ಚಿತ್ರದುರ್ಗದಲ್ಲಿ ಭಾನುವಾರ ಅಂತಾರಾಷ್ಟಿçÃಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನದ ಪ್ರಯುಕ್ತ ಸಂಗೀತ ಶಿಕ್ಷಕಿ ಎಂ.ಜೆ. ಕೋಕಿಲಾ ರುದ್ರಮೂರ್ತಿ ಅವರಿಗೆ ಚಿನ್ಮೂಲಾದ್ರಿ ಗಾನಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಶಿವಲಿಂಗಾನAದ ಸ್ವಾಮೀಜಿ, ಕೆ.ಎಂ. ವೀರೇಶ್, ಜಿ.ಎಚ್. ಮೋಹನ್‌ಕುಮಾರ್, ಎಲ್.ಎಸ್. ಚಿನ್ಮಯಾನಂದ, ಪರಶುರಾಮ್ ಇತರರು ಇದ್ದರು.
ಸಂಗೀತ ಶಿಕ್ಷಕಿ ಎಂ.ಜೆ. ಕೋಕಿಲಾ ರುದ್ರಮೂರ್ತಿಗೆ ಪ್ರಶಸ್ತಿ ಪ್ರದಾನ
ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ
ಚಿತ್ರದುರ್ಗ: ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಯೋಗಕ್ಕಿದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನAದ ಸ್ವಾಮೀಜಿ ಹೇಳಿದರು.
ಅಂತಾರಾಷ್ಟಿçÃಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನದ ಪ್ರಯುಕ್ತ ನಗರದ ರೋಟರಿ ಬಾಲಭವನದಲಿ ಭಾನುವಾರ ಜಿ ಲ್ಲಾ ಯೋಗಾಸನ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ, ಸಂಗೀತ ಶಿಕ್ಷಕಿ ಎಂ.ಜೆ.ಕೋಕಿಲಾ ರುದ್ರಮೂರ್ತಿ
ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಯೋಗ ಅನ್ನುವುದು ಪ್ರಾಣಾಯಾಮವಿದ್ದಂತೆ. ಪ್ರಾಣವಾಯು ಚೆನ್ನಾಗಿದ್ದರೆ ಎಲ್ಲವೂ ಆರೋಗ್ಯವಾಗಿರುತ್ತದೆ. ಮನಸ್ಸು ಯಾವಾ ಗಲೂ ಪ್ರಶಾಂತವಾಗಿರಬೇಕಾದರೆ ಸಂಗೀತ ಆಲಿಸಬೇಕು. ಸಂಗೀತ ಶಿಕ್ಷಕಿ ಕೋಕಿಲಾ ರುದ್ರಮೂರ್ತಿ ಸಂಗೀತದಲ್ಲಿ ದೊಡ್ಡ ಹೆ ಸರು ಮಾಡಿದ್ದಾರೆ. ಅವರಿಗೆ ನೀಡಿರುವ ಚಿನ್ಮುಲಾದ್ರಿ ಗಾನಸಿರಿ ಪ್ರಶಸ್ತಿ ಸಾಧನೆಗೆ ತಕ್ಕ ಪ್ರತಿ-Àಲ ಎಂದರು.
ನಿವೃತ್ತ ಡಿಡಿಪಿಐ ಕೆ. ರವಿಶಂಕರ್‌ರೆಡ್ಡಿ ಮಾತನಾಡಿ, ನಾವಿಂದು ಒತ್ತಡದ ಜೀವನ ನಡೆಸುತ್ತಿದ್ದೇವೆ. ಅದರಿಂದ ಹೊರಗೆ ಬರಲು ಯೋಗ ಮತ್ತು ಸಂಗೀತ ಎರಡು ಕಣ್ಣುಗಳಿದ್ದಂತೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್‌ಕುಮಾರ್ ಮಾತನಾಡಿ, ವಿಶ್ವ ಮಟ್ಟದಲ್ಲಿ ಯೋಗವನ್ನು ಗುರುತಿಸಲು ನರೇಂದ್ರಮೋದಿ ಪ್ರಧಾನಿಯಾಗಿ ಬರಬೇಕಾಯಿತೇ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ಪ್ರತಿಯೊಬ್ಬರೂ ನಾನಾ ಕಾಯಿಲೆಗಳಿಂದ ಬಳಲುವಂತಾಗಿದೆ.
ರೋಗ ಮುಕ್ತ ಜೀವನಕ್ಕೆ ಯೋಗ ಪ್ರಮುಖ ಸಾಧನ. ಯುವಜನರಿಗೆ ಯೋಗ ಮತ್ತು ಸಂಗೀತದ ಮಹತ್ವ ತಿಳಿಸಬೇಕಿದೆ. ಧ್ಯಾನ ಹಾಗೂ ಯೋಗ ಕೇಂದ್ರ ತೆರೆದು ಹಳ್ಳಿ ಹಳ್ಳಿಗಳಲ್ಲಿ ಯೋಗದ ಮಹತ್ವವನ್ನು ತಿಳಿಸಬೇಕಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ.ಬಸವರಾಜ್ ಮಾತನಾಡಿದರು. ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಎಲ್.ಎಸ್.ಚಿನ್ಮಯಾನಂದ ಅಧ್ಯಕ್ಷತೆ ವಹಿಸಿದ್ದರು. ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷ ತೋ ಟಪ್ಪ ಉತ್ತಂಗಿ ಇದ್ದರು. ಕೋಕಿಲಾ ರುದ್ರಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.