ವಾಹನ ದಟ್ಟಣೆ ಸವಾಲು

ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ರೈಲ್ವೆ ಕ್ರಾಸಿಂಗ್ -೨೨ ಗೇಟ್
ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ರೈಲ್ವೆ ಕ್ರಾಸಿಂಗ್ -೨೨ ಗೇಟ್
Published on

ಪ್ರಮುಖ ಮುಖ್ಯಾಂಶಗಳು

  • ಎಲ್‌ಸಿ-೨೨ಗೆ ಮೇಲ್ಸೇತುವೆ ನಿರ್ಮಾಣ
  • ರೈಲ್ವೆ ಇಲಾಖೆಯಿಂದ ಮನವಿಯೇ ಬಂದಿಲ್ಲ ಎನ್ನುತ್ತಿರುವ ಅಽಕಾರಿಗಳು
  • ದಾವಣಗೆರೆ ರಸ್ತೆ ರೈಲ್ವೆ ಗೇಟ್‌
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಬಹು ವರ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ನಗರದ ದಾವಣಗೆರೆ ರಸ್ತೆ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಯೋಜನೆ ಅನುಷ್ಠಾನದವರೆಗೆ ನಿರ್ಮಾಣವಾಗಲಿರುವ ವಾಹನಗಳ ದಟ್ಟಣೆ ಸಮಸ್ಯೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ತಲೆನೋವು ತರುವುದು ನಿಶ್ಚಿತ.
ನಗರದ ಹಳೇ ಬೆಂಗಳೂರು-ಧಾರವಾಡ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ನಿತ್ಯವೂ ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ಸೇರಿದಂತೆ ಹೆವಿ ಮೋಟಾರ್ ವೆಹಿಕಲ್‌ಗಳು, ಕಾರು, ಆಟೋ ಮತ್ತಿತರ ಲಘು ಮೋಟಾರು ವಾಹನಗಳು, ಬೈಕ್‌ಗಳು ಸಾವಿರಾರು ಸಂಖ್ಯೆಯಲ್ಲಿ ನಿತ್ಯ ಸಂಚರಿಸುತ್ತವೆ.
ನಗರದ ಚಳ್ಳಕೆರೆ ಗೇಟ್‌ನಿಂದ ದಾವಣಗೆರೆ ರಸ್ತೆ ಹಾಗೂ ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆಗಳಲ್ಲೂ ವಾಹನ ಸಂಚಾರ ಅಽಕ ವಾಗಿದೆ. ಮೆದೇಹಳ್ಳಿ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣ, ದಾವಣಗೆರೆ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಿವೆ. ಸಾಕಷ್ಟು ಅಂಗಡಿಗಳು, ಹೋಟೆಲ್‌ಗಳು ಮತ್ತಿತರ ವಾಣಿಜ್ಯ ಸಂಸ್ಥೆಗಳಿರುವ ಈ ರಸ್ತೆಗಳು ಪ್ರಮುಖ ಮಾರುಕಟ್ಟೆ ಪ್ರದೇಶಗಳಾಗಿವೆ. ಇದರಿಂದ ವಾಹನ ಮತ್ತು ಜನದಟ್ಟಣೆ ಸದಾ ಇದ್ದೇ ಇರುತ್ತದೆ.
ಚಿತ್ರದುರ್ಗ ರೈಲು ನಿಲ್ದಾಣ ಸಮೀಪ ಎಲ್‌ಸಿ ೨೨ಕ್ಕೆ ೩೨.೫೧ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಇಲಾಖೆ ಮೇಲ್ಸೇತುವೆ ನಿರ್ಮಿಸಲು ಸಜ್ಜಾಗಿದೆ. ಪ್ಯಾಸೆಂರ‍್ಸ್, ಗೂಡ್ಸ್ ರೈಲುಗಳ ಸಂಚರಿಸುವಾಗ ದಿನದ ೨೪ ಗಂಟೆಗಳಲ್ಲಿ ಕನಿಷ್ಠ ೩೦ ಬಾರಿ ಗೇಟ್ ಹಾಕಬೇಕಿದ್ದು, ಪ್ರತಿ ಬಾರಿ ೮-೧೫ ನಿಮಿಷಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಸಿಕ್ಕು ಸಾಮಾನ್ಯವಾಗಿದೆ.
ಈ ಮಾರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಾವಣಗೆರೆ, ಹೊಸಪೇಟೆ ಮತ್ತಿತರ ಕಡೆಗೆ ತೆರಳುವ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳು, ಲಾರಿಗಳು, ಕಾರು, ಮೋಟಾರು ದ್ವಿಚಕ್ರ ಮೊದಲಾದ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆ ಆಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈಲ್ವೆ ಇಲಾಖೆ ಮೇಲ್ಸೇತುವೆ ನಿರ್ಮಿಸಲು ಮುಂದಡಿ ಇಟ್ಟಿದೆ.
ಬದಲಿ ಮಾರ್ಗ?
ರೈಲ್ವೆ ಮೂಲಗಳ ಪ್ರಕಾರ ಮೇಲ್ಸೇತುವೆ ನೀಲಿ ನಕ್ಷೆಯಲ್ಲಿ ಎಪಿಎಂಸಿ ರಸ್ತೆಯನ್ನು ಬದಲಿ ಮಾರ್ಗವನ್ನಾಗಿ ತೋರಿಸಲಾಗಿ ದೆಯಂತೆ. ಮಾರ್ಗ ಬದಲಾವಣೆಗೆ ಶೀಘ್ರ ಜಿಲ್ಲಾಡಳಿತ ಆದೇಶಿಸಿದರೆ ಆರ್‌ಒಬಿ ನಿರ್ಮಾಣ ಕಾಮಗಾರಿ ಆರಂಭಿಸಲು ಅನುಕೂಲವಾಗಲಿದೆ.
ಈ ಹಿನ್ನೆಲೆಯಲ್ಲಿ ಕಳೆದ ಜುಲೈ ೩೧ರಂದು ಲೋಕೋಪಯೋಗಿ ಇಲಾಖೆ ಇಇ, ತಹಸೀಲ್ದಾರ್, ಡಿಸಿ, ಎಸಿ, ನಗರಸಭೆ ಆಯುಕ್ತರ ಹಾಗೂ ಎಸ್‌ಪಿ ಕಚೇರಿಗಳಿಗೆ ರೈಲ್ವೆ ಇಲಾಖೆ ಪತ್ರ ಬರೆದಿದೆ. ಚಿತ್ರದುರ್ಗ ಮತ್ತು ಬಾಳೇನಹಳ್ಳಿ ರೈಲು ನಿಲ್ದಾಣ ನಡುವಿನ ಈ ಎಲ್‌ಸಿಗೆ ದ್ವಿಪಥದ ಆರ್‌ಒಬಿ ನಿರ್ಮಾಣವಾಗಲಿದೆ. ಆದ್ದರಿಂದ ಇಲ್ಲಿಯ ಗೇಟ್ ಮುಚ್ಚಲು ಹಾಗೂ ಬದಲಿ ಮಾರ್ಗಕ್ಕೆ ಆದೇಶಿಸು ವಂತೆ ರೈಲ್ವೆಯಿಂದ ಮನವಿ ಮಾಡಲಾಗಿದೆ.
ಟ್ರಾಫಿಕ್ ಜಾಮ್ ಸಹಜ
ಚಿತ್ರದುರ್ಗದ ಎಪಿಎಂಸಿ ಮುಖ್ಯರಸ್ತೆ ವಾಹನಗಳ ಸಂಚಾರಕ್ಕೆ ಬಳಕೆಯಾಗುತ್ತಿದೆ. ಇದರಿಂದ ಸುಗ್ಗಿ ಸಮಯದಲ್ಲಿ ಹಾಗೂ ಜಾ ನುವಾರು, ಕುರಿ ಹಾಗೂ ಹೂವಿನ ಮಾರುಕಟ್ಟೆಗೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಟ್ರಾಫಿಕ್‌ಜಾಂ ಇದ್ದೇ ಇರುತ್ತದೆ. ಈ ಮಾರುಕಟ್ಟೆ ಯ ಹಲವೆಡೆ ನಾನಾ ವಾಹನಗಳ ನಿಲುಗಡೆ ಸಹಜವೆಂಬAತಾಗಿದೆ. ಭಾರೀ ವಾಹನಗಳು ಮಾರುಕಟ್ಟೆ ಪ್ರವೇಶ ನಿಯಂತ್ರಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಿಂದ ಎಪಿಎಂಸಿ ಮಾರ್ಗದಲ್ಲಿ ದೊಡ್ಡಕಲ್ಲುಗಳನ್ನು ಇಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ವಾಹನ ದಟ್ಟಣೆ ಇದೆ. ಬಿಡಿ ರಸ್ತೆಯ ಮಾರ್ಗ ಬದಲಾವಣೆಯಾದರೆ ಮುಂದೇನು ಎಂಬ ಪ್ರಶ್ನೆ ಮಾರುಕಟ್ಟೆ ಅಽಕಾರಿಗಳನ್ನು ಕಾಡಿದೆ.
"

