ಪಾಕ ಸ್ಪರ್ಧೆಯಲ್ಲಿ ಸಿದ್ಧವಾಯ್ತು ತರಹೇವಾರಿ ಖಾದ್ಯ

ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಿರಿಧಾನ್ಯಗಳ ಜಿಲ್ಲಾಮಟ್ಟದ ಪಾಕಸ್ಪರ್ಧೆಯನ್ನು ಜಿಪಂ ಸಿಇಒ ಡಾ.ಎಸ್.ಆಕಾಶ್ ಉದ್ಘಾಟಿಸಿದರು. ಮಂಜುನಾಥ್, ಶಿವಕುಮಾರ್, ಪ್ರವೀಣ್, ರಾಘವೇಂದ್ರ, ಸರಸ್ವತಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಿರಿಧಾನ್ಯಗಳ ಜಿಲ್ಲಾಮಟ್ಟದ ಪಾಕಸ್ಪರ್ಧೆಯನ್ನು ಜಿಪಂ ಸಿಇಒ ಡಾ.ಎಸ್.ಆಕಾಶ್ ಉದ್ಘಾಟಿಸಿದರು. ಮಂಜುನಾಥ್, ಶಿವಕುಮಾರ್, ಪ್ರವೀಣ್, ರಾಘವೇಂದ್ರ, ಸರಸ್ವತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟ
  • ಸಿರಿಧಾನ್ಯ
  • ವಾಣಿಜ್ಯ ಮೇಳ
ಚಿತ್ರದುರ್ಗ: ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ರುಚಿಯಾದ ವಿವಿಧ ಸಿರಿಧಾನ್ಯ ಖಾದ್ಯಗಳು ಬಾಯಲ್ಲಿ ನೀರೂರಿಸಿ ದವು.
ಕೃಷಿ ಇಲಾಖೆ ಅಂತಾರಾಷ್ಟಿçÃಯ ವಾಣಿಜ್ಯ ಮೇಳ-೨೦೨೬ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಪೂರ್ವಭಾವಿಯಾಗಿ ಮಂಗಳವಾರ ನಗರದ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಜಿಲ್ಲಾ ಮಟ್ಟ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲ್ಲಿ ಜಿಲ್ಲೆಯ ಆರು ತಾಲೂಕುಗಳಿಂದ ೪೧ ಜನರು ಭಾಗ ವಹಿಸಿದ್ದರು.
೧೬ ಜನರು ಸಿಹಿ, ೧೫ ಜನರು ಖಾರದ ವಿವಿಧ ಖಾದ್ಯಗಳು ಹಾಗೂ ೧೦ ಜನರು ಮರೆತುಹೋದ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದರು. ಸಿಹಿ ಖಾದ್ಯದಲ್ಲಿ ಬರಗು ಹಲ್ವಾ ತಯಾರಿಸಿದ್ದ ಹೊಸದುರ್ಗದ ಆತ್ರಿಕಟ್ಟೆಯ ಎಂ.ಮAಜುಳಾ (ಪ್ರ), ರಾಗಿ ಹಲ್ವಾ ಸಿದ್ಧಪಡಿಸಿದ್ದ ಹೊಳಲ್ಕೆರೆ ತಾಲೂಕಿನ ಹನುಮನಕಟ್ಟೆಯ ಎನ್.ಸೌಭಾಗ್ಯ (ದ್ವಿ) ಹಾಗೂ ಸಿರಿಧಾನ್ಯ ನಿಪ್ಪಟ್ಟು ತಯಾರಿಸಿದ್ದ ಚಳ್ಳ ಕೆರೆ ತಾಲೂಕಿನ ಪಿಆರ್‌ಪುರ ಗ್ರಾಮದ ಎಂ.ವಿದ್ಯಾ ತೃತೀಯ ಬಹುಮಾನ ಪಡೆದರು.
ಖಾರ ಖಾದ್ಯದಲ್ಲಿ ನಿಪ್ಪಟ್ಟು ಸಿದ್ಧಪಡಿಸಿದ್ದ ಹೊಳಲ್ಕೆರೆ ತಾಲೂಕು ರಾಮಗಿರಿಯ ಓಂಕಾರಮ್ಮ (ಪ್ರ), ಪಿಜ್ಜಾ ತಯಾರಿಸಿದ್ದ ಹೊಸ ದುರ್ಗದ ಪಿ.ಶ್ರೀದೇವಿ (ದ್ವೀ)ಹಾಗೂ ಸಿರಿಧಾನ್ಯ ಮಸಾಲ ರೊಟ್ಟಿ ತಯಾರಿಸಿದ ಹೊಸದುರ್ಗ ತಾಲೂಕಿನ ದೊಡ್ಡತೇಕಲ ವಟ್ಟಿಯ ಯಶೋದಮ್ಮ (ತೃ)ಬಹುಮಾನ ಪಡೆದರು.
ಮರೆತುಹೋದ ಖಾದ್ಯದಲ್ಲಿ ಆಳ್ವಿಪಾಯಸ ತಯಾರಿಸಿದ ಚಿತ್ರದುರ್ಗ ಓಬವ್ವನಾಗ್ತಿಹಳ್ಳಿಯ ಬಿ.ಎಸ್.ಅನಿತಾ ಶಿವಕುಮಾರ್(ಪ್ರ), ಹುರಳಿ ತೊಕ್ಕು ತಯಾರಿಸಿದ ಹನುಮನಕಟ್ಟೆಯ ದಿವ್ಯಶ್ರೀ ಸಂತೋಷ್ (ದ್ವಿ), ಕಡಬು ತಯಾರಿಸಿದ ಓಬವ್ವನಾಗ್ತಿಹಳ್ಳಿಯ ಎಂ. ಟಿ.ಶೈಲಜಾ (ತೃ)ಬಹುಮಾನ ಪಡೆದರು.
ಸ್ಪರ್ಧೆಗೆ ಚಾಲನೆ ನೀಡಿದ ಜಿಪಂ ಸಿಇಒ ಡಾ.ಎಸ್.ಆಕಾಶ್ ಹಾಗೂ ಜಂಟಿ ಕÊಷಿ ನಿರ್ದೇಶಕ ಮಂಜುನಾಥ್ ಅವರು ಕ್ರಮವಾಗಿ ೨೦೨೪ನೇ ಸಾಲಿನ ಹಾಗೂ ೨೦೨೫ನೇ ಸಾಲಿನ ಸಿರಿಧಾನ್ಯ ಪಾಕಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕÊಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಆಹಾರ ತಜ್ಞೆ ಸರಸ್ವತಿ ಇತರರಿದ್ದರು. ಈ ಸ್ಪರ್ಧೆಯನ್ನು ೨೦೧೬ನೇ ಸಾಲಿನಿಂದ ಏರ್ಪಡಿಸಿಕೊಂಡು ಬರಲಾಗಿದೆ.
"

ರಾಜ್ಯದಲ್ಲೇ ಸಿರಿಧಾನ್ಯ ಬೆಳೆಯುವುದರಲ್ಲಿ ಹೊಸದುರ್ಗ ತಾಲೂಕು ಮುಂಚೂಣಿಯಲ್ಲಿದೆ. ನವಣೆ ಹಾಗೂ ಸಾವೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಸಿರಿಧಾನ್ಯಗಳ ಪ್ರಚಾರಕ್ಕಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಿರಿಧಾನ್ಯಗಳ ಮಹತ್ವದ ಕುರಿತು ಜನರಲ್ಲಿ ಜಾಗÊತಿ ಹಾಗೂ ಅರಿವು ಮೂಡಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net