ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಂಘಟಿತ ಹೋರಾಟ meeting

ಹಿರಿಯೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನಕ್ಕೆ ಎಐಸಿಸಿ ವೀಕ್ಷಕ ರಿಪುನ್ ಬೋರಾ ಚಾಲನೆ ನೀಡಿದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ನಸೀರ್ ಅಹಮ್ಮದ್, ಖಾದಿ ರಮೇಶ್, ಈ. ಗೌಡ ಇದ್ದರು. meeting
ಹಿರಿಯೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನಕ್ಕೆ ಎಐಸಿಸಿ ವೀಕ್ಷಕ ರಿಪುನ್ ಬೋರಾ ಚಾಲನೆ ನೀಡಿದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ನಸೀರ್ ಅಹಮ್ಮದ್, ಖಾದಿ ರಮೇಶ್, ಈ. ಗೌಡ ಇದ್ದರು. meeting
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ್ಷಕ ರಿಪುನ್ ಬೋರಾ ಸಲಹೆ
  • ಹಿರಿಯೂರಿನಲ್ಲಿ ಸಂಘಟನ್ ಸೃಜನ್ ಅಭಿಯಾನ, ಕಾರ್ಯಕರ್ತರ ಸಭೆ
ಹಿರಿಯೂರು: ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಸಂಘಟಿತ ಹೋರಾಟ ಮಾಡಬೇಕು ಎಂದು ಎಐಸಿಸಿ ವೀಕ್ಷಕ ರಿಪುನ್ ಬೋರಾ ಹೇಳಿದರು. meeting
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥ ವಿರೋಧ ಪಕ್ಷವಾಗಿ, ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ, ಜನಪರ ಹೋರಾಟ ಮಾಡುತ್ತಿದ್ದು, ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ ಸಿದ್ದಾಂತದ ಮೂಲಕ ಎಲ್ಲ ಧರ್ಮ, ಜಾತಿ, ವರ್ಗದ ಜನರನ್ನು ಒಗ್ಗೂಡಿಸಲು ಶ್ರಮಿಸುತ್ತಿದೆ ಎಂದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಹೋರಾಟ, ಶ್ರಮದಿಂದ ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಮುಂಬರುವ ಹಿರಿಯೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಕಾರ್ಯಕರ್ತರ ಸಂಘಟನೆ ಜತೆಗೆ ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸದಿಂದ ಕೊಂಡೊಯ್ಯುವ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ. ರಮೇಶ್ ಮಾತನಾಡಿ, 2013ರಿಂದ ಹಿರಿಯೂರಿನಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಸಂಘಟನೆಗೆ ಶಕ್ತಿ ಮೀರಿ ಹೋರಾಟ ಮಾಡಿದ್ದು, ದಶಕಗಳ ಕಾಲ ಪಕ್ಷದ ಸಂಘಟನೆ, ವರಿಷ್ಠರು ಸೂಚಿಸದ ಕೆಲಸವನ್ನು ಚಾಚು ತಪ್ಪದೇ ಪಾಲಿಸಿರುವೆ. ಕಾಂಗ್ರೆಸ್ ಉನ್ನತಿಗೆ ನನ್ನ ಸೇವೆ ಪರಿಗಣಿಸಿ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಪಕ್ಷದ ಹಾಲಿ ಶಾಸಕರು, ಮಾಜಿ ಜನಪ್ರತಿನಿಧಿಗಳು ಹಾಗೂ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಸರ್ವ ಸಮ್ಮತ ಪಕ್ಷನಿಷ್ಠ, ಸಂಘಟನಾ ಚತುರ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಎಐಸಿಸಿ ವೀಕ್ಷಕ ರಿಪುನ್ ಬೋರಾ ಪ್ರತಿಕ್ರಿಯಿಸಿದರು.
ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಪಕ್ಷನಿಷ್ಠೆ, ಬದ್ಧತೆ ಇದ್ದರೆ ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯರ್ತನಿಗೂ ಉನ್ನತ ಸ್ಥಾನಮಾನ, ಅಧಿಕಾರ ಸಿಗಲಿದೆ. ಜಾತಿ ಬಲ ಇಲ್ಲದ ಕ್ಷೇತ್ರದಲ್ಲಿ ಜನ ಬೆಂಬಲದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾದ ದಿ. ಸುಧಾಕರ್ ಅವರ ನಾಯಕತ್ವ ಗುಣ, ಜೀವ ಪರ ಕಾಳಜಿ, ಸಮಾಜಮುಖಿ ಚಿಂತನೆಯನ್ನು ಕಾರ್ಯಕರ್ತರು ಪಾಲನೆ ಮಾಡಬೇಕು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ನಸೀರ್ ಅಹಮ್ಮದ್, ಸದಸ್ಯ ಅಮೃತೇಶ್ವರಸ್ವಾಮಿ, ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಗ್ರಾಮಾಂತರ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಗೀತಾನಂದಿನಿ ಗೌಡ, ಮಾಜಿ ಸದಸ್ಯರಾದ ಆರ್. ನಾಗೇಂದ್ರನಾಯ್ಕ, ಗೀತಾ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ತಾಪಂ ಮಾಜಿ ಅಧ್ಯಕ್ಷೆ ಡಾ.ಜೆ.ಆರ್. ಸುಜಾತಾ, ಮುಖಂಡರಾದ ಜೀವೇಶ್, ಕಲ್ಲಹಟ್ಟಿ ಹರೀಶ್, ಜ್ಞಾನೇಶ್, ಶಿವಕುಮಾರ್, ಅಶೋಕ್, ತಿಪ್ಪಮ್ಮ, ಮಮತಾ, ಕಲ್ಪನಾ, ಶ್ರವಣಗೆರೆ ಚಂದ್ರು, ಸುರೇಶ್ ಬಾಬು, ಸಂಪತ್, ಮೈಲಾರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net