ಯೋಗ ದಿನದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಡಾ.ಚಂದ್ರಕಾAತ್ ಎಸ್.ನಾಗಸಮುದ್ರ, ಡಾ.ಜಿ.ಬಿ.ನಾರಾದಮುನಿ, ಎಂ.ಬಾಬು, ಡಾ.ಎನ್.ಕಾಶಿ, ವಿಜಯಕುಮಾರ್, ಮಲ್ಲಿಕಾರ್ಜುನ್, ಎಂ.ಆರ್.ಮAಜುನಾಥ್ ಇತರರು ಇದ್ದರು.
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಕ್ರೀಡಾಂಗಣ(ಸೈನ್ಸ್ ಕಾಲೇಜು ಮೈದಾನ)ದಲ್ಲಿ ಜೂ.೨೧ರಂದು ಆ ಯೋಜಿಸಿರುವ ೧೨ನೇ ಅಂತಾರಾಷ್ಟೀಯ ಯೋಗ ದಿನಾಚರಣೆ ಯಶಸ್ಸಿಗೆ ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾ ಮಟ್ಟದ ಅಽಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶಿಸಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯೋಗ ಸಂಸ್ಥೆಗಳು, ಸಂಘಟ ನೆಗಳ ಪದಾಽಕಾರಿಗಳು ಮತ್ತು ಸಾರ್ವಜನಿಕರು ಕೈ ಜೋಡಿಸಬೇಕೆಂದು ಕೋರಿದರು.
ಪ್ರತಿ ಬಾರಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತಾರಾಷ್ಟಿçÃಯ ಯೋಗ ದಿನವನ್ನು ಆಚರಿಸಲಾಗುತ್ತಿತ್ತು. ಆದ ರೆ ಅಲ್ಲಿ ಖÁಸಗಿ ಕರ‍್ಯಕ್ರಮದ ಪೆಂಡಾಲ್ ಹಾಕಿರುವುದರಿಂದ, ಸೈನ್ಸ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು.
ಗಣ್ಯರು ಹಾಗೂ ಯೋಗ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ವೇದಿಕೆ ಸಜ್ಜುಗೊಳಿಸಬೇಕು. ಜಾಗ್ರತೆಯಾಗಿ ಅಗತ್ಯ ವೈದ್ಯಕೀಯ ಸಿಬ್ಬಂದಿಯೊAದಿಗೆ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಬೇಕೆಂದು ಸೂಚಿಸಿದರು.
೨೦ರಂದು ಜಾಗÊತಿ ಜಾಥಾ
ಯೋಗ ದಿನಾಚರಣÉ ಪೂರ್ವಭಾವಿಯಾಗಿ ೨೦ರಂದು ನಗರದಲ್ಲಿ ಬÊಹತ್ ಜಾಗÊತಿ ಜಾಥಾ ಏರ್ಪಡಿಸಲಾಗಿದೆ. ಅಂದು ಬೆಳ ಗ್ಗೆ ೭ ಗಂಟೆಗೆ ಡಿಸಿ ಕಚೇರಿ ಆವರಣದಿಂದ ಆರಂಭವಾಗುವ ಜಾಥಾ ಓನಕೆ ಒಬವ್ವ ವÊತ್ತ, ಮದಕರಿ ನಾಯಕರ ವÊತ್ತದ ಮೂ ಲಕ ಸೈನ್ಸ್ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಜಿಲ್ಲೆಯ ಯೋಗ ಸಂಸ್ಥೆಗಳು, ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಹಾಗೂ ನಗರದಲ್ಲಿ ಎಲ್ಲ ಸರ್ಕಾರಿ ಕಚೇರಿಗಳ ಅಽಕಾರಿ, ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಡಿಸಿ ಹೇಳಿದರು.
೨೧ರಂದು ಬೆಳಗ್ಗೆ ೭ರಿಂದ ೭.೪೫ರವರೆಗೆ ಸಾವಿರಕ್ಕೂ ಅಽಕ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವ ರು ಎಂದು ಜಿಲ್ಲಾ ಆಯುಷ್ ಅಽಕಾರಿ ಡಾ.ಚಂದ್ರಕಾAತ ಎಸ್.ನಾಗಸಮುದ್ರ ಹೇಳಿದರು. ಜಿಲ್ಲಾದ್ಯಂತ ಯೋಗ ದಿನದ ಯಶಸ್ವಿ ಗೆ ಸಿದ್ಧತೆಗಳಾತ್ತಿದ್ದು, ಈಗಾಗಲೇ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಸರಣಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿ ದೆ ಎಂದರು.
ಈ ಬಾರಿಯ ಘೋಷ ವಾಕ್ಯ
ಈ ಬಾರಿಯ ಘೋಷವಾಕ್ಯ ಆರೋಗ್ಯಕರ ವÊದ್ಧಾಪ್ಯಕ್ಕಾಗಿ ಯೋಗ ಎಂಬುದಾಗಿದೆ ಎಂದು ಆಯುಷ್ ವೈದ್ಯಾಽಕಾರಿ ಡಾ.ಜಿ.ಬಿ. ನಾರದಮುನಿ ತಿಳಿಸಿದರು. ಹಿರಿಯ ನಾಗರಿಕರಿಗೆ ಯೋಗ ತರಬೇತಿ ನೀಡಲು ವಿಶೇಷ ಆ್ಯಪ್ ಸಿದ್ಧಪಡಿಸಲಾಗಿದೆ. ಆಯುಷ್ ಇ ಲಾಖÉಯಿ ಂದ ಜಿಲ್ಲೆಯ ಪ್ರಮುಖ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜೂನ್ ಮೊದಲ ವಾರದಿಂದ ನಿತ್ಯ ಯೋಗಾ ಭ್ಯಾಸದ ತರಬೇತಿ ನೀಡಲಾಗುತ್ತಿದೆ ಎಂದರು.
ಜಿ.ಪA. ಡಿಎಸ್ ಎಂ.ಬಾಬು, ಡಿಎಚ್‌ಒ ಡಾ.ಎನ್.ಕಾಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖÉ ಉಪನಿರ್ದೇಶಕ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖÉ ಉಪನಿರ್ದೇಶಕ ಮಲ್ಲಿಕಾರ್ಜುನ್, ಡಿಡಿಪಿಐ ಎಂ.ಆರ್.ಮAಜುನಾಥ್ ಮತ್ತಿತರ ಅಽಕಾರಿಗಳು ಇದ್ದರು.