ಚಿತ್ರದುರ್ಗ ತಾಲೂಕು ಸಿದ್ಧಾಪುರದ ನೂತನ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವೇದಾಂತ ಐಒಕೆಯ ಮಾಸ್ಟರ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಡಾ. ಮಹೇಶ್ ಮಾತನಾಡಿದರು. ಶ್ರೀ ಶೈಲಗೌಡ, ಎಸ್.ಬಿ. ಕೀರ್ತಿಕುಮಾರ್, ಜಿ. ರಾಘವೇಂದ್ರ ಇತರರು ಇದ್ದರು.
ಚಿತ್ರದುರ್ಗ:ವೇದಾಂತ ಸೇಸಾ ಗೋವಾ ಐರನ್ ಓರ್ ಕರ್ನಾಟಕ(ಐಓಕೆ)ಸಂಸ್ಥೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. ೧೦೦ -Àಲಿತಾಂಶ ದಾ ಖಲಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳ ಅನುಕೂಲಕ್ಕೆ ತಾಲೂಕಿನ ೪ ಪ್ರೌಢಶಾಲೆಗಳಲ್ಲಿ ಪರಿಣತ ಶಿಕ್ಷಕರ ನೇತÊತ್ವದಲ್ಲಿ `ಮಾಸ್ಟ ರ್ ಕ್ಲಾಸ್' ವಿಶೇಷ ತರಗತಿ ಆರಂಭಿಸಿದೆ.
ಕAಪನಿಯ ವೃದ್ಧಿ ಯೋಜನೆಯಡಿ ಆಯೋಜಿಸಿರುವ ಈ ವಿಶೇಷ ತರಗತಿಗಳು ಕಡ್ಲೆಗುದ್ದು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ, ಮಾನಂಗಿ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ, ಸಿದ್ದಾಪುರದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ ಹಾಗೂ ಶ್ರೀ ನೂತನ ಪ್ರೌಢಶಾಲೆಯಲ್ಲಿ ೨ ತಿಂಗಳು ಪ್ರತಿ ವಾರಾಂತ್ಯದಲ್ಲಿ ನಡೆಯಲಿವೆ.
ಈ ೪ ಶಾಲೆಗಳ ೧೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಪರಿಣಾಮಕಾರಿಯಾಗಿ ಪರೀಕ್ಷೆ ಎದುರಿಸುವ ವಿಧಾನಗಳನ್ನು ಹೇಳಿಕೊಡಲಾಗುತ್ತಿದೆ.
ಸಿದ್ದಾಪುರದ ಶ್ರೀ ನೂತನ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಮಾಸ್ಟರ್ ಕ್ಲಾಸ್‌ಗೆ ಚಾಲನೆ ನೀಡಿದ ವೇದಾಂತ ಐರನ್ ಒರ್ ಕರ್ನಾಟ ಕದ ಸಿಇಒ ಶ್ರೀಶೈಲಗೌಡ ಮಾತನಾಡಿ, ಪ್ರಾಜೆಕ್ಟ್ ವೃದ್ಧಿಯಡಿ ಮಾಸ್ಟರ್‌ಕ್ಲಾಸ್ ಆರಂಭಿಸಲಾಗಿದೆ. ಇದು ವಿದ್ಯಾರ್ಥಿಗಳು ಉತ್ತ ಮ ಅಂಕಗಳಿಕೆಯೊAದಿಗೆ ಶೇ.೧೦೦ ರಷ್ಟು ಫಲಿತಾಂಶ ಪಡೆಯಲು ನೆರವಾಗಲಿದೆ ಎಂದರು.
ಕಡ್ಲೆಗುದ್ದು ಶ್ರೀ ಆಂಜನೇಯ ಸ್ವಾಮಿ ಹೈಸ್ಕೂಲ್ ಮುಖ್ಯಶಿಕ್ಷಕ ಡಾ.ಮಹೇಶ್ ಮಾತನಾಡಿ, ವೇದಾಂತ ಕಂಪನಿಯ ಈ ಯೋಜನೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸಿ ಪರೀಕ್ಷೆಯಲ್ಲಿ ಉತ್ತಮ -Àಲಿತಾಂಶ ಪಡೆಯಲು ಉಪಯುಕ್ತವಾಗಲಿದೆ ಎಂದು ಹೇಳಿದರು.
ಮಾನಂಗಿಯ ಶ್ರೀ ಆಂಜನೇಯ ಸ್ವಾಮಿ ಹೈಸ್ಕೂಲ್ ವಿದ್ಯಾರ್ಥಿನಿ ಆರ್. ಐಶ್ವರ್ಯ ಮಾತನಾಡಿ, ವಿಶೇಷ ತರಗತಿಯ ಉಪಯು ಕ್ತತೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀ ನೂತನ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೊಸೈಟಿ ಅಧ್ಯಕ್ಷ ಜಿ. ರಾಘವೇಂದ್ರ, ಮಾನಂಗಿ ಮುಖ್ಯಶಿಕ್ಷಕ ಎಸ್.ಬಿ. ಕೀರ್ತಿಕುಮಾರ್, ವೇದಾಂತ ಕಂಪನಿ ಅಽಕಾರಿಗಳು, ಇತರರು ಇದ್ದರು.