ಇರಬೇಕು ಮನೆಗೊಂದು ಮರ, ಊರಿಗೊಂದು ವನ

 ಚಿತ್ರದುರ್ಗ ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಮಹಂತೇಶ್ ಆರ್. ಕಮ್ಮಾರ್ ಇತರರು ಇದ್ದರು.
ಚಿತ್ರದುರ್ಗ ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಮಹಂತೇಶ್ ಆರ್. ಕಮ್ಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯ
  • ಸಾಮೂಹಿಕ ಕಲ್ಯಾಣ ಮಹೋತ್ಸವ,
  • ವಿಶ್ವ ಪರಿಸರ ದಿನಾಚರಣೆ
ಚಿತ್ರದುರ್ಗ: ಮನೆಗೊಂದು ಮರ, ಊರಿಗೊಂದು ವನ ಇರಬೇಕು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬ ಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ೩೬ನೇ ವರ್ಷದ ೬ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ, ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸರ್ವ ಸಮುದಾಯಗಳು ಒಳಗೊಂಡAತೆ ೨೦-೨೫ ಸಾವಿರ ಉಚಿತ ಸರಳ ಸಾಮೂಹಿಕ ಕಲ್ಯಾಣ ನೆರವೇರಿಸಿದ ಕೀರ್ತಿ ಶ್ರೀ ಮಠದ್ದಾಗಿದೆ. ಇಲ್ಲಿ ವಿವಾಹವಾಗುತ್ತಿರುವ ವಧು-ವರರು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸಾನ್ನಿಧ್ಯವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಇರುವುದೊಂದೇ ಭೂಮಿ, ಅದನ್ನು ನಾ ವು ಜತನದಿಂದ ಕಾಪಾಡಿಕೊಳ್ಳಬೇಕಾಗಿದೆ. ಅನೇಕ ಗ್ರಹಗಳಿದ್ದರೂ ಅಲ್ಲಿ ಮನುಷ್ಯ ಬದುಕಲಾಗದು. ಜನಸಂಖ್ಯೆ ಹೆಚ್ಚುತ್ತಿದೆ. ಆದರೆ, ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.
ಡಿಸಿಎಫ್ ಜಿ. ಗೋಪ್ಯಾನಾಯ್ಕ ಮಾತನಾಡಿ, ಸ್ವಾತಂತ್ರ‍್ಯಾನAತರ ದೇಶದಲ್ಲಿ ಅರಣ್ಯ ಸಂಪತ್ತು ಕ್ಷೀಣಿಸುತ್ತಾ ಬಂದಿದೆ. ತಾಪ ಮಾನ ಹೆಚ್ಚಳ, ಮಳೆ ಕೊರತೆ ಉಂಟಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂ ಟಾಗುತ್ತಿದೆ. ಯಾರು ಗಿಡ-ಮರಗಳನ್ನು ಕಾಳಜಿಯಿಂದ ಪೋಷಿಸುತ್ತಾರೋ ಅವರಿಗೆ ದೈವ ಕÊಪೆ ಸದಾ ಇರಲಿದೆ ಎಂದು ಅಭಿ ಪ್ರಾಯಪಟ್ಟರು.
ಈವರೆಗೆ ಸಾವಿರಾರು ಸಸಿಗಳನ್ನು ನೆಟ್ಟಿರುವ ವೃಕ್ಷ ಪ್ರೇಮಿ ಸಿದ್ದರಾಜು ಜೋಗಿ ಅವರನ್ನು ಸನ್ಮಾನಿಸಲಾಯಿತು. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ೧೨ ನವ ಜೋಡಿಗಳು, ಮಠದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆ ರೆದರು.
ಬಸವ ಮಹಾಂತ ಸ್ವಾಮೀಜಿ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಮಹಂತೇಶ್ ಆರ್. ಕಮ್ಮಾರ್, ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net