ವಿವಿ ಸಾಗರದಿಂದ ದುರ್ಗಕ್ಕೆ ನೀರು

 ಚಿತ್ರದುರ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಚಿತ್ರ.
ಚಿತ್ರದುರ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • * ೨೦೫೮ರ ನಗರದ ಜನಸಂಖ್ಯೆ ಆಧರಿಸಿ ಹೊಸ ಯೋಜನೆ
  • ೪೭೦ ಕೋಟಿ ರೂ.ವೆಚ್ಚ
  • ಡಿಪಿಆರ್‌ಗೆ ನಡೆದಿದೆ ಸಿದ್ಧತೆ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ಚಿತ್ರದುರ್ಗ ನಗರಕ್ಕೆ ಶುದ್ಧ ಕುಡಿವ ನೀರು ಪೂರೈಸಲು ಹಿರಿಯೂರಿನ ವಾಣಿ ವಿಲಾಸ ಸಾಗರದಿಂದ ೨ನೇ ಹಂತದ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದ್ದು, ಈ ಯೋಜನೆ ಮೂಲಕ ೨ ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವ ಚಿಂತನೆ ಇದೆ.
ವಿವಿ ಸಾಗರದಿಂದ ೫೦ ಎಂಎಲ್‌ಡಿ ನೀರನ್ನು ಚಿತ್ರದುರ್ಗ ತಾಲೂಕು ಕುಂಚಿಗನಾಳ್ ಗುಡ್ಡದ ಎತ್ತರಕ್ಕೆ, (೫೫ ಕಿ.ಮಿ. ದೂರ) ಹರಿಸಿ ಅಲ್ಲಿಂದ ನಗರಕ್ಕೆ ಗುರುತ್ವಾಕರ್ಷಣೆ ಮೂಲಕ ಸರಬರಾಜು ಮಾಡುವ ಪ್ಲಾನ್ ಸಿದ್ಧವಾಗುತ್ತಿದೆ. ಇದಕ್ಕಾಗಿ ೧೦ ಎಕರೆ ಜಾಗದಲ್ಲಿ(ಗುಡ್ಡ) ೪೦ ಎಂಎಲ್‌ಡಿ ಸಾಮರ್ಥ್ಯದ ವಾಟರ್ ಟ್ರಿಟ್‌ಮೆಂಟ್ ಪ್ಲಾಂಟ್ ಹಾಗೂ ೫೦ ಎಂಎಲ್ ಸಂಗ್ರಹ ಸಾಮರ್ಥ್ಯದ IZoಠಿಛ್ಟಿ ಆZ್ಝZ್ಞ್ಚಜ್ಞಿಜ ್ಕಛಿoಛ್ಟಿqಟಜ್ಟಿ(ಎಂಬಿಆರ್)ನ್ನು ನಿರ್ಮಿಸಲಾಗುತ್ತದೆ.
ಜಲಾಶಯದಲ್ಲಿ ಹೊಸ ಜಾಕ್‌ವೆಲ್, ಪಂಪ್‌ಹೌಸ್, ಪವರ್ ಸಪ್ಲೆÊ, ನೀರು ಸರಬರಾಜು ಜಾಲ ಇತ್ಯಾದಿ ನಿರ್ಮಾಣಕ್ಕೆ ಸಂಬ Aಽಸಿದ ಸಮೀಕ್ಷೆ ಕಾರ್ಯ ೨-೩ ದಿನಗಳಲ್ಲಿ ಆರಂಭವಾಗಲಿದೆ.
ಇದಾದ ಬಳಿಕ ಇನ್ನು ೨ ತಿಂಗಳೊಳಗೆ ವಿಸುöತ ಯೋಜನಾ ವರದಿಯೊಂದಿಗೆ ಅಂದಾಜು ೪೭೦ ಕೋಟಿ ರೂ.ವೆಚ್ಚದ ಈ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಮಂಡಳಿ ಸಜ್ಜಾಗುತ್ತಿದೆ.
ಚಿತ್ರದುರ್ಗಕ್ಕೆ ೧೮ ವರ್ಷಗಳಿಂದ ದಾವಣಗೆರೆ ಶಾಂತಿ ಸಾಗರ ಮತ್ತು ವಿವಿ ಸಾಗರದಿಂದ ಕುಡಿವ ನೀರು ಸರ¨ರಾಜು ಮಾಡ ಲಾಗುತ್ತಿದೆ. ೨೦೩೦ರ ಅಂದಾಜು ಜನಸಂಖ್ಯೆ ಆಧರಿಸಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ ಈಗಾಗಲೇ ನಗರವನ್ನು ಕುಡಿವ ನೀರಿನ ಕೊರತೆ ಭಾದಿಸುತ್ತಿದೆ.
ಶಾಂತಿಸಾಗರದಿAದ ೭೦ ಕಿ.ಮಿ.ಉದ್ದೇಶಿತ ೨೦ ಎಂಎಲ್‌ಡಿ ಬದಲು ೧೫ ಎಂಎಲ್‌ಡಿ ಹಾಗೂ ಹಾಗೂ ವಿವಿಸಾಗರದಿಂದ ೬೦ ಕಿ.ಮಿ. ದೂರದಿಂದ ೯ ಎಂಎಲ್‌ಡಿ ಬದಲು ೧೦ ಎಂಎಲ್‌ಡಿ ನೀರನ್ನು ಚಿತ್ರದುರ್ಗಕ್ಕೆ ತರಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೂ ಪೂರೈಕೆಯಲ್ಲಿ ಆಗುವ ಅಡಚಣೆಗಳಿಂದಾಗಿ ನಗರದಲ್ಲಿ ಸದ್ಯ ಅಂದಾಜಿಸಿರುವ ೧.೮೨ ಲಕ್ಷ ಜನರಿಗೆ ಸಮರ್ಪಕವಾಗಿ ಶುದ್ಧ ಕುಡಿವ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.
ಅಽಕಾರಿಗಳಿಗೆ ನಿರ್ದೇಶನ
೨ನೇ ಹಂತದ ಯೋಜನೆ ಅನುಷ್ಠಾನವಾಗುವವರೆಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲು ತುರ್ತು ಕ್ರಮ ವಹಿಸುವಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಟಿ.ರಘು ಮೂರ್ತಿ ಅವರು ನಗರಸಭೆ ಅಽಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಹೊಸ ಯೋಜನೆ ಅನುಷ್ಠಾನವಾದರೆ, ಹಳೆಯ ೨ ಯೋಜನೆಗಳ ೩೫೦ ಕಿ.ಮಿ.ಉದ್ದ ಹಾಗೂ ಹೊಸದಾಗಿ ನಿರ್ಮಿಸುವ ೩೫೦ ಕಿ.ಮಿ.ಸಹಿತ ಒಟ್ಟು ೭೦೦ ಕಿ.ಮಿ.ಪೈಪ್‌ಲೈನ್ ಮೂಲಕ ನಗರಕ್ಕೆ ನೀರು ಸರಬರಾಜು ಆಗಲಿದೆ.ಈ ಬಾರಿ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಾಡಿಯಿಸುವ ಆತಂಕ ಎದುರಾಗಿದೆ.
ಮಹಾನಗರಪಾಲಿಕೆ ರಚನೆ?
೩೪ ವಾರ್ಡ್ಗಳ ಚಿತ್ರದುರ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಪ್ರಸ್ತಾವನೆ ಇದೆ. ಜಿ ಪಂ ಸಿಇಒ ಡಾ.ಎಸ್.ಆಕಾಶ್ ಅವರು ಸಭೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪಾಲಿಕೆಗೆ ಸರ್ಕಾರದಿಂದ ಒಪ್ಪಿಗೆ ಪಡೆಯಬೇ ಕಿದೆ ಎಂದು ಸಚಿವರ ಗಮನ ಸೆಳೆದಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಸಚಿವರು ಅಗತ್ಯ ವರದಿ ಕೇಳಿದ್ದಾರೆ. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ಕೂಡ ಪಾಲಿಕೆಗೆ ಆಸಕ್ತಿ ವಹಿಸಿದ್ದಾರೆ. ನಗರದಲ್ಲಿ ನೀರು ಕೊರತೆ ಕುರಿತು ಸಂಸದ ಗೋವಿಂದ ಎಂ.ಕಾರಜೋಳ ಅವರು ಅಸಮಾಧಾನ ವ್ಯಕ್ತಪಡಿಸಿದ್ದಿದೆ. ಮಂಡಳಿ ಉದ್ದೇಶಿತ ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನವಾದರೆ ನಗರದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದೆ.
"

