ಜಿಲ್ಲೆಯಲ್ಲಿ ಜಲ ಮೂಲದ ಸಂರಕ್ಷಣೆಯಡಿ ಅಂತರ್ಜಲ ವೃದ್ಧಿ, ಜಲ ಸಂರಕ್ಷಣೆಗೆ ಅದ್ಯತೆ ನೀಡಲಾಗಿದೆ. ಮಳೆ ನೀರು ಸಂರಕ್ಷಣೆ ಕಾ ಮಗಾರಿ, ಕಂದಕ, ಬದು, ಕೆರೆ ಹೂಳೆತ್ತುವುದು, ಕೆರೆ, ಕಟ್ಟೆ, ಕಾಲುವೆ, ಕಲ್ಯಾಣಿಗಳ ಅಭಿವೃದ್ಧಿ, ಚೆಕ್‌ಡ್ಯಾಮ್‌ಗಳ ನಿರ್ಮಾಣ, ಇಂಗು ಗುAಡಿ ಸೇರಿ ಹಲವು ಕಾಮಗಾರಿಗಳಿಂದಾಗಿ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಾಗಲು ಕಾರಣವಾಗಿದೆ.