ಮಲ್ಲಾಡಿಹಳ್ಳಿ ಆನಾಥ ಸೇವಾಶ್ರಮದಲ್ಲಿ ೮ರಿಂದ ತಿರುಕ ರಂಗೋತ್ಸವ

ರಾಘವೇಂದ್ರ ಸ್ವಾಮೀಜಿ
ರಾಘವೇಂದ್ರ ಸ್ವಾಮೀಜಿ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಘವೇಂದ್ರ ಸ್ವಾಮೀಜಿ
  • ಶ್ರೀ ಸೂರದಾಸ್‌ಜೀ
  • ಅನಾಥಸೇವಾಶ್ರಮ
ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಆನಾಥ ಸೇವಾಶ್ರಮದಲ್ಲಿ ಜ. ೮ರಿಂದ ೪ ದಿನಗಳ ಕಾಲ ತಿರುಕ ರಂಗೋತ್ಸವ ಜರುಗಲಿದೆ.
ಆಶ್ರಮದ ಟ್ರಸ್ಟ್ ಅಧ್ಯಕ್ಷರು, ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಶ್ರೀ ಸೂರದಾಸ್‌ಜೀ ಅವರ ಪುಣ್ಯರಾಧನೆ ಅಂಗವಾಗಿ ನಿತ್ಯಸಂಜೆ ೫.೩೦ಕ್ಕೆ ಕಾರ್ಯಕ್ರಮ ನಡೆಯಲದೆ.
೮ ರಂದು ಪು.ತಿ. ನರಸಿಂಹಾಚಾರ್ ರಚಿತ, ಬಿ.ವಿ.ಕಾರಂತ ಸಂಗೀತ, ವೈ.ಡಿ. ಬದಾಮಿ ಮತ್ತು ಮಂಜುಳಾ ಬದಾಮಿ ನಿರ್ದೇ ಶನದಲ್ಲಿ ಅನಾಥ ಸೇವಾಶ್ರಮದ ರಾಘವೇಂದ್ರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಗೋಕುಲ ನಿರ್ಗಮನ ನಾಟಕ ಪ್ರ ದರ್ಶಿಸಲಿದ್ದಾರೆ. ೯ ರಂದು ಪದ್ಮಶ್ರೀ ಜಿ.ಬಿ. ಜೋಶಿ ರಚಿಸಿದ ಹರಿವಿನಾಯಕ ಸಂಗೀತ, ಹುಲಗಪ್ಪ ಕಟ್ಟಿಮನಿ ನಿರ್ದೇಶನದ ತೀರ್ಥಹಳ್ಳಿಯ ನಟಮಿತ್ರರ ಹವ್ಯಾಸಿ ಕಲಾ ಸಂಘದ ಕಲಾವಿದರು `ಆ ಊರು ಈ ಊರು'ನಾಟಕ ಪ್ರದರ್ಶಿಸಲಿದ್ದಾರೆ.
೧೦ ರಂದು ಡಾ.ಎಂ. ಬೈರೇಗೌಡ ರಂಗರೂಪ ನೀಡಿರುವ ಜೋಸೆ-ï ನೀನಾಸಂ ನಿರ್ದೇಶನ, ನಾಗೇಶ್ ಶ್ರೀನಿವಾಸ್ ಇಂದ್ರಜೆ ಸಂಗೀತ ನೀಡಿರುವ ಸ್ವಪ್ನ ಸಿದ್ಧಿ ನಾಟಕವನ್ನು ರಾಷ್ಟçಕವಿ ಕುವೆಂಪು ನಾಟಕ ಗುಚ್ಛ ತಂಡದವರು, ೧೧ರಂದು ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪ ರಚಿಸಿರುವ ನಾಗರಾಜ್ ಮತ್ತು ಶರಣಕುಮಾರ ಸಂಗೀತದ ವೈ.ಡಿ. ಬದಾಮಿ ಹಾಗೂ ಮಂಜುಳಾ ಬದಾಮಿ ನಿರ್ದೇಶನದ ತಿರುಕಯಾನ ನಾಟಕವನ್ನು ಆಶ್ರಮದ ನೌಕರರು ಮತ್ತು ಮಕ್ಕಳು ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ ಎಂದು ಅನಾಥಸೇವಾಶ್ರಮದ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net