ಮೃತರನ್ನು ಬೀದರ್ ಜಿಲ್ಲೆ ಶೋರಾಪುರ ತಾಲೂಕು ಬರದೇವನಾಳ ಗ್ರಾಮದ ಪ್ರಭು (28), ಹನುಮಂತ (40) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗಿನ ಜಾವ ಹಿರಿಯೂರಿನಿಂದ ಹುಳಿಯಾರು ಮಾರ್ಗವಾಗಿ ಹೋಗುವ ವೇಳೆ ಎದುರಿನಿಂದ ಬಂದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ, ಪರಿಣಾಮ ಇಬ್ಬರು ಕಾರಿನಲ್ಲಿಯೇ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಪ್ರಕರಣ ದಾಖಲಾಗಿದೆ.