ರಾಜ್ಯ ಮಾದಿಗ ನೌಕರರ ಸಂಘದ ಜಿ¯್ಲÁ ಶಾಖೆ ವತಿಯಿಂದ ಚಿತ್ರದುರ್ಗದಲ್ಲಿ ಭಾನುವಾರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಷಡಾಕ್ಷರಮುನಿ ಸ್ವಾಮೀಜಿ, ಜಿ.ಎಸ್. ಮಂಜುನಾಥ್, ಬಿ.ಎನ್. ಚಂದ್ರಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ತಿಪ್ಪೇಸ್ವಾಮಿ, ರುದ್ರಮುನಿ, ಸಿದ್ದಲಿಂಗಮ್ಮ, ನಾಗರಾಜ್, ಪ್ರೇಮನಾಥ್, ಮೋಹನ್ ಇತರರು ಇದ್ದರು.
ಚಿತ್ರದುರ್ಗ: ಅನ್ಯ ಜಾತಿಯವರನ್ನು ಎಸ್ಸಿಗೆ ಸೇರಿಸಿದ ನಂತರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕಿತ್ತು. ಆ ದರೆ, ಮಾದಿಗ ಸಮಾಜಕ್ಕೆ ಕಾಂಗ್ರೆಸ್‌ನಿAದ ಅನ್ಯಾಯವಾಗಿದೆ. ಆದರೂ ಕೇಂದ್ರದ ಕಡೆ ಬೊಟ್ಟು ಮಾಡುವುದು ಎಷ್ಟು ಸರಿ ಎಂ ದು ಸಂಸದ ಗೋವಿಂದ ಎಂ. ಕಾರಜೋಳ ಪ್ರಶ್ನಿಸಿದರು.
ರಾಜ್ಯ ಮಾದಿಗ ನೌಕರರ ಸಂಘದ ಜಿ¯್ಲÁ ಶಾಖೆಯಿಂದ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿವಶರಣ ಮಾದಾರ ಚನ್ನಯ್ಯ ಸಭಾ ಭವನದಲ್ಲಿ ಭಾ ನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
೧೯೫೦ರಲ್ಲಿ ಮೊಟ್ಟ ಮೊದಲು ಮೀಸಲಾತಿ ಜಾರಿಯಾದಾಗ ಎಸ್ಸಿ, ಎಸ್ಟಿಯಲ್ಲಿ ತಲಾ ಆರು ಜಾತಿಗಳಿದ್ದವು. ಈಗ ಕ್ರಮವಾಗಿ ೧೦೧, ೫೬ ಜಾತಿಗಳಿವೆ. ಸಮುದಾಯಗಳ ಸಂಖ್ಯೆ ಹೆಚ್ಚಿಸುವುದು ಮುಖ್ಯವಲ್ಲ. ಮೀಸಲಾತಿ ಅಽಕವಾಗಬೇಕಿತ್ತು. ಓಬಿಸಿಗೆ ಮೀ ಸಲಾತಿ ಕೊಟ್ಟಿದ್ದು, ನಮಗೇಕಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಪಾಲಿಸಿ ಸಮರ್ಪಕವಾಗಿ ಒಳಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಶ್ರೇಷ್ಠ ಕೆಲಸ. ಇನ್ನಷ್ಟು ಸಾಧನೆಗೆ ಉತ್ತೇಜಿಸಿದಂತಾಗುತ್ತದೆ. ಆದ್ದರಿಂದ ಮುಂದಿನ ವರ್ಷದಿಂದ ಬೃಹತ್ ಮಟ್ಟದಲ್ಲಿ ಆಯೋಜಿಸುವಂತೆ ಸಲಹೆ ನೀಡಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ. ಎಲ್ಲ ಸಮುದಾಯಗಳೊಟ್ಟಿಗೆ ನಮ್ಮ ಮಕ್ಕಳು ಪೈಪೋಟಿಗೆ ಸಿದ್ಧರಾಗಬೇಕು. ಸರ್ಕಾರದ ಸೌಲಭ್ಯ ಬಳಸಿಕೊಂಡು ವೈದ್ಯರು, ಇಂಜಿನಿಯರ್ ಸೇರಿ ಉನ್ನತ ಮಟ್ಟಕ್ಕೇರಬೇಕು ಎಂದು ಕಿವಿಮಾತು ಹೇಳಿದರು.
