ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪ್ರಾಚಾರ್ಯ ಎಂ. ನಾಸಿರುದ್ದೀನ್ ತರಬೇತಿ ಸಾಹಿತ್ಯ ಬಿಡುಗಡೆ ಮಾಡಿದರು. ಅಶ್ವಥ್‌ನಾರಾಯಣ, ಅರ್ಜುಮಂದ್‌ಬಾನು, ಎಸ್. ಬಸವರಾಜು, ಜಿ.ಜಿ.ನಾಗರಾಜು, ಸಿ.ಬಿ. ಮಂಜುನಾಥ್, ಸಿ.ಎಂ. ಸುಂದರ್‌ರಾಜ್, ವಿ. ರಾಧಾ, ಕೆ.ಜಿ. ರಂಜಿತಾ, ಪ್ರಕಾಶ್ ಇತರರು ಇದ್ದರು.
ಚಿತ್ರದುರ್ಗ: ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಗೆ ತರಬೇತಿಗಳು ಸಹಕಾರಿಯಾಗುತ್ತವೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.
ಡಿಎಸ್‌ಇಆರ್‌ಟಿ ಮತ್ತು ಡಯಟ್‌ನಿಂದ ದ್ವಿಭಾಷಾ ತರಗತಿಗಳ ಬೋಧನೆ ಅನುಕೂಲಕ್ಕಾಗಿ ಡಯಟ್‌ನಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಹಂತದ ಎಂಆರ್‌ಪಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಬೋಧನೆಯಲ್ಲಿ ಹೊಸತನ ರೂಢಿಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಅನುಗುಣವಾಗಿ ತರಬೇತಿಗಳ ಮೂಲಕ ವೃತ್ತಿ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ಎಲ್ಲ ಕೆಪಿಎಸ್, ಪಿಎಂಶ್ರೀ ಶಾಲೆಗಳು, ದ್ವಿಭಾಷಾ ತರಗತಿ ಸರ್ಕಾರಿ ಶಾಲೆಗಳಲ್ಲಿ ಬೋಽಸುತ್ತಿರುವ ೧ರಿಂದ ೫ನೇ ತರಗತಿ ಶಿಕ್ಷಕರಿಗೆ ೫ ದಿನಗಳ ತರಬೇತಿ ನೀಡಲಾಗಿದೆ.
ಪ್ರಸ್ತುತ ವಿದ್ಯಾರ್ಥಿಗಳನ್ನು ದ್ವಿಭಾಷಾ ಕಲಿಕೆಗೆ ಸಜ್ಜುಗೊಳಿಸಲು ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ ವಿಷಯ ಗಳಿಗೆ ಸಂಬAಽಸಿದAತೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ನೋಡಲ್ ಅಽಕಾರಿಗಳಾದ ಅಶ್ವಥ್‌ನಾರಾಯಣ, ಅರ್ಜುಮಂದ್‌ಬಾನು, ಉಪನ್ಯಾಸಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿ ಗಳಾದ ಜಿ.ಜಿ. ನಾಗರಾಜು, ಸಿ.ಬಿ. ಮಂಜುನಾಥ್, ಸಿ.ಎಂ. ಸುಂದರ್‌ರಾಜ್, ವಿ. ರಾಧಾ, ಕೆ.ಜಿ. ರಂಜಿತಾ, ಪ್ರಕಾಶ್ ಇತರರು ಇದ್ದರು.