ಚಿತ್ರದುರ್ಗ ದ ಎಸ್‌ಜೆ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಟ್ರಾಯ್ ಮತ್ತು ಸಿಇಎನ್ ಪೊಲೀಸ್ ಠಾಣೆ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾದ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಬ್ರಜೇಂದ್ರಕುಮಾರ್ ಮಾತನಾಡಿದರು.
ಚಿತ್ರದುರ್ಗ: ಸೈಬರ್ ವಂಚನೆಗಳಿAದ ಗ್ರಾಹಕರನ್ನು ರಕ್ಷಿಸಲು ಟೆಲಿಕಾಂ ಇಲಾಖೆ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುತ್ತಿದೆ ಎಂದು ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾದ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಬ್ರಜೇಂದ್ರಕುಮಾರ್ ಹೇಳಿದರು.
ನಗರದ ಎಸ್‌ಜೆ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಟ್ರಾಯ್ ಮತ್ತು ಸಿಇಎನ್ ಪೊಲೀಸ್ ಠಾಣೆ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಬೆಳಗ್ಗೆ ೮ರಿಂದ ರಾತ್ರಿ ೧೨ರವರೆಗೆ ಕಾರ್ಯನಿರ್ವಹಿಸುತ್ತದೆ. ಆನ್‌ಲೈನ್ ವಂಚನೆ ದೂರು ಗಳನ್ನು ಶೀಘ್ರ ಪರಿಹರಿಸಲು ಟೆಲಿಕಾಂ ಇಲಾಖೆ, ಗÊಹ ಇಲಾಖೆಯೊಂದಿಗೆ ಸದಾ ಸಂಪರ್ಕದಲ್ಲಿರುತ್ತದೆ ಎಂದರು.
ಆನ್‌ಲೈನ್ ವಂಚನೆ ಕುರಿತಂತೆ ಗ್ರಾಹಕರನ್ನು ಇಲಾಖೆ ಸಂದೇಶಗಳ ಮೂಲಕ ಎಚ್ಚರಿಸುತ್ತಿದೆ. ದೇಶದಾದಂತ್ಯ ೧೧೯ ಕೋಟಿ ಮೊಬೈಲ್ ಹಾಗೂ ೨ ಕೋಟಿ ಲ್ಯಾಂಡ್‌ಲೈನ್ -ೆÆÃನ್ ಗ್ರಾಹಕರು ಇದ್ದಾರೆ. ಸೈಬರ್ ವಂಚನೆ ದೂರುಗಳಿಗೆ ಸಂಬAಽಸಿದAತೆ ೧೯೮ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಎಂದರು.
ಸಿಇಎನ್ ಠಾಣೆ ಪಿಐ ಕಾಂತರಾಜು ಸೈಬರ್ ಅಪರಾಧಗಳ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಆನ್‌ಲೈನ್ ವಂಚ ನೆಗಳೆಡೆ ಸದಾ ಎಚ್ಚರದಿಂದ ಇರಬೇಕು. ಆನ್‌ಲೈನ್‌ನಲ್ಲಿ ಉದ್ಯೋಗಾವಕಾಶ ಕುರಿತು ವಂಚಕರು ಆಸೆ ಹುಟ್ಟಿಸಿ ಹಣಕ್ಕೆ ಬೇಡಿ ಕೆಯಿಡುತ್ತಾರೆ.
ಕೆಲವು ಆ್ಯಪ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯಲು ಯತ್ನಿಸುತ್ತಾರೆ. ಯುವ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡು ತ್ತಾರೆ. ಬಂಡವಾಳ ಹೂಡಿಕೆ ಇನ್ನಿತರ ಆಸೆ ಹುಟ್ಟಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ಇಂತಹ ಜಾಲತಾಣಗಳು, ಆ್ಯಪ್‌ಗಳ ಬಗ್ಗೆ ಜಾಗÊತರಾಗಿರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆ ವೇಳೆ ಎಚ್ಚರ ವಹಿಸಬೇಕು. ವೈಯಕ್ತಿಕ ವಿಷಯಗಳನ್ನು ಸಹ ಹಂಚಿ ಕೊಳ್ಳಬಾರದು. ಅನಾಮಧೇಯರಿಗೆ ಒಟಿಪಿ ಸಂಖ್ಯೆ ನೀಡಬಾರದು.
ವಿದ್ಯಾರ್ಥಿಗಳು ತಾವು ಜಾಗರೂಕರಾಗಿದ್ದು, ಸಾರ್ವಜನಿಕರಲ್ಲೂ ಅರಿವು ಮೂಡಿಸಬೇಕೆಂದು ಕಾಂತರಾಜು ಹೇಳಿದರು. ಮುರಳಿ, ಶಿವಪ್ರಸಾದ್, ಡಾ.ಬಿ.ಜಿ. ಕುಮಾ ರಸ್ವಾಮಿ, ಡಾ. ಎಸ್.ಕೆ. ಲೋಕೇಶ್ ಇತರರು ಇದ್ದರು. ಬಿಂದುಶ್ರೀ ಪ್ರಾರ್ಥಿಸಿದರು. ಎ.ಎಲ್. ಕವನ ನಿರೂಪಿಸಿದರು. ಜಯಶ್ರೀ ವಂದಿಸಿದರು.