹೆಚ್ಚಾಗಿ ತಂಬಾಕು ವ್ಯಸನಕ್ಕೆ ತುತ್ತಾಗುತ್ತಿರುವುದು ಆತಂಕಕಾರಿ ಯಾಗಿದೆ.`ಆಕರ್ಷಣೆಯನ್ನು ಬಹಿರಂಗಪಡಿಸುವುದು, ನಿಕೋಟಿನ್ ಮತ್ತು ತಂಬಾಕು ವ್ಯಸನ ಎದುರಿಸುವುದು' ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯವಾಗಿದೆ ಎಂದರು.
ರಾಷ್ಟಿçÃಯ ತಂಬಾಕು ನಿಯಂತ್ರಣ ಕಾಯಕ್ರಮವನ್ನು ಜಿಲ್ಲಾದ್ಯಂತ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಟ್ಟುನಿಟ್ಟಾಗಿ ಅನು ಷ್ಠಾನ ಗೊಳಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಸೇದುವುದನ್ನು ತಡೆಗಟ್ಟುವುದು, ಶಾಲಾ ಕಾಲೇಜುಗಳ ಬಳಿ ತಂಬಾಕು ಮಾರಾಟದ ವಿರುದ್ಧ ಕಾರ್ಯಾಚರಣೆ, ವ್ಯಸನಿಗಳಿಗೆ ಆಪ್ತಸಮಾಲೋಚನೆ ಹಾಗೂ ತಂಬಾಕು ಮುಕ್ತ ಹಳ್ಳಿಗಳ ಘೋಷಣೆ ಸೇರಿ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಕಳೆದ ವರ್ಷ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ೧೦೨ ಶಿಕ್ಷಣ ಸಂಸ್ಥೆಗಳ ೧೬,೩೯೮ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ,೭೮ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲಾಗಿದೆ.
ಜಿಲ್ಲೆ, ತಾಲೂಕು ಮಟ್ಟದಲ್ಲಿ ೯೨ ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲಾಽಕಾರಿ, ತಹಸೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿ ಶೀಲನಾ ಸಭೆಗಳು ನಡೆದಿವೆ. ವಿವಿಧ ಇಲಾಖೆಗಳಲ್ಲಿ ೯ ತರಬೇತಿ ಹಾಗೂ ಶಾಲಾ-ಕಾಲೇಜುಗಳಲ್ಲಿ ೨೬೦೯ ಐಇಸಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತAಬಾಕು ವ್ಯಸನಿಗಳಿಗೆ ೯೬ ಗುಂಪು ಚರ್ಚೆ ನಡೆಸಲಾಗಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಂಬಾಕು ವ್ಯಸನ ಮುಕ್ತ ಕೇಂದ್ರಗಳ ಮೂಲಕ ೧೦,೭೦೦ ವ್ಯಸನಿಗಳಿಗೆ ಕೌನ್ಸೆಲಿಂಗ್ ನೀಡಲಾಗಿದೆ. ಇವರಲ್ಲಿ ೮೦ ಜನರು ತಂಬಾಕು ತ್ಯಜಿಸಿದ್ದಾರೆ. ಜಿಲ್ಲೆಯ ೪ ಗ್ರಾ ಮಗಳು, ಎಲ್ಲ ಪ್ರವಾಸಿ ತಾಣಗಳು ಹಾಗೂ ೫ ಪ್ರಮುಖ ದೇವಸ್ಥಾನಗಳನ್ನು ತಂಬಾಕು ಮುಕ್ತ ವಲಯಗಳೆಂದು ಘೋಷಿ ಸಲಾಗಿದೆ ಎಂದರು.
ಬಸಪ್ಪ ಆಸ್ಪತ್ರೆ ಆವರಣದಿಂದ ಆರಂಭವಾದ ಜಾಗÊತಿ ಜಾಥಾ, ತುರುವನೂರು ರಸ್ತೆ ಮಾರ್ಗದ ಕಮ್ಮಾರೆಡ್ಡಿ ಕಲ್ಯಾಣ ಮಂಟಪ ದವರೆಗೆ ಸಾಗಿ, ಬಳಿಕ ಬಸಪ್ಪ ಆಸ್ಪತ್ರೆ ಆವರಣದಲ್ಲಿ ಸಮಾಪನಗೊಂಡಿತು.
ವಿವೇಕಾನAದ ಗ್ರೂಪ್ ಆ-ï ಇನ್‌ಸ್ಟಿಟ್ಯೂಷನ್ಸ್ ಕಾರ್ಯದರ್ಶಿ ಡಾ. ರಂಗಾರೆಡ್ಡಿ, ಪ್ರಾಚಾರ್ಯೆ ರಿನಿರಾಜನ್, ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಕÊಷ್ಣನಾಯ್ಕ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ್, ಸಮಾಜಿಕ ಕಾರ್ಯಕರ್ತ ಕೆ.ಎಂ. ತಿಪ್ಪೇಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಽಕಾರಿ ಮೂಗಪ್ಪ, ದತ್ತಾಂಶ ನಮೂದು ನಿರ್ವಾಹಕಿ ಸಾಗರಿಕ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net