ಒಂದೇ ಪ್ರಯತ್ನದಲ್ಲಿ ಬರವಣಿಗೆ ದಕ್ಕದು

ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಅಂಕಣಕಾರರಾಗಲು ನಡೆಸುವ ಸಿದ್ಧತೆ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು. ಎ.ಆರ್. ಮಣಿಕಂಠ, ಕೆ.ಎಂ. ವೀರೇಶ್, ದಯಾ ಪುತ್ತೂರ್ಕರ್, ಶಾರದಾ ಜೈರಾಮ್, ಬಿ.ಕೆ. ರಹಮತ್‌ಉಲ್ಲಾ, ಸತೀಶ್‌ಕುಮಾರ್, ಜಯದೇವ ಮೂರ್ತಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಅಂಕಣಕಾರರಾಗಲು ನಡೆಸುವ ಸಿದ್ಧತೆ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು. ಎ.ಆರ್. ಮಣಿಕಂಠ, ಕೆ.ಎಂ. ವೀರೇಶ್, ದಯಾ ಪುತ್ತೂರ್ಕರ್, ಶಾರದಾ ಜೈರಾಮ್, ಬಿ.ಕೆ. ರಹಮತ್‌ಉಲ್ಲಾ, ಸತೀಶ್‌ಕುಮಾರ್, ಜಯದೇವ ಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಕಣಕಾರ ಎ.ಆರ್. ಮಣಿಕಾಂತ್ ಅನಿಸಿಕೆ
  • ಅಂಕಣಕಾರರಾಗಲು ನಡೆಸುವ ಸಿದ್ಧತೆ ಕುರಿತು ಉಪನ್ಯಾಸ ಕಾರ್ಯಕ್ರಮ
  • ಉಪನ್ಯಾಸ ಹಾಗೂ ಸಂವಾದ
ಚಿತ್ರದುರ್ಗ: ಒಂದೇ ಪ್ರಯತ್ನದಲ್ಲಿ ಬರವಣಿಗೆ ಯಾರಿಗೂ ಸಿದ್ಧಿಸುವುದಿಲ್ಲ ಎಂದು ಅಂಕಣಕಾರ ಎ.ಆರ್. ಮಣಿಕಾಂತ್ ಹೇಳಿದರು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆÀ ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಂಕಣಕಾರರಾಗಲು ನಡೆಸುವ ಸಿದ್ಧತೆ ಕುರಿತ ಉಪನ್ಯಾಸ ಹಾಗೂ ಸಂವಾದದಲ್ಲಿ ಮಾತನಾಡಿದರು.
ಬರವಣಿಗೆಯನ್ನು ಧಕ್ಕಿಸಿಕೊಳ್ಳಲು ತಾನು ಬರೆದಿದ್ದೇ ಸರಿ ಎಂಬ ಮನೋಭಾವ ಮೊದಲು ತೊರೆಯಬೇಕು. ಮತ್ತೆ, ಮತ್ತೆ ಬರೆ ಯುತ್ತಿರಬೇಕು. ಹೊಸ ವಿಷಯಗಳನ್ನು ಅರಿಯಲು ಶ್ರಮಿಸಬೇಕು. ಬರೆದದ್ದನ್ನು ಹತ್ತು ಬಾರಿ ಓದಬೇಕು. ಇದಕ್ಕಾಗಿ ತಾಳ್ಮೆ ಇರ ದಿದ್ದರೆ ಲೇಖಕ, ಅಂಕಣಕಾರ ಆಗಲು ಸಾಧ್ಯವಾಗದು ಎಂದರು.
ಲೇಖಕರಲ್ಲಿ ಹುಡುಕಾಟದ ಮನೋಭಾವ ಇರಬೇಕು, ಓದು ಅವಿಭಾಜ್ಯವಾಗಿರಬೇಕು. ಸತತ ಓದಿನಿಂದ ಮಾತ್ರ ಉತ್ತಮ ಬರವಣಿಗೆ ಸಾಧ್ಯ ಎಂದು ತಿಳಿಸಿದರು.