...ಕೋಟ್...ಮೇಲ್ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆಗೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗುವುದು. ಕಾಮಗಾರಿ ಆರಂಭವಾದ ಬಳಿಕ ಹೆಚ್ಚಾಗಲಿರುವ ವಾಹನ ದಟ್ಟಣೆ ನಿಯಂತ್ರಿಸುವ ಸವಾಲು ನಮ್ಮ ಮುಂದೆ ಎದುರಾಗಲಿದೆ.

"

ಪೊಲೀಸ್ ಮತ್ತಿತರ ಸಂಬAಽಸಿದ ಇಲಾಖೆಗಳಿಂದ ಮಾರ್ಗ ಬದಲಾವಣೆ, ಗೇಟ್ ಮುಚ್ಚಲು ಶಿಫಾರಸು ಬಂದರೆ ಪರಿಶೀಲಿಸಿ ಜಿಲ್ಲಾಡಳಿತ ಆದೇಶಿಸಲಿದೆ.

"

ಮಾರ್ಗ ಬದಲಾವಣೆ ಸ್ಟೋರಿಗೆ ಕೋಟ್---ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನ ದಟ್ಟಣೆ ಸವಾಲು ಇದ್ದೇ ಇರುತ್ತದೆ. ಆದ್ದರಿಂದ ನಿಗದಿತ ಅವಽಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಸಂಚಾರಿ ಪೊಲೀಸರು ಹಾಗೂ ಸಂಬAಽಸಿದ ಅಽಕಾರಿಗಳು ಪರ್ಯಾಯ ಮಾರ್ಗದೆಡೆ ವಿವರವಾಗಿ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕು. ಪಟೇಲ್ ಶಿವಕುಮಾರ್, ಅಡಕೆ ವರ್ತಕ, ಆದರ್ಶ ಟ್ರೇಡಿಂಗ್ ಕಂಪನಿ, ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net