ವಿಜ್ಞಾನ ಸಂಸ್ಥೆಗಳಿAದ ಸಾವಿರಾರು ಉದ್ಯೋಗಾವಕಾಶ

 ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಗುರುವಾರ ಆಯೋಜಿಸಿದ್ದ ಜ್ಞಾನ ಸಂಗಮ ಕಾರ್ಯಕ್ರಮವನ್ನು ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ. ರಾಘವೇಂದ್ರ ಉದ್ಘಾಟಿಸಿದರು. ಗೌನಹಳ್ಳಿ ಗೋವಿಂದಪ್ಪ, ಶಿವಪ್ರಕಾಶ್ ಇದ್ದರು.
ಚಿತ್ರದುರ್ಗ ಭೋವಿ ಗುರುಪೀಠದಲ್ಲಿ ಗುರುವಾರ ಆಯೋಜಿಸಿದ್ದ ಜ್ಞಾನ ಸಂಗಮ ಕಾರ್ಯಕ್ರಮವನ್ನು ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ. ರಾಘವೇಂದ್ರ ಉದ್ಘಾಟಿಸಿದರು. ಗೌನಹಳ್ಳಿ ಗೋವಿಂದಪ್ಪ, ಶಿವಪ್ರಕಾಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ಭೂಪಟದಲ್ಲಿ ಚಿತ್ರದುರ್ಗದ ಗುರುತು|
  • ಮಾಜಿ ಸಂಸದ ಜನಾರ್ಧನಸ್ವಾಮಿ ಪ್ರಯತ್ನದ ಫಲ
  • ಜ್ಞಾನ ಸಂಭ್ರಮ
ಚಿತ್ರದುರ್ಗ: ಚಿತ್ರದುರ್ಗ ಬೃಹತ್ ವಿಜ್ಞಾನ ಜಿಲ್ಲೆಯಾಗಲಿದೆ ಎಂದು ಚಳ್ಳಕೆರೆ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ರಾಘವೇಂದ್ರ ಹೇಳಿದರು.

ನಗರದ ಭೋವಿ ಗುರುಪೀಠದಲ್ಲಿ ಗುರುವಾರ ಏರ್ಪಡಿಸಿದ್ದ ಜ್ಞಾನ ಸಂಭ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಜಿಲ್ಲೆಯಿಂದಾಗಿ ಸ್ಥಳೀಯವಾಗಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಚಿತ್ರದುರ್ಗ ಜಾಗತಿಕ ಭೂಪಟದಲ್ಲಿ ಗುರುತಿಸಿಕೊ ಳ್ಳುವಂತಾಗಿದೆ ಎಂದರು.
ಚಳ್ಳಕೆರೆ ತಾಲೂಕು ಕುದಾಪುರದಲ್ಲಿ ಐಐಎಸ್‌ಸಿ ಕ್ಯಾಂಪಸ್ ಸಹಿತ ಸ್ಥಾಪನೆ ಆಗಿರುವ ವಿವಿಧ ರಾಷ್ಟಿçÃಯ ಸಂಸ್ಥೆಗಳು ಮಾಜಿ ಸಂಸದ ಜನಾರ್ದನ ಸ್ವಾಮಿ ಅವರ ದೂರದೃಷ್ಟಿಯ ಫಲ. ಐಐಎಸ್‌ಸಿಯ ಹಳೆಯ ವಿದ್ಯಾರ್ಥಿಯೂ ಆಗಿರುವ ಅವರು, ಕುದಾ ಪುರದಲ್ಲಿ ಅಂದಾಜು ೧೦ ಸಾವಿರ ಎಕರೆ ಜಮೀನನ್ನು ರಾಷ್ಟ್ರೀಯ ಸಂಸ್ಥೆಗಳಾದ ಇಸ್ರೋ, ಬಾರ್ಕ್, ಡಿಆರ್‌ಡಿಒ ಹಾಗೂ
ಐಐಎಸ್‌ಸಿಗೆ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು. ಐಐಎಸ್‌ಸಿ ಬÊಹತ್ ವಿಸ್ತರಣಾ ಕೇಂದ್ರದ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಈ ಯೋಜನೆ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ. ಭಾರತದ ಪ್ರಮುಖ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದರು.
ಶಿಕ್ಷಕರು ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಆಗುತ್ತಾರೆ ಎಂಬ ಆಶಯದೊಂದಿಗೆ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ವಿಶೇಷ ಶಿಕ್ಷಕರ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟದ ಪ್ರಾಧ್ಯಾಪಕರಿಗೆ ಜಾಗತಿಕ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ ಎಂದರು. ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಉದ್ಯಮಿ ಶಿವಪ್ರಕಾಶ್ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net