ಐಮಂಗಲ ಹೋಬಳಿ ಕೆರೆಗಳಿಗೆ ನೀರು ಶೀಘ್ರ Bhadra

ಐಮಂಗಲದ ಶ್ರೀ ಕಲ್ಕುಂಟೆ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಅಪ್ಪರ್ ಭದ್ರ್ರಾ ನೀರಾವರಿ ಹೋರಾಟ ಸಮಿತಿ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಧಾನ ಅಭಿಯಂತರ ಸಣ್ಣಚಿತ್ತಯ್ಯ ಮಾತನಾಡಿದರು. ಎನ್. ತಿಪ್ಪೀರಯ್ಯ, ಕೆ.ಟಿ. ತಿಪ್ಪೇಸ್ವಾಮಿ, ಹನುಮಂತರೆಡ್ಡಿ, ಡಿ.ಆರ್. ಆನಂದಪ್ಪ, ಬಿ.ಟಿ. ಶಾಂತಣ್ಣ, ಒ.ಜಿ. ಬಸವರಾಜ್ ಇತರರು ಇದ್ದರು. Bhadra
ಐಮಂಗಲದ ಶ್ರೀ ಕಲ್ಕುಂಟೆ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಅಪ್ಪರ್ ಭದ್ರ್ರಾ ನೀರಾವರಿ ಹೋರಾಟ ಸಮಿತಿ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಧಾನ ಅಭಿಯಂತರ ಸಣ್ಣಚಿತ್ತಯ್ಯ ಮಾತನಾಡಿದರು. ಎನ್. ತಿಪ್ಪೀರಯ್ಯ, ಕೆ.ಟಿ. ತಿಪ್ಪೇಸ್ವಾಮಿ, ಹನುಮಂತರೆಡ್ಡಿ, ಡಿ.ಆರ್. ಆನಂದಪ್ಪ, ಬಿ.ಟಿ. ಶಾಂತಣ್ಣ, ಒ.ಜಿ. ಬಸವರಾಜ್ ಇತರರು ಇದ್ದರು. Bhadra
Published on

ಪ್ರಮುಖ ಮುಖ್ಯಾಂಶಗಳು

  • ಸಣ್ಣಚಿತ್ತಯ್ಯ ಹೇಳಿಕೆ
  • ನೀರಾವರಿ ಹೋರಾಟ ಸಮಿತಿಯಿಂದ ಚಿಂತನ ಮಂಥನ
ಐಮಂಗಲ: ಭದ್ರಾ ಮೇಲ್ದಂಡೆ ಯೋಜನೆಯಡಿ ಹೋಬಳಿಯ ಕೆರೆಗಳಿಗೆ ಶೀಘ್ರದಲ್ಲೇ ನೀರು ಹರಿದುಬರಲಿದೆ ಎಂದು ನಿವೃತ್ತ ಪ್ರಧಾನ ಅಭಿಯಂತರ ಸಣ್ಣ ಚಿತ್ತಯ್ಯ ಹೇಳಿದರು. Bhadra
ಗ್ರಾಮದ ಶ್ರೀ ಕಲ್ಕುಂಟೆ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಅಪ್ಪರ್ ಭದ್ರಾ ನೀರಾವರಿ ಹೋರಾಟ ಸಮಿತಿ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯುತ್ ಸಮಸ್ಯೆಯಿಂದ ಕಾಮಗಾರಿ ಮಂದಗತಿಯಲ್ಲಿತ್ತು. ಪ್ರಸ್ತುತ ಶೇ. 95ರಷ್ಟು ಕಾಮಗಾರಿ ಮುಗಿದಿದೆ. ಬಾಕಿ ಕೆಲಸ ಪೂರ್ಣಗೊಳಿಸಿ ಶೀಘ್ರ ನೀರು ಬಿಡಲಾಗುತ್ತದೆ ಎಂದರು.
2019ರಲ್ಲಿ ವೈ ಜಂಕ್ಷನ್ ಮೂಲಕ ವಿವಿ ಸಾಗರಕ್ಕೆ ನೀರು ತರಲಾಗಿತ್ತು. ಈಗಾಗಲೇ 30 ಟಿಎಂಸಿ ನೀರು ಸಂಗ್ರಹವಾಗಿದ್ದು 6 ಟಿಎಂಸಿ ನೀರು ಬಳಕೆ ಮಾಡಲಾಗುತ್ತದೆ. ಇನ್ನೂ 4 ವರ್ಷ ಮಳೆ ಕೊರೆತೆಯಾದರೂ ವಿವಿ ಸಾಗರ ಜಲಾಶಯದಲ್ಲಿ ನೀರಿನ ಸಮಸ್ಯೆ ಉಂಟಾಗದು ಎಂದರು.
ಸಮಿತಿ ಕಾರ್ಯದರ್ಶಿ ಯಶ್ವಂತ್‌ರಾಜ್ ಮಾತನಾಡಿ, ಐಮಂಗಲ ಹೋಬಳಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, 35 ಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ರೈತರು ಬೆಳೆ ಕಾಪಾಡಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಜಾನುವಾರುಗಳಿಗೆ ನೀರು ದೊರೆಯುವುದು ದುಸ್ತರವಾಗಿದೆ. ಅಪ್ಪರ್ ಭದ್ರಾದಡಿ ಕೆರೆಗಳಿಗೆ ನೀರು ಬಂದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಅಪ್ಪರ್ ಭದ್ರಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎನ್. ತಿಪ್ಪೀರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಹನುಮಂತರೆಡ್ಡಿ, ಡಿ.ಆರ್. ಆನಂದಪ್ಪ, ಬಿ.ಟಿ. ಶಾಂತಣ್ಣ, ಒ.ಜಿ. ಬಸವರಾಜ್, ಕೆ.ಟಿ. ಕೆಂಚಪ್ಪ, ಎಚ್.ಟಿ. ಚಂದ್ರಶೇಖರ್, ಎಸ್.ಪಿ. ಪಾತಪ್ಪ, ವಿವಿಧ ಗ್ರಾಮದ ರೈತರು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net