ಮುಂಬೈನ ಹೋಮಿಬಾಬಾ ವಿಜ್ಞಾನ ಕೇಂದ್ರ, ಭಾರತೀಯ ಭೌತವಿಜ್ಞಾನ ಪ್ರಾಧ್ಯಾಪಕರ ವೇದಿಕೆ ಮತ್ತು ಐಐಎಸ್ಸಿ ಸಹಯೋಗದಲ್ಲಿ ಆನ್‌ಲೈನ್ ಮೂಲಕ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯನ್ನು ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಪ್ರಸಕ್ತ ವರ್ಷ ದೇಶದಾದ್ಯಂತ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಉತ್ತಮ ಅಂಕಗಳಿಸಿದ 36ವಿದ್ಯಾರ್ಥಿಗಳನ್ನು ಮಾತ್ರ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.