ವಲಸೆ ತಡೆಗೆ ವಿಬಿಜಿ ರಾಮ್‌ಜಿ ಆಸರೆ

ಜಿಪಂ ಸಿಇಒ ಡಾ.ಎಸ್.ಆಕಾಶ್ ಗುರುವಾರ ಚಿತ್ರದುರ್ಗ ದ್ಯಾಮವ್ವನಹಳ್ಳಿಯಲ್ಲಿ ವಿಬಿರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ತಾಪಂ ಇಒ ವೈ.ರವಿಕುಮಾರ್, ಶಿವಮೂರ್ತಿ, ಮೋಹನಕುಮಾರ್ ಇತರರು ಇದ್ದರು.
ಜಿಪಂ ಸಿಇಒ ಡಾ.ಎಸ್.ಆಕಾಶ್ ಗುರುವಾರ ಚಿತ್ರದುರ್ಗ ದ್ಯಾಮವ್ವನಹಳ್ಳಿಯಲ್ಲಿ ವಿಬಿರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ತಾಪಂ ಇಒ ವೈ.ರವಿಕುಮಾರ್, ಶಿವಮೂರ್ತಿ, ಮೋಹನಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಡಾ.ಎಸ್.ಆಕಾಶ್ ಅಭಿಮತ
  • ಕೆರೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿತ್ರದುರ್ಗ:

ಉದ್ಯೋಗ ಅರಸಿ ವಲಸೆ ಹೋಗದೆ, ಸ್ವ ಗ್ರಾಮಗಳಲ್ಲೇ ವಿಬಿಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಗ್ರಾಮೀಣರಿಗೆ ಜಿಪಂ ಸಿಇಒ ಡಾ.ಎಸ್.ಆಕಾಶ್ ಮನವಿ ಮಾಡಿದರು.

ಚಿತ್ರದುರ್ಗ ತಾಲೂಕಿನ ದ್ಯಾಮವ್ವನಹಳ್ಳಿ, ಚಳ್ಳಕೆರೆ ತಾಲೂಕಿನ ದೊಡ್ಡೇರಿ ಮತ್ತು ದೊಡ್ಡ ಉಳ್ಳಾರ್ತಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಗುರುವಾರ ವಿಬಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವÊದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾ ಡಿದರು.
ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ೧೨೫ ದಿನಗಳ ಉದ್ಯೋಗ ಖಾತ್ರಿ ನೀಡಲಾಗುತ್ತಿದೆ. ಯಾವುದೇ ಲಿಂಗ ತಾರ ತಮ್ಯವಿಲ್ಲದೆ ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ ೩೮೨ ರೂ.ಸಮಾನ ಕೂಲಿ ನಿಗದಿ ಪಡಿಸಲಾಗಿದೆ. ಆದ್ದರಿಂದ ಯಾರೂ ಕೆಲಸ ಅರಸಿ ನಗರ ಅಥವಾ ಬೇರೆ ಊರುಗಳಿಗೆ ಗುಳೆ ಹೋಗುವ ಅಗತ್ಯವಿಲ್ಲವೆಂದು ತಿಳಿಸಿದರು.
ಕಾಮಗಾರಿ ಸ್ಥಳದಲ್ಲಿ ಮೊಬೈಲ್ ಆ್ಯಪ್ ಮೂಲಕ ಕಾರ್ಮಿಕರ ಎನ್‌ಎಂಎಂಎಸ್ ಆನ್‌ಲೈನ್ ಹಾಜರಾತಿ ದಾಖಲಿಸಿ, ಜಾಬ್‌ ಕಾ ರ್ಡ್ ಹಾಗೂ ಬ್ಯಾಂಕ್‌ಪಾಸ್ ಪುಸ್ತಕಗಳನ್ನು ಪರಿಶೀಲಿಸಿ, ನಿಯಮಿತವಾಗಿ ಕೂಲಿ ಹಣ ಖಾತೆಗೆ ಜಮೆಯಾಗುತ್ತಿರುವ ಕುರಿತು ಮಾಹಿತಿ ಪಡೆದರು.
ತಾಪಂ ಇಒಗಳಾದ ವೈ.ರವಿಕುಮಾರ್, ಶಶಿಧರ್, ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ಶಿವಮೂರ್ತಿ, ಸಹಾಯಕ ಕಾರ‍್ಯ ಕ್ರಮ ಸಂಯೋಜಕ ಮೋಹನ್‌ಕುಮಾರ್, ತಾಲೂಕು ತಾಂತ್ರಿಕ ಸಂಯೋಜಕರಾದ ಮಂಜುನಾಥ್, ಕಿಶೋರಕುಮಾರ್ ಹಾಗೂ ಐಇಸಿ ಸಂ ಯೋಜಕರಾದ ಸತ್ಯನಾರಾಯಣ, ಪ್ರವೀಣಕುಮಾರ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net