*ಗೊಂದಲ:
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಮೇಲ್ವರ್ಗದವರು ಕೇಳದಿದ್ದರೂ ಪ್ರಧಾನಿ ಮೋ ದಿ ಶೇ. ೧೦ರಷ್ಟು ಮೀಸಲಾತಿ ಕೊಟ್ಟರು. ಆಗ ತಿದ್ದುಪಡಿ ಮಾಡಲು ಸಾಧ್ಯವಾಯಿತು. ಮಾದಿಗರಿಗೆ ನೀಡಲು ಏಕೆ ಆಗಲಿಲ್ಲ ಎಂ ದು ಸಂಸದರ ಪ್ರಶ್ನೆಗೆ ತಿರುಗೇಟು ನೀಡಿದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮೇಲ್ವರ್ಗದವರೊಟ್ಟಿಗೆ ಪೈಪೋಟಿ ಅಸಾಧ್ಯ. ಅದಕ್ಕಾಗಿ ಮಾದಿಗರೆಲ್ಲ ಒಂದಾಗಬೇಕು. ಒಳಮೀಸಲಾತಿ ಅರ್ಹರಿಗೆ ಸಿಗಬೇಕು. ಶಿಕ್ಷಣ, ನೌಕರಿಯಲ್ಲಿ ಮೀಸಲಾತಿ ಸಿಕ್ಕರೆ ಸಾಲದು. ಆರ್ಥಿಕವಾಗಿಯೂ ದೊರೆಯಬೇಕು. ಆಗ ೩೯ ಇಲಾಖೆಯಲ್ಲಿನ ಸಮುದಾ ಯದ ನೌಕರರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ಕೀಳು ರಾಜಕಾರಣ ಇಂದಿಗೂ ಇದೆ. ಲೋಕಸಭೆ ಚುನಾವಣೆ ವೇಳೆ ಚಿತ್ರದು ರ್ಗ ಕ್ಷೇತ್ರಕ್ಕೆ ನಾನು ಸ್ಪಽðಸಿದಾಗ ಕೆಲವರು ಮಾಶಾಲ ಸಮಾಜವೆಂದು ನನ್ನ ವಿರುದ್ಧ ಅಪ ಪ್ರಚಾರ ಮಾಡಿದರು. ಆದರೆ, ನಾ ನು ಮೂಲತಃ ಆದಿ ಕರ್ನಾಟಕ. ನನ್ನ ವಿರುದ್ಧ ನಡೆದ ಕುತಂತ್ರದಿAದ ಸೋಲಬೇಕಾಯಿತು ಎಂದು ಭಾವುಕರಾದರು.
ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿ¯್ಲÁ ಶಾಖೆ ಗೌರವಾಧ್ಯಕ್ಷ ಎಂ. ನಾರಾಯಣಸ್ವಾಮಿ, ಪದಾಽಕಾರಿಗಳಾದ ಎಂ.ತಿಪ್ಪೇಸ್ವಾಮಿ, ಬಿ. ರುದ್ರಮುನಿ, ಜೆ. ಸಿದ್ದಲಿಂಗಮ್ಮ, ಆರ್.ಜಿ. ನಾಗರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿ¯್ಲÁಧ್ಯಕ್ಷ ಬಿ.ಪಿ.ಪ್ರೇಮನಾ ಥ್, ಬಿಜೆಪಿ ಮೋಹನ್ ಇತರರಿದ್ದರು.
ಅವಕಾಶ ಸದ್ಬಳಕೆ ಮಾಡಿಕೊಳ್ಳಿ
ಸರ್ಕಾರ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿ ಅವಕಾಶ ಮಾಡಿಕೊಟ್ಟಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭ ವಿಷ್ಯ ರೂಪಿಸಿಕೊಳ್ಳಿ. ನಾಯಕತ್ವ ಗುಣ ಮೈಗೂಡಿಸಿಕೊಳ್ಳಿ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿ ದರು.
ದುಷ್ಟಶಕ್ತಿಗಳ ಜೊತೆ ಸೇರಬೇಡಿ
ರಾಜಕೀಯದಲ್ಲಿ ಮೂಲೆ ಗುಂಪು ಮಾಡುವ ದುಷ್ಟಶಕ್ತಿಗಳ ಜೊತೆ ಇರಬೇಡಿ. ಹೊರಬಂದು ಸ್ವಂತ ಸಾಮರ್ಥ್ಯದ ಮೇಲೆ ಬೆಳೆಯು ವಂತೆ ಷಡಾಕ್ಷರಮುನಿ ಸ್ವಾಮೀಜಿ ಸಲಹೆ ನೀಡಿದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಿಕೊಳ್ಳಿ. ಕೀಳರಿಮೆ ಬಿಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಅದಕ್ಕಾಗಿ ಶಿಕ್ಷಣವೊಂದೇ ಪ್ರಮುಖ ಅಸö ಎಂದು ತಿಳಿಸಿದರು.