ನನ್ನ ಅಂಕಣಗಳಿಗಾಗಿ ಅನ್ಯಭಾಷೆ ಜನರೊಂದಿಗೆ ಮಾತನಾಡಿದ್ದೇನೆ. ಇತರೆ ಭಾಷೆಯ ಜ್ಞಾನದ ಕೊರತೆ ಇದ್ದರೂ ಗೆಳೆಯರ ನೆರ ವಿನೊಂದಿಗೆ ಸಂವಹನ ನಡೆಸಿದ್ದೇನೆ. ಈವರೆಗೂ ನನ್ನ ಯಾವುದೇ ಲೇಖನದಲ್ಲೂ ತಪ್ಪು ಮಾಹಿತಿ ಸುಳಿದಿಲ್ಲ. ಸ್ಪಷ್ಟೀಕರಣದ ಪರಿ ಸ್ಥಿತಿ ಉದ್ಭವಿಸಿಲ್ಲ ಎಂದರು.
ಬರವಣಿಗೆ ವೈವಿಧ್ಯತೆಯಿಂದ ಕೂಡಿರಬೇಕು. ಯಾವುದೇ ವಿಷಯದ ಬಗ್ಗೆ ಬರೆದರೂ ಅದು ನಮ್ಮ ನೆಲಕ್ಕೆ ಹತ್ತಿರವಾಗಿರಬೇಕು. ಓದುಗರಿಗೆ ಹೊಸತÀನ್ನು ಕೊಡಬೇಕೆಂಬ ಹಂಬಲವೇ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ನನ್ನ ಅತ್ಯಂತ ಯಶಸ್ವಿ ಕೃತಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾ ಮೀಜಿ ಮಾತನಾಡಿ, ನಮ್ಮ ದೇಶದ ವಿವಿಧ ಪ್ರಾಂತ್ಯಕ್ಕೆ ಅನುಗುಣವಾಗಿ ಸಾಹಿತ್ಯ ಜನಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಆರಂಭವಾ ದ ರೈತ ಚಳವಳಿ ದೇಶದಾದ್ಯಂತ ಹರಡಿದ್ದನ್ನು ನಾವು ನೋಡಬಹುದು.
ಕ್ರಾಂತಿಕಾರಿ ಸಾಹಿತ್ಯ ರೈತ ಚಳವಳಿಗೆ ಕಾರಣ ವಾಗಿದೆ. ತಮಿಳುನಾಡಿನ ದ್ರಾವಿಡ ಚಳವಳಿ ಕೂಡ ಸಾಹಿತ್ಯದಿಂದಲೇ ಸೂರ್ತಿ ಪಡೆದಿದೆ. ನಮ್ಮ ನಾಡಿನ ವಚನ ಚಳವಳಿ ಕೂಡ ಅತ್ಯಂತ ಪ್ರಮುಖವಾಗಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಸಾಮಾಜಿಕ ಸಾಮರಸ್ಯ ಕ್ಕೆ ಸಾಹಿತ್ಯದ ಪಾತ್ರ ಹಿರಿದಾಗಿದೆ. ಇದು ಬದುಕಿನ ಪ್ರತಿಬಿಂಬವೂ ಹೌದು. ಹಲವು ಸಾಹಿತಿಗಳು ತಮ್ಮ ಬದುಕಿಗೆ ಬರವಣಿಗೆ ರೂ ಪ ನೀಡಿದ್ದಾರೆ. ಚಿತ್ರದುರ್ಗ ಹಲವು ಸಾಹಿತಿಗಳ ತವರು ಎಂದು ಗುರುತಿಸಿಕೊಂಡಿದೆ ಎಂದರು.
ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್, ಅಧ್ಯಕ್ಷೆ ಶಾರದಾ ಜೈರಾಮ್, ಗೌರವಾಧ್ಯಕ್ಷ ಬಿ.ಕೆ. ರಹಮತ್ ಉಲ್ಲಾ, ಸತೀಶ್ ಕುಮಾರ್, ಜಯದೇವ ಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net