ಡಿಸಿಎಂಗೆ ವಿಜಯೇಂದ್ರ ಪಂಥಾಹ್ವಾನ

ಚಿತ್ರದುರ್ಗದಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಸದ ಗೋವಿಂದ ಎಂ.ಕಾರಜೋಳ,ಎಸ್.ಲಿAಗಮೂರ್ತಿ,ಕೆ.ಟಿ.ಕುಮಾರಸ್ವಾಮಿ,ಹನುಮAತೇಗೌಡ,ಜಿ.ಎಸ್.ಅನಿತ್‌ಕುಮಾರ್,ಪಟೇಲ್‌ಶಿವಕುಮಾರ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಸದ ಗೋವಿಂದ ಎಂ.ಕಾರಜೋಳ,ಎಸ್.ಲಿAಗಮೂರ್ತಿ,ಕೆ.ಟಿ.ಕುಮಾರಸ್ವಾಮಿ,ಹನುಮAತೇಗೌಡ,ಜಿ.ಎಸ್.ಅನಿತ್‌ಕುಮಾರ್,ಪಟೇಲ್‌ಶಿವಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾದಯಾತ್ರೆ ಕುರಿತು ಶೀಘ್ರ ನಿರ್ಧಾರ
  • ನರೇAದ್ರ ಮೋದಿ ಕೈ ಬಲಪಡಿಸಲು ಮೈತ್ರಿ
  • ಬಳ್ಳಾರಿಯಿಂದ ಬೆಂಗಳೂರಿಗೆ ಪಾದ ಯಾತ್ರೆ
ಚಿತ್ರದುರ್ಗ:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ,ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ನರೇಂದ್ರಮೋದಿ ಅವರ ಕೈ ಬಲಪಡಿಸಲು ಎನ್‌ಡಿಎ ಮೈತ್ರಿಕೂಟ ಸೇರಿದ್ದಾರೆಂದು ಕೋಲಾರ,ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಗೊಂದಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದರು.
ಮೈತ್ರಿ ಕುರಿತಂತೆ ಏನೇ ಮಾತನಾಡಿದರೂ,ಸ್ಥಳೀಯವಾಗಿ ಏನೆಲ್ಲ ನಿರ್ಧಾರವಾಗ ಬೇಕೆಂದು ರಾಷ್ಟಿçÃಯ ನಾಯಕರು ನಮ್ಮ ಹಾ ಗೂ ಜೆಡಿಎಸ್ ಪ್ರಮುಖರ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದು ಕೊಳ್ಳಲಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ಪಾದ ಯಾ ತ್ರೆ ಮಾಡ ಬೇಕೆಂದು ಮಾಜಿ ಸಚಿವರಾದ ಜನಾರ್ದನ ರೆಡ್ಡಿ,ಬಿ.ಶ್ರೀರಾಮುಲು ಸೇರಿದಂತೆ ಎಲ್ಲರ ಅಭಿಪ್ರಾಯವಿದೆ. ನಾನು ವರಿಷ್ಠ ರೊಂದಿಗೆ ಚರ್ಚಿಸಿದ್ದೇನೆ.ಗುರುವಾರದೊಳಗೆ ಸಂದೇಶದ ನಿರೀಕ್ಷೆಯಲ್ಲಿದ್ದೇವೆ. ಜ ೧೭ರಂದು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಯಲಿ ದೆ.
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ರೈತರ ಸಮಸ್ಯೆ ಇದೆ. ಮಾದಕ ವಸ್ತು ಸಮಸ್ಯೆಯೂ ರಾಜ್ಯವನ್ನು ಕಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಂಥ ಈ ಸನ್ನಿವೇಶದಲ್ಲಿ ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆ ಸಲು ನಿರ್ಧರಿಸಲಾಗಿದೆ.
