ಪ್ರಾಯೋಗಿಕ ೩ ಟಿಎಂಸಿ ನೀರು ಹರಿಸುವಿಕೆ ಪೂರ್ಣ

ಮಾರ್ಚ್ನೊಳಗೆ ಅಕ್ವಾಡೆಕ್ ಕಾಮಗಾರಿ ಮುಕ್ತಾಯ
ಚಿತ್ರದುರ್ಗ ಗೋನೂರು ಆಕ್ವಾಡೆಕ್ ಫೈಲ್ ಪೋಟೊ
ಚಿತ್ರದುರ್ಗ ಗೋನೂರು ಆಕ್ವಾಡೆಕ್ ಫೈಲ್ ಪೋಟೊ
Published on: 

ಚಿತ್ರದುರ್ಗ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಕಳೆದ ಸೆಪ್ಟೆಂಬರ್ ೬ರಿಂದ ೩ ಟಿಎಂಸಿ ನೀರು ಹರಿಸುವ ವಿಶ್ವೇಶ್ವರಯ್ಯ ಜಲನಿಗಮದ ಪ್ರಾಯೋಗಿಕ ಪ್ರಯತ್ನ ಪೂರ್ಣಗೊಳ್ಳುತ್ತಿದೆ. ಬರಗಾಲದ ಈ ಕಠಿಣ ಸನ್ನಿವೇಶದಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ವಿವಿಧ ತಾಲೂಕುಗಳ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.೫೦ ನೀರು ತುಂಬಿಸಲು ರಾಜ್ಯ ಸರ್ಕಾರದ ನಿರ್ದೇಶ ದಂತೆ ನಿಗಮ, ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿಸುತ್ತಿದ್ದ ನೀರು ಶುಕ್ರವಾರ ಅಥವಾ ಶನಿವಾರ ಸ್ಥಗಿತಗೊಳ್ಳಲಿದೆ.

ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಯೋಜನೆ ಕುರಿತಂತೆ ರೈತರ ಭರವಸೆ ಮೂಡಿಸಿತ್ತು. ಜಲಾಶಯದಿಂ ದ ಶಾಖಾ ಕಾಲುವೆ ಚೈ. ೦.೦೦ ಕಿ.ಮೀ.ನಿಂದ ಚೈ.೧೧೪.೧೪೨ ಕಿ.ಮೀ.ವರೆಗೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ, ತರೀಕೆರೆ, ಕಡೂರು, ಚಿತ್ರದುರ್ಗ ಜಿಲ್ಲೆ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲೂಕಿನ ಗೋನೂರು ಕೆರೆವರೆಗೆ ನೀರು ಹರಿಸಿ, ಮುಂದೆ ಹಳ್ಳದ ಮುಖಾಂತರ ಚಳ್ಳಕೆರೆ ತಾಲೂಕಿನ ರಾಣಿಕೆರೆವರೆಗೆ ನೀರನ್ನು ಹರಿಸಲಾಗುತ್ತದೆ. ಅಂದಾಜು ೧೪೨೧.೮೨ ಕೋಟಿ ರೂ.ವೆಚ್ಚದ ಈ ಶಾಖಾ ಕಾಲುವೆ ಅಚ್ಚುಕಟ್ಟು ಕ್ಷೇತ್ರ ೧,೨೦,೪೬೫ ಹೆಕ್ಟೇರ್ ಹಾಗೂ ನೂರಾರು ಕೆರೆಗಳಿಗೆ ಶೇ.೫೦ ಪ್ರಮಾಣದಲ್ಲಿ ನೀರು ತುಂಬಿಸಲಾಗುವುದು ಎಂದು ನಿಗಮ ತಿಳಿಸಿತ್ತು.

ಭದ್ರಾ ಜಲಾಶಯದಿಂದ ವೈ-ಜಂಕ್ಷನ್ ಅಜ್ಜಂಪುರ ಟನೆಲ್‌ವರೆಗೆ ಅಂದಾಜು ೫೦ ಕಿ.ಮೀ. ಸಹಿತ ಗೋನೂರು ಕೆರೆವರೆಗೆ ಒಟ್ಟು ೧೬೪ ಕಿ.ಮೀ. ದೂರದವರೆಗೆ ಒಂದು ಮೋಟಾರ್‌ಪಂಪ್ ಮೂಲಕ ನೀರು ಹರಿಸಿದ್ದರಿಂದ ಬರಗಾಲದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ ಎಂದು ಅಽಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಡೂರು, ತರೀಕೆರೆ, ಅಜ್ಜಂಪುರ, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳ ಕೆರೆಗಳ ಪೈಕಿ ಬಹುತೇಕ ಹಲವು ಕೆರೆಗಳಿಗೆ ನೀರು ಹರಿಸಲಾಗಿದೆ. ಹಿರಿಯೂರು ತಾಲೂಕಿಗೆ ಭಾಗಶಃ ನೀರು ಹರಿಸಲಾಗಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳ್ಳದೆ ವಿವಿಧ ತಾಲೂಕುಗಳ ಹಲವು ಕೆರೆಗಳಿಗೆ ಹಾಗೂ ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಜಗಳೂರು ತಾಲೂಕುಗಳಿಗೂ ಚಿತ್ರದುರ್ಗ ಶಾಖಾ ಕಾಲು ವೆಯಿಂದ ನೀರು ಹರಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಅಽಕಾರಿಗಳು.

