ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹತ್ತು ಬೆಳದಿಂಗಳು ವಿಶೇಷ ಕಾರ್ಯಕ್ರಮದಲ್ಲಿ ಡಾ.ಕೆ.ಎನ್. ಮಹೇಶ್, ಡಾ. ಕೆ.ಎಂ. ವೀರೇಶ್, ಡಾ.ಬಿ.ಟಿ. ಲೋಲಾಕ್ಷಮ್ಮ, ಟಿ. ಈಶ್ವರಪ್ಪ, ಎಂ. ಕಾರ್ತಿಕ್, ಡಾ.ಜಿ. ಹನುಮಂತರೆಡ್ಡಿ, ಡಾ. ಮಂಜುಳಾ, ಪ್ರೊ.ಎಂ.ಆರ್. ಜಯಲಕ್ಷಿ÷್ಮÃ ಇತರರು ಇದ್ದರು.
ಚಿತ್ರದುರ್ಗ: ಶಿಕ್ಷಕ ವÊತ್ತಿಯಲ್ಲಿ ನೆಮ್ಮದಿ, ಸಂತೋಷ ದೊರಯುತ್ತದೆ ಎಂದು ಮುಖ್ಯ ಶಿಕ್ಷಕ ಡಾ. ಕೆ. ಎನ್. ಮಹೇಶ್ ಹೇಳಿದರು.
ನಗರದ ಪಿಳ್ಳೇಕೆರೆನಹಳ್ಳಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಹತ್ತು ಬೆಳದಿಂಗಳ ವಿಶೇಷ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸುವುದು ಹೇಗೇ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಸಂಪತ್ತನ್ನು ಗಳಿಸಬೇಕೆಂದರೆ ಈ ವೃತ್ತಿಗೆ ಬರುವುದು ಬೇಡ, ಸೇವಾ ಮನೋಭಾವದಿಂದ ಈ ಕೆಲಸಕ್ಕೆ ಬರಬೇಕಿದೆ ಎಂದರು.
ಈಚಿನ ದಿನಗಳಲ್ಲಿ ಭೋದನೆಗಿಂತ ಹೆಚ್ಚಿನ ಸಮಯವನ್ನು ವಿವಿಧ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಶಿಕ್ಷಕರಿಗೆ ಕಾಯಕದ ಮೇಲೆ ನಿಷ್ಠೆ ಇರಬೇಕು. ಒಂದು ಶಾಲೆ ಯಶಸ್ಸು, ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವೈಚಾರಿಕ ಪರಿಷತ್ ಜಿಲ್ಲಾಧ್ಯಕ್ಷೆ ಡಾ.ಬಿ.ಟಿ. ಲೋಲಾಕ್ಷಮ್ಮ ಮಾತನಾಡಿ, ದೇಶದ ಭಾವಿ ಪ್ರಜೆಗಳನ್ನು ನಿರ್ಮಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕರು ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇ ಕು. ಇವತ್ತು ಓದು ಕಡಿಮೆಯಾಗಿ ಮೊಬೈಲ್ ಬಳಕೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಟಿ. ಈಶ್ವರಪ್ಪ, ಪರಿಸರ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಂ. ಕಾರ್ತಿಕ್, ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ. ಹನುಮಂತರೆಡ್ಡಿ, ಕೆಎಂಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಡಾ. ಮಂಜುಳಾ ಇತರರು ಇದ್ದರು.
ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯೆ ಪ್ರೊ.ಎಂ.ಆರ್. ಜಯಲಕ್ಷಿ÷್ಮÃ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಪ್ರಾರ್ಥಿಸಿದರು. ದೀಪಾ ಸ್ವಾಗತಿಸಿ, ಮಲ್ಲಿಕಾರ್ಜನ ಗೌಡ ವಂದಿಸಿದರು, ವೈಷ್ಣವಿ ನಿರೂಪಿಸಿದರು.