ಒಂದೇ ರಾತ್ರಿ ಎರಡು ಮನೆಗಳಲ್ಲಿ ಆಭರಣ, ನಗದು ದೋಚಿದ ಖದೀಮರು thieves

thieves ಕೊಂಡ್ಲಹಳ್ಳಿಯ ಮನೆಯೊಂದರ ಬೀರುವಿನ ಬಾಗಿಲು ಮುರಿದು ನಗ, ನಗದು ದೋಚಿರುವ ದೃಶ್ಯ.
thieves ಕೊಂಡ್ಲಹಳ್ಳಿಯ ಮನೆಯೊಂದರ ಬೀರುವಿನ ಬಾಗಿಲು ಮುರಿದು ನಗ, ನಗದು ದೋಚಿರುವ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಕಳ್ಳರ ಹಾವಳಿಗೆ ಬೆಚ್ಚಿಬಿದ್ದ ಕೊಂಡ್ಲಹಳ್ಳಿ ಗ್ರಾಮಸ್ಥರು
  • ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲು
  • ಪೊಲೀಸರ ಭೇಟಿ ಹಾಗೂ ಪರಿಶೀಲನೆ

ಕೊಂಡ್ಲಹಳ್ಳಿ:ಗ್ರಾಮದಲ್ಲಿಇತ್ತೀಚೆಗೆ ಒಂದೇ ರಾತ್ರಿಯಲ್ಲಿಎರಡು ಮನೆಗಳಲ್ಲಿ ಕಳವು ಪ್ರಕರಣನಡೆದಿದ್ದು, ಲಕ್ಷಾಂತರಮೌಲ್ಯದ ಚಿನ್ನಾಭರಣ ಹಾಗೂ ನಗದುದೋಚಲಾಗಿದೆ. ಈ ಸರಣಿಕಳ್ಳತನ ಪ್ರಕರಣಗಳು ಗ್ರಾಮಸ್ಥರನ್ನುತೀವ್ರ ಆತಂಕಕ್ಕೀಡು ಮಾಡಿವೆ. thieves

ಟೈಲರ್ಮನೆಯಲ್ಲಿ 5.80ಲಕ್ಷರೂ.ಮೌಲ್ಯದಕಳವು ಗ್ರಾಮದ ಸಿನಿಮಾ ಬಸ್ ನಿಲ್ದಾಣವೃತ್ತದಲ್ಲಿರುವ ಕುಂಬಾರ ಟೈಲರ್ಅಂಜಿನಪ್ಪ ಅವರ ಕುಟುಂಬದವರುಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆತೆರಳಿದ್ದರು.ಇದೇಸಮಯ ಸಾಧಿಸಿದ ಕಳ್ಳರು,ರಾತ್ರಿಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ.

ಬೀರುವಿನಲ್ಲಿದ್ದ5.80 ಲಕ್ಷರೂ.ಮೌಲ್ಯದ40 ಗ್ರಾಂಬಂಗಾರದ ಮಾಂಗಲ್ಯ ಸರ,13 ಗ್ರಾಂತೂಕದ ಕಿವಿಯೋಲೆ,ಇತರಆಭರಣಗಳು ಹಾಗೂ 20ಸಾವಿರರೂ.ನಗದುದೋಚಿದ್ದಾರೆ.

ಶಿಕ್ಷಕರಮನೆಗೂ ಕನ್ನ

ಅಂಜಿನಪ್ಪ ಅವರಮನೆಯಿಂದ ಕೇವಲ 200ಮೀಟರ್ದೂರದಲ್ಲಿರುವ ಹನುಮಂತನಹಳ್ಳಿರಸ್ತೆಯ ಶಿಕ್ಷಕ ಗುರುಸ್ವಾಮಿಅವರ ಮನೆಯ ಬೀಗವನ್ನೂ ಮುರಿದಿರುವಖದೀಮರು,ಬರೋಬ್ಬರಿ120 ಗ್ರಾಂಬಂಗಾರದ ಆಭರಣಗಳನ್ನು ಕಳವುಮಾಡಿದ್ದಾರೆ.

ಪೊಲೀಸರಭೇಟಿ ಹಾಗೂ ಪರಿಶೀಲನೆ

ವಿಷಯತಿಳಿದ ತಕ್ಷಣ ಚಿತ್ರದುರ್ಗದಿಂದಶ್ವಾನದಳ,ಬೆರಳಚ್ಚುತಜ್ಞರು ಹಾಗೂ ಪೊಲೀಸರ ವಿಶೇಷ

ತಂಡ ಭೇಟಿ ನೀಡಿ ಸ್ಥಳ ಮಹಜರು ಹಾಗೂಪರಿಶೀಲನೆ ನಡೆಸಿವೆ.

ಸ್ಥಳಕ್ಕೆಚಳ್ಳಕೆರೆ ಡಿವೈಎಸ್‌ಪಿಸತ್ಯನಾರಾಯಣರಾವ್,ಮೊಳಕಾಲ್ಮೂರುಸಿಪಿಐ ನಾಗರಾಜ್,ಪಿಎಸ್‌ಐಮಹೇಶ್ ಲಕ್ಷ್ಮಣ್ ಭೇಟಿ ನೀಡಿಪರಿಶೀಲನೆ ನಡೆಸಿದರು.ಈ ಕುರಿತುಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net