ಚಿತ್ರದುರ್ಗದ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಚಿತ್ರ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಸಂಸ್ಥೆ
ಅಧ್ಯಕ್ಷ ಪಟೇಲ್ ಶಿವಕುಮಾರ್ ಹೇಳಿಕೆ
ರಜತ ಮಹೋತ್ಸವ
ಚಿತ್ರದುರ್ಗ: ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ೨೦೨೫-೨೬ನೇ ಆರ್ಥಿಕ ಸಾಲಿನಲ್ಲಿ ಉತ್ತಮ ಆರ್ಥಿಕ ಪ್ರಗತಿ ಸಾ ಽಸಿದೆ. ೨೦೦೧ರಲ್ಲಿ ಸ್ಥಾಪನೆಯಾದ ಈ ಸೊಸೈಟಿ ಪ್ರಸ್ತುತ ರಜತ ಮಹೋತ್ಸವ ಆಚರಣೆ ವರ್ಷದ ಸಂಭ್ರಮದಲ್ಲಿದೆ.
ಇಂಥ ಸಂದರ್ಭದ ಲ್ಲಿ ಸೊಸೈಟಿಯ ನಿವ್ವಳ ಲಾಭ ೯೫.೯೬ ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ತಿಳಿಸಿದ್ದಾರೆ.
ಹಿಂದಿನ ಆರ್ಥಿಕ ಸಾಲಿಗೆ ಈ ಹೋಲಿಸಿದರೆ ಲಾಭದ ಪ್ರಮಾಣ ೬.೯೪ ಲಕ್ಷ ರೂ.ಗೆ ತಲುಪಿದೆ. ಸೊಸೈಟಿಯ ಹೂಡಿಕೆ ಬಂಡವಾಳ ೮.೬೨ ಕೋಟಿ ರೂ.,ದುಡಿಯುವ ಬಂಡವಾಳ ೨೩.೯೮ ಕೋಟಿ ರೂ.,ಠೇವಣಿ ೧೫.೪೮ ಕೋಟಿ ರೂ., ಸಾಲ ೧೪.೦೫ ಕೋಟಿ ರೂ.ಹಾ ಗೂ ಷೇರು ಬಂಡವಾಳ ೮೩.೭೮ ಲಕ್ಷ ರೂ.ಹಾಗೂ ಎನ್‌ಪಿಎ ಪ್ರಮಾಣ ೦.೫೧ ಇದೆ.
ಸೊಸೈಟಿಯ ಆರ್ಥಿಕ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರು, ಸೊಸೈಟಿ ಸದಸ್ಯರು, ಸಿಬ್ಬಂದಿ ವರ್ಗದವರು, ಪಿಗ್ಮಿ ಏಜೆಂಟರು ಹಾಗೂ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.