ಬಿತ್ತನೆಯಾಗಿ 3-4 ವಾರಗಳು ಕಳೆಯುತ್ತಿದ್ದರೂ ಮಳೆರಾಯನ ದರ್ಶನವಿಲ್ಲ. ತೊಗರಿ, ಶೇಂಗಾ ಮೊಳಕೆಯೊಡೆದು ಚಿಗುರುತ್ತಿದ್ದರೂ ಮಳೆ ಇಲ್ಲದೆ ಬಾಡಲಾರಂಭಿಸಿವೆ. ಕೊಂಡ್ಲಹಳ್ಳಿ, ಮೊಗಲಹಳ್ಳಿ, ಕೋನಸಾಗರ ಇತರೆಡೆಗಳಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಮೊಳಕೆಯಾಗುತ್ತಿರುವ ಬೆಳೆಗೆ ತೇವಾಂಶದ ಕೊರತೆ, ಕೀಟಬಾಧೆ ಹಾಗೂ ಬೆಳೆ ಹಾನಿ ಸಂಭವಿಸುವ ಭೀತಿ ಎದುರಾಗಿದೆ. ಮಳೆ ಅಭಾವ ನೀರಾವರಿ ಬೆಳೆಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ.