ಸಂಚಾರ ನಿಯಮಗಳಿರುವುದು ಸ್ವಯಂ ರಕ್ಷಣೆಗೆ

ಶೇ.೫೦ ರಿಯಾಯಿತಿಯಲ್ಲಿ ದಂಡ ಪಾವತಿಸಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ವಿಲೇ ಕುರಿತಂತೆ ಚಿತ್ರದುರ್ಗ ಆರ್‌ಟಿಒ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್, ಭರತ್ ಎಂ. ಕಾಳಿಸಿಂಗೆ, ಸಿ.ಡಿ. ಹೇಮಂತ್‌ಕುಮಾರ್, ಪಿ.ಟಿ. ರಾಜೇಶ್ ಇತರರು ಇದ್ದರು.
ಶೇ.೫೦ ರಿಯಾಯಿತಿಯಲ್ಲಿ ದಂಡ ಪಾವತಿಸಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ವಿಲೇ ಕುರಿತಂತೆ ಚಿತ್ರದುರ್ಗ ಆರ್‌ಟಿಒ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್, ಭರತ್ ಎಂ. ಕಾಳಿಸಿಂಗೆ, ಸಿ.ಡಿ. ಹೇಮಂತ್‌ಕುಮಾರ್, ಪಿ.ಟಿ. ರಾಜೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್ ಅನಿಸಿಕೆ
  • ಆರ್‌ಟಿಒ ಕಚೇರಿಯಲ್ಲಿ ವಾಹನ ಸವಾರರಿಗೆ ಜಾಗೃತಿ ಕಾರ್ಯಕ್ರಮ
  • ಸಂಚಾರ ನಿಯಮ ಉಲ್ಲಂಘನೆ
ಚಿತ್ರದುರ್ಗ: ಸಂಚಾರ ನಿಯಮಗಳಿರುವುದು ಪೊಲೀಸರು, ಆರ್‌ಟಿಒ ಅಽಕಾರಿಗಳಿಗೆ ಹೆದರಿ ಪಾಲಿಸುವುದಕ್ಕಲ್ಲ, ಬದಲಿಗೆ ನಮ್ಮ ಮತ್ತು ನಮ್ಮ ಕುಟುಂಬದ ಸುರಕ್ಷತೆಗೆ ಎಂಬುದನ್ನು ಪ್ರತಿ ವಾಹನ ಸವಾರನೂ ಅರಿತುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ. ಸುದೀನ್‌ಕುಮಾರ್ ತಿಳಿಸಿದರು.
ಜೂನ್ ೨೧ರಿಂದ ಜುಲೈ ೧೦ ರವರೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದ ಮೇಲಿನ ಶೇ.೫೦ ರಿ ಯಾಯಿತಿ ಕುರಿತಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು.
ವಾಹನ ಚಲಾಯಿಸುವ ಮುನ್ನ ಟೈರ್‌ಗಳಲ್ಲಿ ಗಾಳಿ, ಟ್ಯಾಂಕ್‌ನಲ್ಲಿ ಪೆಟ್ರೋಲ್ ಇದೆಯೇ ಎಂದು ನೋಡಿಕೊಳ್ಳುತ್ತೇವೆ. ಆದರೆ, ಚಾಲನಾ ಪರವಾನಗಿ, ವಾಹನ ವಿಮೆ, ಎ-ï‌ಸಿ ಹಾಗೂ ಸೂಕ್ತ ಪರ್ಮಿಟ್ ಇದೆಯೇ ಎಂದು ಗಮನಿಸುವುದಿಲ್ಲ. ತುರ್ತು ಸಂದರ್ಭ ದಲ್ಲಿ ಅಥವಾ ಆತುರದಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತೇವೆ. ಆಸ್ಪತ್ರೆಯಲ್ಲಿದ್ದವರನ್ನು ಉಳಿಸಲು ಹೋಗುವ ಆತುರದಲ್ಲಿ ನಾವೇ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರುವಂಥ ಪರಿಸ್ಥಿತಿ ತಂದುಕೊಳ್ಳಬಾರದು ಎಂದರು.
ಪ್ರತಿ ಸವಾರನೂ ವಾಹನ ಚಲಾಯಿಸುವಾಗ ಮನೆಯಲ್ಲಿ ಕಾಯುತ್ತಿರುವ ವಯಸ್ಸಾದ ತಂದೆತಾಯಿ, ಪತ್ನಿ ಮತ್ತು ಮಕ್ಕಳ ಮುಖಗಳನ್ನು ಒಂದು ಕ್ಷಣ ನೆನಪಿಸಿಕೊಳ್ಳಬೇಕು. ಆರ್‌ಟಿಒ ಅಥವಾ ಪೊಲೀಸ್ ವ್ಯವಸ್ಥೆ ಪ್ರತಿಯೊಬ್ಬರ ಹಿಂದೆ ನಿಲ್ಲಲು ಸಾಧ್ಯವಿಲ್ಲ. ನಾವೇ ಸ್ವಯಂ ಪ್ರೇರಿತರಾಗಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಽಕಾರ ಸರ್ಕಾರದೊಂದಿಗೆ ಚರ್ಚಿಸಿ,ದಂಡದ ಮೊತ್ತಕ್ಕೆ ಶೇ.೫೦ ವಿಶೇಷ ರಿಯಾಯಿತಿ ನೀಡಿದೆ. ಇದು ತಪ್ಪು ಮಾಡಿದವರಿಗೆ ಸಿಕ್ಕ ಶಿಕ್ಷೆ ವಿನಾಯಿತಿಯಲ್ಲ. ಬದಲಿಗೆ ನಾಗರಿಕರು ತಮ್ಮ ಮೇಲಿರುವ ಹಳೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಕಾನೂನು ಪಾಲಕರಾಗಲು ಒದಗಿಸಿರುವ ಉತ್ತಮ ಅವಕಾಶ ಎಂದರು.
ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಮಾತನಾಡಿ, ಚಿತ್ರದುರ್ಗ ಮತ್ತು ಅನ್ಯಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ಮೋ ಟಾರ್ ವಾಹನ ಕಾಯ್ದೆ ಉಲ್ಲಂಘನೆ ಸಂಬAಧ ವಾಹನ ಮಾಲೀಕರ ವಿರುದ್ಧ ೧೯೯೧-೯೨ರಿಂದ ೨೦೨೧-೨೨ರ ಅವಽ ದಾಖಲಾದ ಪ್ರಕರಣಗಳಿಗೆ ಸಂಬAಽಸಿದAತೆ ದಂಡ ಮೊತ್ತದಲ್ಲಿ ಶೇ.೫೦ ರಿಯಾಯಿತಿಗೆ ಸರ್ಕಾರ ಆದೇಶಿಸಿದೆ.
ಇದರನ್ವರಯ ಜೂನ್ ೨೧ರಿಂದ ಜುಲೈ ೧೦ರವರೆಗೆ ರಿಯಾಯಿತಿಯೊಂದಿಗೆ ದಂಡ ಪಾವತಿಸಿ ಪ್ರಕರಣಗಳನ್ನು ವಿಲೇಗೊಳಿಸಿ ಕೊಳ್ಳಬಹುದು ಎಂದರು. ಆರ್‌ಟಿಒ ಅಽÃಕ್ಷಕ ಸಿ.ಡಿ. ಹೇಮಂತ್‌ಕುಮಾರ್, ಮೋಟಾರು ವಾಹನ ನಿರೀಕ್ಷಕ ಪಿ.ಟಿ. ರಾಜೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net