ಕೋಟ್೨೦೫೮ಕ್ಕೆ ಚಿತ್ರದುರ್ಗ ನಗರದ ಜನಸಂಖ್ಯೆ ೩.೩೬ಲಕ್ಷವೆಂದು ಅಂದಾಜಿಸಿ,ಚಿತ್ರದುರ್ಗಕ್ಕೆ ವಿವಿ ಸಾಗರದಿಂದ ೨ನೇ ಹಂತದಲ್ಲಿ ನೀರು ಪೂರೈಸುವ ಈ ಯೋಜನೆ ಲೈನ್‌ಎಸ್ಟಿಮೇಟ್ ಸಿದ್ಧವಾಗಿದೆ. ಈ ಯೋಜನೆಗೆ ವರ್ಷಕ್ಕೆ ೨ ಟಿಎಂಸಿ ನೀರು ಬೇಕಾಗಲಿದೆ.

— ಎಲ್.ಮಲ್ಲೇಶ್ ನಾಯಕ್,ಇಇ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಕೋಟ್
"

ಚಿತ್ರದುರ್ಗ ನಗರದ ೩೪ ವಾರ್ಡ್ಗಳ ಪೈಕಿ ೮ಕ್ಕೆ ನಿತ್ಯ, ೧೨ಕ್ಕೆ ಎರಡು ದಿನಗಳಿಗೊಮ್ಮೆ ಹಾಗೂ ೧೪ ವಾರ್ಡ್ಗಳಿಗೆ ೩ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಸುಸ್ಥಿತಿಯಲ್ಲಿರುವ ೩೪೩ ಕೊಳವೆ ಬಾವಿಗಳ ಮೂಲಕವೂ ನಗರಕ್ಕೆ

— ಕುಡಿವ ನೀರು ಪೂರೈಕೆ ಆಗುತ್ತಿದೆ. ಎಸ್.ಲಕ್ಷಿ÷್ಮÃ,ಆಯುಕ್ತರು, ನಗರಸಭೆ,ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net