ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆ ತಯಾರಿಕೆ ಮತ್ತು ಮಾರಾಟದ ಕಣಜ ಎಂದೇ ಗುರುತಿಸಿಕೊಂಡಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅನೇಕರು ಸೀರೆ ಖರೀದಿಗೆ ನಿತ್ಯ ಬರುತ್ತಾರೆ. ಸಾರಿಗೆ ಸೌಲಭ್ಯದ ಕೊರತೆ ಇರುವ ಕಾರಣ ಸ್ವಂತ ವಾಹನಗಳಲ್ಲಿ ಬರುವುದು ದುಬಾರಿಯಾಗಲಿದೆ. ಆದರೂ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವ ಪ್ರಯತ್ನಗಳಾಗಿಲ್ಲ. ಇನ್ನಾದರೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಡಿಪೋ ಲೋಕಾರ್ಪಣೆಗೊಳಿಸಿ ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂಬುದು ಜನರ ಒತ್ತಾಯವಾಗಿದೆ.