ಆರ್ಥಿಕ ಸದೃಢತೆಗೆ ವಿಬಿ ರಾಮ್ ಜಿ ನೆರವು

ಚಿತ್ರದುರ್ಗದಲ್ಲಿ ಶುಕ್ರವಾರ ಸಿಇಒ ಡಾ.ಎಸ್. ಆಕಾಶ್ ಅವರು ವಿಬಿರಾಮ್‌ಜಿ ಯೋಜನೆ ಕರಪತ್ರ ಹಾಗೂ ಸ್ಟಿಕ್ಕರ್ ಬಿಡುಗಡೆ ಮಾಡಿದರು. ಎಡಿಪಿಸಿ ಮೋಹನ್‌ಕುಮಾರ್, ಎಂ. ಬಾಬು, ಶಿವಪ್ರಕಾಶ್,ರವೀಂದ್ರನಾಥ್, ಸಹನಾ, ಉಮಾಶಂಕರ್, ಮೋಹನ್‌ಕುಮಾರ್ ಮತ್ತಿತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸಿಇಒ ಡಾ.ಎಸ್. ಆಕಾಶ್ ಅವರು ವಿಬಿರಾಮ್‌ಜಿ ಯೋಜನೆ ಕರಪತ್ರ ಹಾಗೂ ಸ್ಟಿಕ್ಕರ್ ಬಿಡುಗಡೆ ಮಾಡಿದರು. ಎಡಿಪಿಸಿ ಮೋಹನ್‌ಕುಮಾರ್, ಎಂ. ಬಾಬು, ಶಿವಪ್ರಕಾಶ್,ರವೀಂದ್ರನಾಥ್, ಸಹನಾ, ಉಮಾಶಂಕರ್, ಮೋಹನ್‌ಕುಮಾರ್ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಯೋಜನೆ ಪರಿಣಾಮಕಾರಿ ಅನುಷ್ಠಾನ
  • ಜಿಪಂ ಸಿಇಒ ಡಾ.ಎಸ್.ಆಕಾಶ್ ಅಭಿಮತ
  • ವಿಬಿರಾಮ್‌ಜಿ
ಚಿತ್ರದುರ್ಗ: ವಿಬಿರಾಮ್‌ಜಿ ಯೋಜನೆಯಡಿ ಪ್ರತಿ ಗ್ರಾಮೀಣ ಅರ್ಹ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳ ಉದ್ಯೋಗ ದೊರೆಯಲಿದೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಹೇಳಿದರು.
ಜಿಪಂದಲ್ಲಿ ಗ್ರಾಮೀಣ ಭಾಗದ ಪ್ರತಿ ಮನೆಗೂ ವಿಕಸಿತ ಭಾರತ ಗ್ಯಾರಂಟಿ -Áರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ್ (ವಿಬಿ ರಾಮ್‌ಜಿ)ಯೋಜನೆ ಮಾಹಿತಿ ತಲುಪಿಸುವ ಉದ್ದೇಶದಿಂದ ಸಿದ್ಧಪಡಿಸಿದ ಕರಪತ್ರ ಹಾಗೂ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿ ಮಾನವ ದಿನಕ್ಕೆ ೩೮೨ ರೂ. ಕೂಲಿ ನಿಗದಿಪಡಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಗ್ರಾಮೀಣ ಕೂಲಿ ಕಾರ್ಮಿಕರು ಆರ್ಥಿಕವಾಗಿ ಸದÊಢರಾಗಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದರು.
ಜಾಬ್‌ಕಾರ್ಡ್ ಇಲ್ಲದವರು ವಿಶೇಷ ಅಭಿಯಾನದ ಮೂಲಕ ಹೊಸ ಜಾಬ್‌ಕಾರ್ಡ್ ಪಡೆದುಕೊಂಡು ಉದ್ಯೋಗ ಪಡೆಯಬಹುದು. ಸಿಬ್ಬಂದಿ ಮನೆ, ಮನೆಗೆ ಬಂದಾಗ ಅರ್ಹ ಫಲಾನುಭವಿಗಳು ನಮೂನೆ-೬ನ್ನು ಭರ್ತಿ ಮಾಡಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬೇಕು. ಯಾರೂ ಕೆಲಸ ಅರಸಿ ವಲಸೆ ಹೋಗದೆ, ಸ್ವಗ್ರಾಮಗಳಲ್ಲೇ ಕೆಲಸ ಪಡೆಯಬೇಕೆಂದು ಕೋರಿದರು.
ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಿ, ವಲಸೆ ತಡೆಯುವ ಉದ್ದೇಶದಿಂದ ಜುಲೈ ೧ರಿಂದ ಆರಂಭವಾಗಿರುವ ಈ ಯೋಜನೆ ಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಜಾಗೃತಿಗಾಗಿ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಲಿದ್ದು, ಮನೆ ಮುಂಭಾಗ ಸ್ಟಿಕ್ಕರ್‌ಗಳನ್ನು ಅಂಟಿಸಲಿದ್ದಾರೆ ಎಂದರು.
ಜಿಪA ಉಪ ಕಾರ್ಯದರ್ಶಿ ಎಂ. ಬಾಬು, ಎಡಿಪಿಸಿ ಮೋಹನ್‌ಕುಮಾರ್, ಹೊಳಲ್ಕೆರೆ ತಾಪಂ ಇಒ ಶಿವಪ್ರಕಾಶ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ಜಿಲ್ಲಾ ಎಂಐಎಸ್ ಸಂಯೋಜಕಿ ಸಹನಾ, ತಾಲೂಕು ಐಇಸಿ ಸಂಯೋಜಕ ಉಮಾಶಂಕರ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net