ಮಾರ್ಚ್ನೊಳಗೆ ಪೂರ್ಣ

ಗೋನೂರು ಸಮೀಪ ೧.೯೦ ಕಿ.ಮಿ.ಉದ್ದದ ಅಕ್ವಾಡೆಕ್ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದಾಗಿ ಜಗಳೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಗೋನೂರು ಕೆರೆಯಿಂದ ಹಳ್ಳದ ಮೂಲಕ ಚಳ್ಳಕೆರೆಗೆ ನೀರು ಹರಿಸುವ ಚಿಂತನೆ ಇದೆ. ಅಕ್ವಾಡೆಕ್ ಕಾಮಗಾರಿಯಲ್ಲಿ ೬೦೦ ಮೀಟರ್ ಪೂರ್ಣವಾಗಿದೆ. ಇನ್ನೂ ೬೦೦ ಮೀಟರ್‌ಗೆ ಅಗತ್ಯವಿರುವ ಸಿಮೆಂಟ್ ಟ್ರ-ï‌ಗಳು ಸಿದ್ಧವಾಗಿವೆ. ಇನ್ನುಳಿದ ೬೦೦ ಮೀಟರ್‌ಗಿಂತ ಹೆಚ್ಚಿನ ಕಾಮಗಾರಿಗೆ ಸರ್ಕಾರದಿಂದ ಅನುದಾನ ಕೊಡಬೇಕಾಗಿದೆ. ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಮಾರ್ಚ್ ಅಂತ್ಯದೊಳಗೆ ಅಕ್ವಾಡೆಕ್ ಪೂರ್ಣಗೊಳಿಸಲು ನಿರ್ದೇಶಿಸಿದ್ದಾರೆ ಎಂದು ಅಽಕಾರಿಗಳು ತಿಳಿಸಿದ್ದಾರೆ.

ತುಂಗಾದಿAದ ನೀರು ಲಿಫ್ಟ್

ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾದಿAದ ೧೭ ಟಿಎಂಸಿ ನೀರು ಲಿಫ್ಟ್ಗೆ ಅಗತ್ಯವಿರುವ ೨ ಮೋಟಾರ್ ಪಂಪ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ವಿದ್ಯುತ್ ಸಂಪರ್ಕಕ್ಕೂ ವ್ಯವಸ್ಥೆಯಾಗಿದೆ. ೨೦೨೭ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ನಂತರದಲ್ಲಿ ಪ್ರಾಯೋಗಿಕವಾಗಿ ನೀರು ಲಿಫ್ಟ್ ಮಾಡಲಾಗುತ್ತದೆ ಎಂದು ಅಽಕಾರಿಗಳು ತಿಳಿಸಿದ್ದಾರೆ.

ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಒಂದು ಪಂಪ್ ಮೂಲಕ ೩ ಟಿಎಂಸಿ ಅಡಿ ನೀರು ಹರಿದಿದೆ. ಜಿಲ್ಲೆಯ ಹಲವು ಕೆರೆಗಳಿಗೆ ಭಾಗಶಃ ನೀರು ತುಂಬಿಸಿದ್ದರಿAದಾಗಿ ಅಂತರ್ಜಲ ವೃದ್ಧಿಯಾಗಿದೆ. ಪ್ರಾಯೋಗಿಕವಾಗಿ ನೀರು ಹರಿದಿದ್ದರಿಂದ, ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳಲ್ಲಿರುವ ತಾಂತ್ರಿಕ ಸಮಸ್ಯೆ ಗುರುತಿಸಲು ನೆರವಾಗಿದೆ. ರೈತರು ಅನಽಕೃತವಾಗಿ ನೀರನ್ನು ಲಿಫ್ಟ್ ಮಾಡಬಾರದು.
ಎಚ್. ರವಿಶಂಕರ್, ಸಿಇ, ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ.
ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಪ್ರಾಯೋಗಿಕವಾಗಿ ಭದ್ರಾ ನೀರು ಹರಿಸಲಾಗಿದೆ. ಆದರೆ, ಹಲವು ತಾಲೂಕುಗಳ ಅನೇಕ ಕೆರೆಗಳಿಗೆ ನೀರು ಹರಿಸಿಲ್ಲ. ಆದ್ದರಿಂದ ರಾಜ್ಯಸರ್ಕಾರ ಹೆಚ್ಚುವರಿಯಾಗಿ ಕನಿಷ್ಠ ಒಂದು ಟಿಎಂಸಿ ನೀರನ್ನು ಮಂಜೂರು ಮಾಡಿ ಪ್ರಾಯೋಗಿಕವಾಗಿ ಹರಿಸಬೇಕು. ಜಿಲ್ಲೆಯ ವಿವಿಧ ತಾಲೂಕುಗಳ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಅಽಕಾರಿಗಳು ಕ್ರಮ ವಹಿಸಬೇಕು.
ಬಿ.ಎ. ಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ, ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ಚಿತ್ರದುರ್ಗ