ಸಮಾಜದ ಒಳಿತಿಗೆ ಬಳಕೆ ನಿವೃತ್ತರ ಸೇವಾ ಅನುಭವ

ಚಳ್ಳಕೆರೆ ಯಾದವರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಿವೃತ್ತ ನೌಕರರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕ ಟಿ. ರಘುಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಗದ್ದಿಗೆ ತಿಪ್ಪೇಸ್ವಾಮಿ, ಕರಿಯಪ್ಪ, ತೇಜೊಮಯ ರೆಡ್ಡಿ, ಬಸವರಾಜಪ್ಪ, ಮೂಡಲಗಿರಿಯಪ್ಪ ಇದ್ದರು.
ಚಳ್ಳಕೆರೆ ಯಾದವರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಿವೃತ್ತ ನೌಕರರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕ ಟಿ. ರಘುಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಗದ್ದಿಗೆ ತಿಪ್ಪೇಸ್ವಾಮಿ, ಕರಿಯಪ್ಪ, ತೇಜೊಮಯ ರೆಡ್ಡಿ, ಬಸವರಾಜಪ್ಪ, ಮೂಡಲಗಿರಿಯಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಸಲಹೆ
  • ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ
ಚಳ್ಳಕೆರೆ: ನಿವೃತ್ತ ನೌಕರರ ಸೇವಾ ಅನುಭವ ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ಯಾದವರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ನೌಕರರು ಕುಟುಂಬಕ್ಕೆ ಸೀಮಿತ ಆಗಬಾರದು. ತಮ್ಮ ವೃತ್ತಿ ಅನುಭವವನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ನಿವೃತ್ತ ನೌಕರರಿಗೆ ವಯೋಸಹಜವಾಗಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಆರೋಗ್ಯ ತಪಾಸಣೆ ಶಿಬಿರ ಆಯೋಜನೆಗೆ ಧನ ಸಹಾಯ ಮಾಡಲಾಗುವುದು. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ್ತ ನೌಕರ ತೇಜೊಮಯ ರೆಡ್ಡಿ ಮಾತನಾಡಿ, ಶಾಸಕರಾಗುವ ಮುನ್ನ ರಘುಮೂರ್ತಿ ಅವರು ನೌರಕರಿಯಲ್ಲಿದ್ದರು. ಆಡಳಿತದ ಅನುಭವ ಅಭಿವೃದ್ಧಿ ಕೆಲಸಗಳಿಗೆ ನೆರವಾಗಿದೆ. ವೇದಾವತಿ ನದಿಗೆ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಬಯಲು ಸೀಮೆಯನ್ನು ಅರೆ ಮಲೆನಾಡಿನಂತೆ ಅಭಿವೃದ್ಧಿಪಡಿಸಿದ್ದಾರೆ. ಇಂಜಿನಿಯರಿಂಗ್ ಕಾಲೇಜು, ವೃತ್ತಿ ತರಬೇತಿ ನೀಡುವ ಜಿಟಿಟಿಸಿ ಕೇಂದ್ರ ಸ್ಥಾಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕರಿಯಣ್ಣ, ಡಾ. ಪ್ರದೀಪ್, ಡಾ. ಮನೋಜ್, ಗಂಗಾಧರಪ್ಪ, ಬಸವರಾಜಪ್ಪ, ಮೂಡಲಗಿರಿಯಪ್ಪ, ಶ್ರೀಕಂಠಪ್ಪ, ಮಂಜುನಾಥ್ ಇದ್ದರು.
ಪೋಟೋ: ಸಿಎಲ್ ಕೆ: ಜ.24( ಶಿಬಿರ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net