ಮೊದಲ ಹಂತದಲ್ಲಿ ಬಳ್ಳಾರಿಯಲ್ಲಿ ಪ್ರತಿಭಟಿಸಲಾಗುತ್ತದೆ. ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ನಾಯಕರು ಹೋಗಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್,ಶಿಕಾರಿಪುರದಲ್ಲಿ ಪಾದಯಾತ್ರೆ ಬದಲು ಅಲ್ಲಿದಂಲೇ ವಿಧಾನಸಭೆಗೆ ಸ್ಪಽðಸಲಿ ಎಂದು ವಿಜಯೇಂದ್ರ, ಶಿವಕುಮಾರ್ ಅವರಿಗೆ ಪಂಥಾಹ್ವಾನ ನೀಡಿದರು.
ಗ್ರಾಮೀಣಾಭಿವೃದ್ಧಿಯಿಂದ ದೇಶದ ಅಭಿವÊದ್ಧಿ ಎಂಬ ಮಹಾತ್ಮ ಗಾಂಽÃಜಿ ಅವರ ಆಶಯಕ್ಕೆ ಪೂರಕವಾಗಿ ಪ್ರಧಾನಮಂತ್ರಿ ಒಳ್ಳೆ ಉ ದ್ದೇಶದೊಂದಿಗೆ ಜಾರಿಗೊಳಿಸಿರುವ ವಿಬಿಜಿ ರಾಮ್‌ಜೀಯಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲಿದೆ. ಆದರೆ ಸಿದ್ದರಾಮಯ್ಯ, ರಾಹುಲ್ ಗಾಂಽ ಸೇರಿದಂತೆ ಕಾಂಗ್ರೆಸ್ ನಾಯಕರು ವಿಬಿಜಿರಾಮ್‌ಜೀ ವಿರುದ್ಧ ಅಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಈ ನಿಟ್ಟಿನಲ್ಲಿ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲಿದೆ.
ಸಂಸದ ಗೋವಿಂದ ಎಂ.ಕಾರಜೋಳ,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್‌ಸಿ ಕೆ.ಎಸ್.ನವೀನ್,ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ,ಹನುಮಂತೇಗೌಡ,ಡಾ.ಸಿದ್ದಾರ್ಥ ಗುಂಡಾರ್ಫಿ, ಜಿ. ಎಸ್.ಅನಿತ್‌ಕುಮಾರ್,ಪಟೇಲ್‌ಶಿವಕುಮಾರ್ ಇತರರು ಇದ್ದರು.
ಗೊಂದಲದ ಗೂಡು ಕೈ ಪಡೆ
ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಅವರು,ಮೈಸೂರಲ್ಲಿ ಸಿಎಂ ಮತ್ತು ಡಿಸಿಎಂ ಜತೆ ಪ್ರತ್ಯೇಕವಾಗಿ ಮಾತಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳ ಬೇಕೆಂದು ಒಬ್ಬರು, ಮತ್ತೊಬ್ಬರು ನನ್ನ ತಾಳ್ಮೆ ಕೆಣಕಬೇಡಿ ಎನ್ನುತ್ತಾ ಸಿಎಂ ಆಗಬೇಕೆಂದು ರೆಡ್ಡಿಯಾಗಿದ್ದಾರೆ. ಇದರ ಫಲವನ್ನು ರಾಜ್ಯದ ಜನರು ಅನುಭವಿಸುವಂತಾಗಿದೆ. ಜರ್ಮನಿ ಚಾನ್ಸಲರ್ ಕರ್ನಾಟಕಕ್ಕೆ ಬಂದಿದ್ದರೂ ಕುರ್ಚಿ ಉಳಿಸಿಕೊಳ್ಳಲು ಒಬ್ಬರು,ಅದನ್ನು ಕಸಿದುಕೊಳ್ಳಲು ಮತ್ತೊಬ್ಬರು ಹೋಗಿ ರಾಹುಲ್‌ಗಾಂಽ ಜತೆ ನಿಂತು ಕೊಂಡ್ರೆ ರಾಜ್ಯದ ಪರಿಸ್ಥಿತಿ ಏನಾಗಬೇಕೆಂದು ವಿಜಯೇಂದ್ರ ಕಾಂಗ್ರೆಸ್ ನಡೆಯನ್ನು ಟೀಕಿಸಿದರು.
-----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net