ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಸರ್ಪಭೂಷಣ ಶಿವಯೋಗಿಗಳ ಜಯಂತ್ಯುತ್ಸದಲ್ಲಿ ಶ್ರೀ ಬಸವ ಮಹಾಂತ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘ ರಾಜೇಂದ್ರ ಸ್ವಾಮೀಜಿ ಇತರರು ಇದ್ದರು.
ಚಿತ್ರದುರ್ಗ: ಬಸವಾದಿ ಶರಣರ ಪರಂಪರೆಯಲ್ಲಿ ಸಾಗಿ ಬಂದಿರುವ ಸರ್ಪಭೂಷಣ ಶಿವಯೋಗಿಗಳು ಕೂಡ ನೂರಾರು ತತ್ವ ಪದಗಳನ್ನು ರಚಿಸುವ ಮೂಲಕ ಉತ್ತಮ ಜೀವನಕ್ಕೆ ಅಗತ್ಯ ಸಂದೇಶ ಸಾರಿದ್ದಾರೆ ಎಂದು ಶಿರಸಂಗಿ ಮಹಾಲಿಂಗೇಶ್ವರ ಮರುಘರಾಜೇಂದ್ರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಬುಧವಾರ ಶ್ರೀ ಸರ್ಪಭೂಷಣ ಶಿವಯೋಗಿಗಳ ಜಯಂತ್ಸುವದ ಸಮ್ಮುಖವಹಿಸಿ ವಿಷಯಾಲೋಕನ ಮಾಡಿದ ಅವರು,ಶಿವಯೋಗಿಗಳು ಬದುಕಿಗೆ ಬೇಕಾದ ಜೀವನ ಮೌಲ್ಯಗಳನ್ನು ತಮ್ಮ ತತ್ವ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಶÀರಣರ ಜಯಂತ್ಯುತ್ಸವಗಳ ಮು ಖಾಂತರ ಶರಣರ ಚಿಂತನೆ, ಆದರ್ಶಗಳನ್ನು ತಿಳಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಸರ್ಪಭೂಷಣ ಶಿವಯೋಗಿಗಳ ಚಿಂ ತನೆ,ನುಡಿಗಳು ಅವಿಸ್ಮರಣೀಯವಾಗಿವೆ ಎಂದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶ್ರೀಮಠದ ಬಸವ ಮುರುಘ ರಾ ಜೇಂದ್ರ ಸ್ವಾಮೀಜಿ, ನಾಗರಾಜ್ ಸಂಗಮ್,ಟಿ. ವೀರೇಂದ್ರಕುಮಾರ್, ಬಸವರಾಜಕಟ್ಟಿ, ಹಾಲೇಶಪ್ಪ ಇತರರು ಇದ್ದರು.
ಜಮುರಾ ಕಲಾವಿದರು ಸರ್ಪಭೂಷಣ ಶಿವಯೋಗಿಗಳ ತತ್ವಪದಗಳನ್ನು ಹಾಡಿದರು. ಪ್ರಾಚಾರ್ಯ ತಿಪ್ಪೇಸ್ವಾಮಿ ಸ್ವಾಗತಿಸಿ, ರವಿಕಲಾ ಅವರು ವಂದಿಸಿದರು.