ಇಂಜಿನಿಯರಿAಗ್ ಕಲಿತವರಿಗೆ ವೈದ್ಯಕೀಯ ಕ್ಷೇತ್ರದಲ್ಲಿದೆ ಅವಕಾಶ
ಚಿತ್ರದುರ್ಗ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿAಗ್ ವಿಭಾಗ ಹಾಗೂ ಐಎಸ್‌ಟಿಇ ಸ್ಟೂಡೆಂಟ್ ಚಾಪ್ಟರ್‌ನಿಂದ `ಇಂಜಿನಿರ‍್ಸ್ ಇನ್ ಮೆಡಿಸಿನ್' ವಿಷಯದ ಕುರಿತು ಉಪನ್ಯಾಸ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐಎಸ್‌ಟಿಇ ಸ್ಟೂಡೆಂಟ್ ಚಾಪ್ಟರ್
ಕೃತಕ ಬುದ್ದಿಮತ್ತೆ
ರೋಬೋಟಿಕ್ಸ್ ತಂತ್ರಜ್ಞಾನ
ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿAಗ್ ವಿಭಾಗ ಹಾಗೂ ಐಎಸ್‌ಟಿಇ ಸ್ಟೂಡೆಂಟ್ ಚಾಪ್ಟರ್‌ನಿಂದ `ಇಂಜಿನಿರ‍್ಸ್ ಇನ್ ಮೆಡಿಸಿನ್' ವಿಷಯದ ಕುರಿತು ಉಪನ್ಯಾಸ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ.ಪಿ.ಬಿ. ಭರತ್, ವೈದ್ಯಕೀಯ ಕ್ಷೇತ್ರದಲ್ಲಿ ಇಂಜಿನಿಯರಿAಗ್ ವಿದ್ಯಾರ್ಥಿ ಗಳಿಗೆ ಅನೇಕ ಅವಕಾಶಗಳಿವೆ. ಕೃತಕ ಬುದ್ದಿಮತ್ತೆ(ಎಐ)ಆರೋಗ್ಯ ಕ್ಷೇತ್ರದ ಪರಿವರ್ತನೆಗೆ ವೇಗ ನೀಡುತ್ತಿದೆ. ವೈದ್ಯಕೀಯ ಉಪ ಕರಣಗಳು, ರೋಬೋಟಿಕ್ಸ್ ತಂತ್ರಜ್ಞಾನ, ರೋಗ ಪತ್ತೆ ಮತ್ತು ನಿರ್ಣಯದ ವಿಷಯದಲ್ಲಿ ಇಂಜಿನಿರ‍್ಸ್ಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.
ಬಾಪೂಜಿ ತಾಂತ್ರಿಕ ಮಹಾವಿದ್ಯಾಲದ ಸಹ ಪ್ರಾಧ್ಯಾಪಕ ಡಾ.ಎಲ್.ಎಚ್. ಅಂಜನೇಯ ಉಪನ್ಯಾಸ ನೀಡಿದರು. ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಎ.ಎಂ. ರಾಜೇಶ,ಪ್ರೊ.ಎಸ್. ರೂಪಾ, ಪ್ರೊ.ಟಿ. ಸುಧಾ ಇತರರು ಇದ್ದರು. ಅಂಕಿತ್ ಸ್ವಾಗತಿಸಿ, ಲಿಖಿತಾ ವಂದಿಸಿದರು. ಕೇಸರ ಮಾಲನ್ ನಿರೂಪಿಸಿದರು.